ಮೈಸೂರು (ಸೆ.19): ಕೊನೆಯ ತನಕ ಸಿದ್ದರಾಮಯ್ಯ ಅವರ ಜೊತೆಗೆ ಬಂಡೆಯಂತೆ ನಿಲ್ಲುವವನು ನಾನೊಬ್ಬನೇ, ಅಪ್ರಚಾರಕ್ಕೆ ಕಿವಿಗೋಡಬೇಡಿ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಕಾರ್ಯರ್ತರಲ್ಲಿ ಮನವಿ ಮಾಡಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಚಾಮುಂಡೇಶ್ವರಿ ಮತ್ತು ಇಲವಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮಹದೇವಪ್ಪ ಹಣದ ವ್ಯವಹಾರ ಮಾಡಿದ್ರು ಅಂಥೆಲ್ಲಾ ಮಾತಾಡಿದ್ದೀರಿ. ಎಲ್ಲಾ ರೀತಿಯ ಕಥೆ, ಬುರುಡೆ ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಿದ್ದೀರಿ. ನನ್ನ ಮತ್ತು ಸಿದ್ದರಾಮಯ್ಯ ಬಗ್ಗೆ ಗೊತ್ತೇನಯ್ಯಾ ನಿನಗೆ ಎಂದು ಮುಖಡರೊಬ್ಬರನ್ನು ನೋಡುತ್ತಾ ಪ್ರಶ್ನಿಸಿದರು.
ಚುನಾವಣೆಗೆ 2013ರ ತಂತ್ರ ಪ್ರಯೋಗಿಸಲು ಸಿದ್ದು ಪ್ಲಾನ್..!
ಬಾಯಿಗೆ ಬಂದ ಹಾಗೆ ಹಿಂದೆ ಮುಂದೆ ಮಾತನಾಡಬೇಡಿ. ನನ್ನ ಮತ್ತು ಸಿದ್ದರಾಮಯ್ಯ ಬಗ್ಗೆ ಏನು ಗೊತ್ತಿದೆ? ನಾವಿಬ್ಬರೂ ವಿಚಾರಗಳೊಂದಿಗೆ ಚಳವಳಿ ಕಟ್ಟಿ ರಾಜಕೀಯಕ್ಕೆ ಬಂದವರು, ಹುಡುಗಾಟಿಕೆ ಮಾಡಲು ರಾಜಕೀಯಕ್ಕೆ ಬಂದಿಲ್ಲ.
ನಂಬಿಕೆ ಮತ್ತು ಸ್ನೇಹಕ್ಕೆ ಅರ್ಹ ವ್ಯಕ್ತಿಯೆಂದರೇ ಅದು ಸಿದ್ದರಾಮಯ್ಯ. ಮುಂಬರುವ ಚುನಾವಣೆಯಲ್ಲಿ ವೇಳೆಗೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಏನೇ ಬದಲಾವಣೆಯಾದರೂ, ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಸಿದ್ದರಾಮಯ್ಯ ಎಂದಿಗೂ ಕೈ ಬಿಡುವುದಿಲ್ಲ ಎಂದು ಅವರು ತಿಳಿಸಿದರು.