ಕಾಮಾಂಡಹಳ್ಳಿ ಕೆರೆಯಲ್ಲಿನ ಮಣ್ಣು ಕೇರಳಕ್ಕೆ ರವಾನೆ; ತಾಲೂಕು ಆಡಳಿತ ಮೌನ Soil Mafia

Published : Nov 09, 2026, 07:27 AM IST
Lake Soil

ಸಾರಾಂಶ

ಬಂಗಾರಪೇಟೆ ತಾಲೂಕಿನ ಕಾಮಾಂಡಹಳ್ಳಿ ಕೆರೆ ಮತ್ತು ಗುಂಡು ತೋಪು ಜಾಗದಲ್ಲಿ ಅಕ್ರಮ ಮಣ್ಣು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ. ಕೆರೆಯ ಮಣ್ಣನ್ನು ಹಗಲು-ರಾತ್ರಿ ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದರೂ ಆಡಳಿತ ಮೌನ ವಹಿಸಿದೆ.

ಕೋಲಾರ: ಬಂಗಾರಪೇಟೆ ತಾಲೂಕಿನ ಮಾವಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಾಂಡಹಳ್ಳಿ ಕೆರೆ ಹಾಗೂ ಗುಂಡು ತೋಪು ಜಾಗವು ಭೂಗಳ್ಳರು ಮತ್ತು ಅಕ್ರಮ ಮಣ್ಣು ಮಾಫಿಯಾದವರ ಕಪಿಮುಷ್ಟಿಗೆ ಸಿಲುಕಿದ್ದು, ನೈಸರ್ಗಿಕ ಸಂಪತ್ತಿನ ದರೋಡೆ ಎಲ್ಲಗಿಲ್ಲದೆ ಸಾಗಿದ್ದರೂ ತಾಲೂಕು ಆಡಳಿತ ಮೌನಕ್ಕೆ ಜಾರಿರುವುದು ಗ್ರಾಮಸ್ಥರ ಟೀಕೆಗೆ ಗುರಿಯಾಗಿದೆ.

ಕೆರೆಯ ಫಲವತ್ತಾದ ಮಣ್ಣನ್ನು ಹಗಲು-ರಾತ್ರಿ ಎನ್ನದೆ ಲಾರಿಗಳ ಮೂಲಕ ಅನ್ಯ ರಾಜ್ಯವಾದ ಕೇರಳಕ್ಕೆ ಕೊಂಡೊಯ್ಯಲಾಗುತ್ತಿದ್ದು, ಸ್ಥಳೀಯ ಕೃಷಿ ಹಾಗೂ ಪರಿಸರ ಹಿತಾಸಕ್ತಿಗಳು ತೀವ್ರ ಆತಂಕಕ್ಕೀಡಾಗಿವೆ.

ಗ್ರಾಮಸ್ಥರ ತೀವ್ರ ಆಕ್ರೋಶ

ಗ್ರಾಮದ ಜೀವನಾಡಿಯಾಗಿರುವ ಕೆರೆಯ ಅಂಗಳ ಹಾಗೂ ಸರ್ಕಾರಿ ಗುಂಡು ತೋಪು ಜಾಗವನ್ನು ಕೆಲ ಪ್ರಭಾವಿಗಳು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆರೆಯ ಸ್ವರೂಪವೇ ಬದಲಾಗುವ ರೀತಿಯಲ್ಲಿ ಯಂತ್ರೋಪಕರಣಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ಮಣ್ಣನ್ನು ಅಗೆದು ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಇದರಿಂದ ಅಂತರ್ಜಲ ಕುಸಿಯುವುದರ ಜತೆಗೆ, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೂ ಸಹ ತತ್ವಾರ ಉಂಟಾಗಿದೆ.

ರಾಜಾರೋಷವಾಗಿ ಮಣ್ಣು ಸಾಗಾಣಿಕೆ

ದಿನದ 24 ಗಂಟೆಯೂ ಜೆಸಿಬಿ ಹಾಗೂ ಲಾರಿಗಳ ಮೂಲಕ ರಾಜಾರೋಷವಾಗಿ ಮಣ್ಣು ಸಾಗಾಣಿಕೆ ನಡೆಯುತ್ತಿದ್ದರೂ, ಸಂಬಂಧಪಟ್ಟ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ. ಸ್ಥಳೀಯರ ಎಚ್ಚರಿಕೆಯನ್ನೂ ಲೆಕ್ಕಿಸದೆ ಮಾಫಿಯಾ ತನ್ನ ಕೃತ್ಯವನ್ನು ಮುಂದುವರಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೂಡಲೇ ಜಿಲ್ಲಾಡಳಿತ ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಕ್ರಮ ಮಣ್ಣು ಸಾಗಾಣಿಕೆಯನ್ನು ತಡೆಯಬೇಕು. ಕೆರೆ ಹಾಗೂ ಗುಂಡು ತೋಪು ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡು ನೈಸರ್ಗಿಕ ಸಂಪತ್ತನ್ನು ರಕ್ಷಿಸಬೇಕು ಎಂದು ಕಾಮಾಂಡಹಳ್ಳಿ ಗ್ರಾಮಸ್ಥರಾದ ನಾನು ಮತ್ತು ಸಂಪತ್ ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಆ್ಯಂಬುಲೆನ್ಸ್‌ಗಳು ಟೈಂಗೆ ಸರಿಯಾಗಿ ಬರದಿದ್ರೆ ₹3000 ದಂಡ: ಆರೋಗ್ಯ ಸಚಿವ ಯು.ಟಿ. ಖಾದರ್‌
ಮಹಾರಾಷ್ಟ್ರದಿಂದ ಉಜ್ಜಿನಿ ಬಳಿ ಹೊಸ ಡ್ಯಾಂಗೆ ರಾಜ್ಯ ವಿರೋಧ, ಇದು ಕೃಷ್ಣಾ ನ್ಯಾಯಾಧಿಕರಣ ತೀರ್ಪಿಗೆ ವಿರುದ್ಧ