'ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಭಿವೃದ್ಧಿ ಕ್ರಾಂತಿ'

By Kannadaprabha News  |  First Published Sep 19, 2021, 2:38 PM IST

*  ದೇಶದಲ್ಲಿ ಕುಸಿಯುತ್ತಿರುವ ಜನರ ಜೀವನಮಟ್ಟ 
*  ಯುಪಿಎ ಸರ್ಕಾರ ಮಾಡಿದ ಎಲ್ಲ ಜನಪರ ಕಾರ್ಯಕ್ರಮಗಳನ್ನು ನಿಲ್ಲಿಸಿದ ಬಿಜೆಪಿ
*  ಕೊರೋನಾ ಹೆಸರಲ್ಲಿ ಜನರನ್ನೇ ಸುಲಿಯುತ್ತಿರುವ ಬಿಜೆಪಿ ಸರ್ಕಾರ 
 


ಕೊಪ್ಪಳ(ಸೆ.19): ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯ ಕ್ರಾಂತಿಯೇ ಆಗಿತ್ತು. ಅದು ಮತ್ತೆ ಮರುಕಳಿಸಲು ಜನರು ಜಾಗೃತರಾಗಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. 
ಅವರು ಭಾಗ್ಯನಗರದ ವಾರ್ಡ್‌ 2, 7, 8, 12 ಮತ್ತು 14ರಲ್ಲಿ ಶನಿವಾರ ಸುಮಾರು .64 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, 7ನೇ ವಾರ್ಡಿನ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಮಾತನಾಡಿದರು.

ದೇಶದಲ್ಲಿ ಇಂಧನ, ಆಹಾರ ಧಾನ್ಯ ಸೇರಿ ಎಲ್ಲ ಬೆಲೆಗಳು ಏರುತ್ತಿದ್ದು, ಜನರ ಜೀವನಮಟ್ಟ ಕುಸಿಯುತ್ತಿದೆ, ಯುಪಿಎ ಸರ್ಕಾರ ಮಾಡಿದ ಎಲ್ಲ ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ನಿಲ್ಲಿಸಿದ್ದು, ಕೊರೋನಾ ಹೆಸರಲ್ಲಿ ಜನರನ್ನೇ ಸುಲಿಯುತ್ತಿದ್ದಾರೆ ಎಂದರು.

Latest Videos

undefined

'ಕೊನೆಯ ತನಕ ಸಿದ್ದರಾಮಯ್ಯ ಅವರ ಜೊತೆಗೆ ಬಂಡೆಯಂತೆ ನಿಲ್ಲುವೆ'

ಜಿಪಂ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ ಮಾತನಾಡಿದರು. ತಾಪಂ ಮಾಜಿ ಸದಸ್ಯ ದಾನಪ್ಪ ಕವಲೂರ ಮಾತನಾಡಿದರು. ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ಜರುಗಿದವು. .5 ಲಕ್ಷದಲ್ಲಿ 2 ನೇ ವಾರ್ಡಿನ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, .18.54 ಲಕ್ಷದಲ್ಲಿ 7ನೇ ವಾರ್ಡಿನ ಸಿಸಿ ಚರಂಡಿ ಮತ್ತು ಸ್ಲಾ್ಯಬ್‌ ನಿರ್ಮಾಣ, .19 ಲಕ್ಷದಲ್ಲಿ 8ನೇ ವಾರ್ಡಿನಲ್ಲಿ ಸಿಸಿ ಚರಂಡಿ ಸ್ಲಾ್ಯಬ್‌ ಮತ್ತು ಸಿಡಿ ನಿರ್ಮಾಣ, .9 ಲಕ್ಷದಲ್ಲಿ 12ನೇ ವಾರ್ಡಿನ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, .12.50 ಲಕ್ಷದಲ್ಲಿ 14ನೇ ವಾರ್ಡಿನಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ನಗರಸಭೆ ಸದಸ್ಯ ಅಕ್ಬರ್‌ಪಾಶಾ ಪಲ್ಟನ್‌, ಅಜೀಮುದ್ದಿನ್‌ ಅತ್ತಾರ್‌, ನಗರಸಭೆ ಮಾಜಿ ಗವಿಸಿದ್ದಪ್ಪ ಚಿನ್ನೂರ್‌, ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ಎಂ. ಪಾಷಾ ಕಾಟನ್‌, ಮಾಜಿ ಜಿಪಂ ಸದಸ್ಯ ಪ್ರಸನ್ನ ಗಡಾದ್‌, ಮುಖಂಡರುಗಳಾದ ಕೆ.ಎಂ. ಸೈಯ್ಯದ್‌, ಪಪಂ ಮಾಜಿ ಸದಸ್ಯರಾದ ತುಕಾರಾಮಪ್ಪ ಗಡಾದ, ಮಂಜುನಾಥ ಜಿ. ಗೊಂಡಬಾಳ, ಹೊನ್ನೂರಸಾಬ್‌ ಭೈರಾಪೂರ, ರಮೇಶ ಹ್ಯಾಟಿ, ಗಂಗಾಧರ್‌ ಕಬ್ಬೇರ್‌, ಯಶೋಧಾ ಮರಡಿ, ಮಂಜುನಾಥ ಸಾಲಿಮಠ, ತಾರಾಬಾಯಿ ಹಬೀಬ, ಸುರೇಶ ದರಗದಕಟ್ಟಿ, ಪಪಂ ಮುಖ್ಯಾಧಿಕಾರಿ ಸುರೇಶ ಬಬಲಾದ, ಸಮುದಾಯ ಸಂಘಟನಾಧಿಕಾರಿ ಮಂಗಳಾ ಕುಲಕರ್ಣಿ, ಕಿರಿಯ ಆರೋಗ್ಯ ನಿರೀಕ್ಷಕಿ ಅಕ್ಕಮಹಾದೇವಿ, ಜೆಇ ಸೋಮಪ್ಪ, ಮುಖಂಡರಾದ ಮಹಾದೇವಪ್ಪ ಎರೆ, ಶಿವಣ್ಣ ಗೌಡ್ರ, ಯಮನಪ್ಪ ತಂಬ್ರಳ್ಳಿ, ಭೋಗಪ್ಪ ಡಾಣಿ, ಚನ್ನಪ್ಪ ತಟ್ಟಿ, ಅಶೋಕ ಗೋರಂಟ್ಲಿ ಮುಂತಾದವರು ಇದ್ದರು.
 

click me!