ಟೊಮೆಟೋ ಬೆಳೆಗೆ ಚುಕ್ಕಿ ರೋಗ ಕಾಟ : ರೈತರಲ್ಲಿ ಆತಂಕ

By Kannadaprabha News  |  First Published Jul 17, 2021, 2:42 PM IST
  • ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಕೋಲಾರ 
  • ಟೊಮೆಟೋ ಬೆಳೆಗೆ ಚುಕ್ಕಿ ರೋಗ ತಗುಲಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲು
  • ಸದ್ಯ ಜಿಲ್ಲೆಯ ಸುಮಾರು 16 ಸಾವಿರ ಹೆಕ್ಟೇರ್‌ ಭೂಪ್ರದೇಶದಲ್ಲಿ ಟೊಮೆಟೋ ಬೆಳೆ 

ಕೋಲಾರ (ಜು.17):  ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಟೊಮೆಟೋ ಬೆಳೆಗೆ ಚುಕ್ಕಿ ರೋಗ ತಗುಲಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಸದ್ಯ ಜಿಲ್ಲೆಯ ಸುಮಾರು 16 ಸಾವಿರ ಹೆಕ್ಟೇರ್‌ ಭೂಪ್ರದೇಶದಲ್ಲಿ ಟೊಮೆಟೋ ಬೆಳೆ ಇದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ವರ್ಷಕ್ಕೆ 200 ಕೋಟಿಗೂ ಹೆಚ್ಚು ಟೊಮೆಟೋ ವಹಿವಾಟು ನಡೆಯತ್ತದೆ.

Latest Videos

undefined

ಟೊಮೆಟೋ ಬೆಳೆದು ಕಣ್ಣೀರಿಟ್ಟ ರೈತರು : ಉತ್ಪಾದನೆಯಲ್ಲೂ ಏರಿಕೆ

ಜಿಲ್ಲೆಯಲ್ಲಿ ಏಳೆಂಟು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಇದರಿಂದ ವಾತಾವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚಿದ್ದು, ಟೊಮೆಟೋ ಬೆಳೆಯಲ್ಲಿ ಚುಕ್ಕಿ ರೋಗ ಕಾಣಿಸಿಕೊಂಡಿದೆ.

ಕಾಯಿಯ ಮೇಲೆ ಕಪ್ಪು ಚುಕ್ಕೆಗಳು

ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಟೊಮೆಟೋ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಚುಕ್ಕಿ ರೋಗಬಾಧಿತ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ. ಕಾಯಿಗಳ ಮೇಲೆ ಕಪ್ಪು ಚುಕ್ಕಿಗಳಾಗಿದ್ದು, ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿವೆ. ಚುಕ್ಕಿ ರೋಗಕ್ಕೆ ಕಾರಣವಾಗಿರುವ ಶಿಲೀಂಧ್ರಗಳು ಗಿಡದ ಎಲೆಗಳನ್ನು ತಿನ್ನುತ್ತಿದ್ದು, ಕಾಂಡದ ಭಾಗ ಕೊಳೆತು ಗಿಡಗಳು ಸೊರಗುತ್ತಿವೆ. ಬೆಳೆಗಾರರಿಗೆ ಇದೀಗ ಚುಕ್ಕಿ ರೋಗ ದೊಡ್ಡ ಪೆಟ್ಟು ಕೊಟ್ಟಿದೆ. ಕಳೆದ ಒಂದು ತಿಂಗಳಿನಿಂದಲೂ ಟೊಮೆಟೋಗೆ ಬೆಲೆ ಇರಲಿಲ್ಲ,

ಕೋಲಾರ : ಟೊಮೆಟೋ ವಹಿವಾಟು ತಂದ ಡೆಲ್ಟಾ ಭೀತಿ

ರೋಗಕ್ಕೆ ಕೀಟನಾಶಕಗಳನ್ನು ಸಿಂಪಡಿಸುವುದಕ್ಕೂ ಮಳೆ ಬಿಡುವು ಕೊಡುತ್ತಿಲ್ಲ, ಕೆಲ ರೈತರು ಬೆಳೆಗೆ ವಿವಿಧ ಬಗೆಯ ಕೀಟನಾಶಕ ಸಿಂಪಡಿಸಿದರೂ ಅದರ ಹಿಂದೆಯೇ ಮಳೆ ಬರುತ್ತಿರುವುದರಿಂದ ರೋಗ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ಮೂರ್ನಾಲ್ಕು ದಿನ ಕಳೆಯುವಷ್ಟರಲ್ಲಿ ಪುನಃ ರೋಗ ಕಾಣಿಸಿಕೊಳ್ಳುತ್ತಿದೆ. ಅಕ್ಕಪಕ್ಕದ ಜಮೀನುಗಳ ಟೊಮೆಟೋ ಬೆಳೆಗೂ ರೋಗ ಹಬ್ಬುತ್ತಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಸೀಡ್ಸ್‌ ಟೊಮೆಟೋ ಕೇಳುವವರೇ ಇಲ್ಲ

ಜಿಲ್ಲೆಯಲ್ಲಿ ಈ ಬಾರಿ ಟೊಮೆಟೋ ಹೆಚ್ಚಾಗಿ ಬೆಳೆದಿದ್ದರಿಂದ ಟೊಮೆಟೋಗೆ ಬೆಲೆ ಇಲ್ಲದಂತಾಗಿದ್ದು ಟೊಮೆಟೊವನ್ನು ತಿಪ್ಪೆಗೆ ಸುರಿಯುವಂತಾಗಿತ್ತು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸೀಡ್ಸ್‌ ಟೊಮೆಟೋ ಹೊರರಾಜ್ಯಗಳಿಗೆ ಅಷ್ಟಾಗಿ ಸರಬರಾಜು ಇಲ್ಲದ ಕಾರಣ ಸೀಡ್ಸ್‌ ಟೊಮೆಟೋವನ್ನು ಕೇಳುವವರಿಲ್ಲದಂತಾಗಿದೆ. ಸೀಡ್ಸ್‌ ಟೊಮೆಟೋವನ್ನು ಕಲ್ಕತ್ತಾ, ಒರಿಸ್ಸಾ, ದೆಹಲಿ, ಮಹಾರಾಷ್ಟಾ್ರ, ಗುಜರಾಜ್‌, ರಾಜಸ್ತಾನ, ಪಂಜಾಬ್‌, ಕೇರಳಾ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ, ಆದರೆ ಕೊರೋನಾ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಇನ್ನೂ ಲಾಕ್‌ಡೌನ್‌ ಜಾರಿ ಇರುವುದರಿಂದ ವ್ಯಾಪಾರ ವಹಿವಾಟು ಇಲ್ಲದೆ ಬೆಲೆ ತೀವ್ರವಾಗಿ ಕುಸಿದಿದೆ. ಇದರಿಂದಾಗಿ ಸೀಡ್ಸ್‌ ಟೊಮೆಟೋ ಬೆಳೆದ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ.

ಜಿಲ್ಲೆಯಲ್ಲಿ ಮಳೆ ಇನ್ನೂ ಎರಡು ಮೂರು ದಿನಗಳ ಕಾಲ ಮಳೆ ಸುರಿಯುವುದರಿಂದ ತೋಟಗಾರಿಕೆ ಬೆಳೆಗಳಾದ ಕೊತ್ತಂಬರಿ ಸೊಪ್ಪು, ಬೀನ್ಸ್‌, ಕ್ಯಾರೆಟ್‌, ಹೂಕೋಸು, ಮುಂತಾದ ಬೆಳೆಗಳಿಗೆ ಹಾನಿ ಉಂಟಾಗುವ ಭೀತಿ ಇದೆ.

click me!