
ಕೊಡಗು (ಜ.14): ಮಡಿಕೇರಿಯಿಂದ ಅಯ್ಯಪ್ಪಸ್ವಾಮಿ ಮಾಲೆಯನ್ನು ಧರಿಸಿ ಶಬರಿಮಲೆಗೆ ಹೋಗಿದ್ದ ಯುವಕನೊಬ್ಬ ಕೇರಳದ ಕಣ್ಣೂರು ಬೀಚ್‌ನಲ್ಲಿ ಈಜಲು ಹೋಗಿ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಸಮುದ್ರದ ಅಲೆಗೆ ಸಿಕ್ಕು ಕೊಚ್ಚಿ ಹೋಗುತ್ತಿದ್ದ ಇನ್ನಿಬ್ಬರು ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಅಯ್ಯಪ್ಪಸ್ವಾಮಿ ದರ್ಶನವನ್ನು ಮುಗಿಸಿದ ಮಡಿಕೇರಿಯ ಯುಕವರ ತಂಡ ವಾಪಸ್ ಬರುವಾಗ ಪ್ರವಾಸಿ ತಾಣಗಳನ್ನು ಸುತ್ತಾಡಿಕೊಮಡು ಬರುವ ಯೋಜನೆ ರೂಪಿಸಿಕೊಂಡಿತ್ತು. ಹೀಗಾಗಿ, ಕೇರಳದಲ್ಲಿಯೇ ಇರುವ ಕಣ್ಣೂರು ಬೀಚ್‌ಗೆ ತೆರಳಿದ್ದಾರೆ. ಮೂವರು ಯುವಕರು ಇಂದು ಬೆಳಗ್ಗೆ ಬೀಚ್‌ನಲ್ಲಿ ಈಜಲು ತೆರಳಿದ್ದಾರೆ. ಆದರೆ, ಸಮುದ್ರದ ಅಲೆಗಳು ಜೋರಾಗಿದ್ದರಿಂದ ಒಬ್ಬ ಯುವಕ ಸಮುದ್ರದೊಳಗೆ ಹೋಗಿದ್ದಾನೆ. ಇನ್ನು ಆತನನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ ಇನ್ನಿಬ್ಬರು ಯುವಕರು ಸಮುದ್ರ ಪಾಲಾಗುವುದನ್ನು ಕಂಡು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
Ballari: ಗಂಡು ಮಕ್ಕಳಾಗಿಲ್ಲವೆಂದು ದಂಪತಿ ಜಗಳ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ
ಇನ್ನು ಮಡಿಕೇರಿ ನಗರದ ಜಲಾಶಯ ಬಡಾವಣೆ ನಿವಾಸಿ ಶಶಾಂಕ್ (25) ಮೃತದುರ್ದೈವಿ ಆಗಿದ್ದಾನೆ. ಇಂದು ಬೆಳಗ್ಗೆ ಮುಂಜಾನೆ ದುರ್ಘಟನೆ ನಡೆದಿದೆ. ಶಬರಿಮಲೆಯಿಂದ ವಾಪಸ್ ಆಗುವ ಸಂದರ್ಭ ಕಣ್ಣೂರು ಬೀಚ್ ಗೆ ತೆರಳಿದ್ದ ವೇಳೆ ಸಮುದ್ರದ ಅಲೆಗೆ ಮೂವರು ಯುವಕರು ಸಿಲುಕಿದ್ದರು. ಕಣ್ಣೂರಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಡಿಕೇರಿಗೆ ಮೃತದೇಹ ರವಾನೆ ಸಾಧ್ಯತೆಯಿದೆ. ಈ ಘಟನೆ ಕುರಿತು ಕೇರಳದ ಕಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.