ಚಿಕ್ಕಮಗಳೂರಲ್ಲಿ ನಿಲ್ಲದ ಕಾಡಾನೆಗಳ ಮರಣ ಮೃದಂಗ: ವಿದ್ಯುತ್ ತಂತಿ ತುಳಿದು ಒಂಟಿ ಸಲಗ ಸಾವು!

By Girish Goudar  |  First Published Dec 25, 2024, 7:58 PM IST

ವಿದ್ಯುತ್ ತಂತಿ ತಗುಲಿ ಕಂದಕಕ್ಕೆ ಉರುಳಿ ಬಿದ್ದಿದೆ ಒಂಟಿ ಸಲಗ. ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದರೂ ಕೂಡ ಅರಣ್ಯ ಇಲಾಖೆಗೆ ಮಾಹಿತಿ ಇಲ್ಲ. 


ಚಿಕ್ಕಮಗಳೂರು(ಡಿ.25):  ಜಮೀನಿನಲ್ಲಿ ವಿದ್ಯುತ್ ತಂತಿ ತಗಲಿ ಕಾಡಾನೆಯೊಂದು ಸಾವನ್ನಪ್ಪಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಉಡೆವಾ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. 

ಜಮೀನಿನಲ್ಲಿ ಕೆಳಭಾಗಕ್ಕೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಕಾಡಾಣೆ ಮೃತಪಟ್ಟಿದೆ. ಆಹಾರ ಅರಿಸಿ ಬಂದ ಕಾಡಾನೆಗೆ ವಿದ್ಯುತ್ ತಂತಿ ತಗಲಿ ಸ್ಥಳದಲ್ಲೇ ಸಾವನ್ನಪ್ಪಿದೆ.  ವಿದ್ಯುತ್ ತಂತಿ ತಗುಲಿ ಕಂದಕಕ್ಕೆ ಉರುಳಿ ಬಿದ್ದಿದೆ ಒಂಟಿ ಸಲಗ. ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದರೂ ಕೂಡ ಅರಣ್ಯ ಇಲಾಖೆಗೆ ಮಾಹಿತಿ ಇಲ್ಲ. 

Tap to resize

Latest Videos

undefined

ನ್ಯೂ ಇಯರ್‌ ಪಾರ್ಟಿ ಮಾಡೋರಿಗೆ ಅಬಕಾರಿ ಇಲಾಖೆ ಬಂಪರ್ ಗಿಫ್ಟ್!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ ಕಾಡಾನೆಗಳ ಸಂಘರ್ಷ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಒಂದೆಡೆ ಕಾಡಾನೆ ದಾಳಿಯಿಂದ ಮನುಷ್ಯರು ಮೃತಪಟ್ಟರೆ ಮತ್ತೊಂದೆಡೆ ವಿದ್ಯುತ್ ಅವಘಡಗಳಿಂದ ಕಾಡಾನೆಗಳು ಸಾವನ್ನಪ್ಪುತ್ತಿವೆ. ಜಮೀನಿನ ಕೆಲಸಕ್ಕೆ ತೆರಳಿದ ಶಿವಬಸಪ್ಪ ಆನೆಯ ದಾರುಣ ಸ್ಥಿತಿ ಕಂಡು ಮರುಕ ಪಟ್ಟಿದ್ದಾರೆ. 

click me!