ಕೊನೆಗೂ ಪ್ರಭಾವಿಗಳ ಒತ್ತಡಕ್ಕೆ ಮಣಿದ ಸರ್ಕಾರ?: ಕೋಲಾರ ಡಿಸಿ ಅಕ್ರಂ ಪಾಷಾ ವರ್ಗಾವಣೆ

By Girish Goudar  |  First Published Dec 25, 2024, 9:44 PM IST

ಇತ್ತೀಚೆಗೆ ಕೆಲ ಕಾಂಗ್ರೆಸ್ ಪ್ರಭಾವಿಗಳ ಅಣತಿಯಂತೆ ನಡೆದುಕೊಂಡಿಲ್ಲ ಅನ್ನೋ‌ ಕಾರಣಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನ ವರ್ಗಾವಣೆಯ ಶಿಕ್ಷೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. 
 


ಕೋಲಾರ(ಡಿ.25):  ಕೊನೆಗೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಸರ್ಕಾರ ದಿಢೀರನೆ ವರ್ಗಾವಣೆ ಹಿಂದೆ ಇದಿಯಾ ಜಿಲ್ಲೆಯ ಕಾಂಗ್ರೆಸ್ ಪ್ರಭಾವಿಗಳ ಕೈವಾಡ ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ.

ಜಿಲ್ಲಾಧಿಕಾರಿ ವರ್ಗಾವಣೆಯ ಹಿಂದೆ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಮುಖಂಡರ ಕೈವಾಡದ ಶಂಕೆ ವ್ಯಕ್ತವಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ವಿವಾದ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಗೂ  ಕಾಂಗ್ರೆಸ್ ಪ್ರಭಾವಿಗಳು ಅಡ್ಡಲಾಗಿದ್ದರು ಎಂದು ಹೇಳಲಾಗುತ್ತಿದೆ. 

Tap to resize

Latest Videos

undefined

ಅವಳು ಗೆಳತಿಯಲ್ಲ.. ಆದ್ರೂ ರಸಗುಲ್ಲಾ, ಮೈಸೂರ್ ಪಾಕ್ ಅಂತಾ ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಳಲ್ಲ!

ಇತ್ತ ಕೋಮುಲ್ ಚುನಾವಣೆ ಸೇರಿ ತಮಗೆ ಸಹಕರಿಸಿಲ್ಲ ಅನ್ನೋ ಕಾರಣಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನ ವರ್ಗಾವಣೆ ಮಾಡಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಹಿಂದುಳಿದ ಜಿಲ್ಲೆಯ ಕಂದಾಯ ಇಲಾಖೆ ಸುಧಾರಿಸಿದ್ದರು. ಜತೆಗೆ ಆಡಳಿತಾತ್ಮಕವಾಗಿ ಸಾಕಷ್ಟು ಸುಧಾರಣೆಯನ್ನ ಮಾಡಿದ್ದರು. ಇತ್ತೀಚೆಗೆ ಕೆಲ ಕಾಂಗ್ರೆಸ್ ಪ್ರಭಾವಿಗಳ ಅಣತಿಯಂತೆ ನಡೆದುಕೊಂಡಿಲ್ಲ ಅನ್ನೋ‌ ಕಾರಣಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನ ವರ್ಗಾವಣೆಯ ಶಿಕ್ಷೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. 

ಡಿಸಿ ಅಕ್ರಂ ಪಾಷಾ ಅವರು ಅಧಿಕಾರಿಗಳ ಕೊರತೆ ಮಧ್ಯೆ ಆಡಳಿತ ಸುಧಾರಣೆ ಮಾಡಿ ಅಪಾರ ಜನ ಮನ್ನಣೆ ಪಡೆದಿದ್ದರು. ಅಕ್ರಂ ಪಾಷಾ ಅವರು ಸದ್ಯ ಜಿಲ್ಲಾ ಪಂಚಾಯತ ಸಿಇಓ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 
ಸದ್ಯ ಡಿಸಿ ಅಕ್ರಂ ಪಾಷಾ ಅವರ ವರ್ಗಾವಣೆ ಹಿಂದೆ ಕಾಣದ ಕೈಗಳ ಪ್ರಭಾವ ಎದ್ದು ಕಾಣುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕೋಲಾರ ನೂತನ ಜಿಲ್ಲಾಧಿಕಾರಿಯಾಗಿ ಡಾ.ರವಿ ಅವರು ನೇಮಕಕೊಂಡಿದ್ದಾರೆ. 

click me!