ರಾಜ್ಯದ ಅತ್ಯಂತ ಪ್ರವಾಹ ಪೀಡಿತ ಪ್ರದೇಶವೆಂದೇ ಹೇಳಲಾಗುವ ಕೊಡಗು ಜಿಲ್ಲೆಯಲ್ಲಿ ಮಳೆಗಾಲಕ್ಕೂ ಮುಂಚಿತವಾಗಿ ಪೊಲೀಸರು ಪ್ವಾಹ ಮತ್ತು ಭೂ ಕುಸಿತ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.15): ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಪ್ರವಾಹ ಭೂಕುಸಿತ ಸಾಮಾನ್ಯ ಎನ್ನುವಂತೆ ಆಗಿದೆ. ಇನ್ನು ಈ ಬಾರಿಯೂ 45 ಪ್ರದೇಶಗಳಲ್ಲಿ ಪ್ರವಾಹ, 40 ಪ್ರದೇಶಗಳಲ್ಲಿ ಭೂಕುಸಿತ ಆಗುವುದು ಖಚಿತ ಎಂದು ಈಗಾಗಲೇ ಜಿಲ್ಲಾಡಳಿತ ಗುರುತ್ತಿಸಿದೆ. ಹೀಗಾಗಿಯೇ ಜನರ ರಕ್ಷಣೆಗೆ ನಾವು ಸಿದ್ಧರಾಗಲೇಬೇಕು ಎಂದು ಕೊಡಗು ಜಿಲ್ಲಾಡಳಿತ ಈಗಾಗಲೇ ಕಠಿಣ ತರಬೇತಿ ನಡೆಸುತ್ತಿದೆ.
undefined
ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರೇ 100 ಅಡಿಗೂ ಹೆಚ್ಚು ಎತ್ತರ ಇರುವ ಬೆಟ್ಟವನ್ನು ಏರಿಳಿದು ತರಬೇತಿ ಮಾಡುತ್ತಿದ್ದಾರೆ. ಹೌದು ಜಿಲ್ಲೆಯಲ್ಲಿ ಪ್ರವಾಹ ಭೂಕುಸಿತ ಆಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಉದ್ದೇಶದಿಂದ ಜನರನ್ನು ರಕ್ಷಿಸುವುದಕ್ಕಾಗಿ ತರಬೇತಿ ನಡೆಸಲಾಗುತ್ತಿದೆ. 20 ಜಿಲ್ಲಾ ಮೀಸಲು ಪೊಲೀಸ್, 20 ನಾಗರಿಕ ಪೊಲೀಸ್ ಸೇರಿದಂತೆ ಒಟ್ಟು ನಾಲ್ಕು ತಂಡಗಳನ್ನು ಮಾಡಿ ಕೂರ್ಗ್ ಅಡ್ವೆಂಚರ್ಸ್ ಎನ್ನುವ ಕ್ವಾರಿಯಲ್ಲಿ ಎಲ್ಲರಿಗೂ ತರಬೇತಿ ನೀಡಲಾಗುತ್ತಿದೆ.
ಮಳೆ ಪ್ರವಾಹಕ್ಕೆ ಮನೆ ಕಳೆದುಕೊಂಡವರನ್ನು ನಡುನೀರಲ್ಲಿ ಕೈಬಿಟ್ಟ ಸರ್ಕಾರ
ಬರೋಬ್ಬರಿ ನೂರು ಅಡಿಗೂ ಎತ್ತರವಿರುವ ಈ ಕ್ವಾರಿಯಲ್ಲಿ ಎಲ್ಲರೂ ರಾಕ್ ಕ್ಲೈಂಬಿಂಗ್ ಮಾಡುತ್ತಿದ್ದಾರೆ. ಅಂದರೆ ಒಂದು ವೇಳೆ ಭೂಕುಸಿತವಾದರೆ ಕ್ವಾರಿಯಲ್ಲಿ ಇರುವಂತಹ ರೀತಿಯಲ್ಲಿ ಇರುತ್ತದೆ. ಇಂತಹ ಪ್ರದೇಶದಲ್ಲಿ ಜನರನ್ನು ಹೇಗೆ ರಕ್ಷಣೆ ಮಾಡಬೇಕು. ಭೂಕುಸಿತವಾದ ಜಾಗದಲ್ಲಿ ಜನರು ಸಿಲುಕಿದ್ದರೆ ಅವರನ್ನು ಹೇಗೆ ರಕ್ಷಣೆ ಮಾಡಬೇಕು ಎನ್ನುವುದನ್ನು ಇಲ್ಲಿ ತರಬೇತಿ ಪಡೆಯಲಾಗುತ್ತಿದೆ. ಇವಿಷ್ಟೇ ಅಲ್ಲ, ಇದರ ಜೊತೆಗೆ ಟ್ರೀ ಟಾಪ್ ಕೈಬಿಂಗ್ ಅಂದರೆ ಮರಗಳ ಮೇಲೆಯೇ ಒಂದು ಮರದಿಂದ ಮತ್ತೊಂದು ಮರಕ್ಕೆ ಹೋಗುವುದು ಹೇಗೆ ಎನ್ನುವುದನ್ನು ತರಬೇತಿ ಮಾಡುತ್ತಿದ್ದಾರೆ.
ಅಂದರೆ ಭೂಕುಸಿತ ಅಥವಾ ಪ್ರವಾಹದ ಎದುರಾದಲ್ಲಿ ಜನರು ಇರುವ ಸ್ಥಳಗಳಿಗೆ ಹೇಗೆಲ್ಲಾ ತಲುಪಬಹುದು ಎನ್ನುವುದನ್ನು ಅಭ್ಯಾಸ ಮಾಡುತ್ತಿದ್ದಾರೆ. ತಂತಿಗಳ ಮೇಲೆ ನಡೆಯುವುದು ಹೇಗೆ, ಆ ಮೂಲಕವೂ ಜನರನ್ನು ರಕ್ಷಿಸಲು ನಾವು ಸಿದ್ಧರಿದ್ದೇವೆ ಎಂದು ಜನರಿಗೆ ಅಭಯ ನೀಡಲು ಮುಂದಾಗಿದ್ದಾರೆ. ಸ್ವತಃ ಕಲ್ಲುಕೋರೆಯನ್ನು ಏರಿಳಿದು ಎಸ್ಪಿ ರಾಮರಾಜನ್ ಅವರು ಪೊಲೀಸ್ ಸಿಬ್ಬಂದಿಗೆ ಧೈರ್ಯ ತುಂಬುತಿದ್ದಾರೆ. ಇನ್ನು ಕ್ವಾರಿ ಏರಿ ಇಳಿಯುವಾಗ ಎಸ್ಪಿ ರಾಮರಾಜನ್ ಅವರ ಕೈಯಿಗೆ ಬಂಡೆ ತಾಗಿ ಸ್ವಲ್ಪ ಗಾಯವೂ ಆಯಿತು.
ಸಿದ್ದರಾಮಯ್ಯ ಸೌಂಡ್ ಮಾಡ್ಕೊಂಡು ಕೊಡ್ತಾರೆ, ಸೌಂಡ್ಲೆಸ್ ಆಗಿ ಕಿತ್ಕೋತಾರೆ: ಸಿ.ಟಿ. ರವಿ ಟೀಕೆ
ತರಬೇತಿ ಕುರಿತು ಮಾತನಾಡಿದ ಎಸ್ಪಿ ರಾಮರಾಜನ್ ಅವರು ಜಿಲ್ಲೆಯಲ್ಲಿ ಈಗಾಗಲೇ ಮಡಿಕೇರಿ ಜಿಲ್ಲಾ ಕೇಂದ್ರದಲ್ಲಿ ಎರಡು ಟೀಂ ತರಬೇತಿ ಪಡೆಯುತ್ತಿವೆ. ಇದರ ಜೊತೆಗೆ ಕುಶಾಲನಗರ, ಸೋಮವಾರಪೇಟೆ ಮತ್ತು ವಿರಾಜಪೇಟೆಯಲ್ಲೂ ಪೊಲೀಸರ ರಕ್ಷಣಾ ಪಡೆಯಗಳನ್ನು ರಚಿಸಿ ತರಬೇತಿ ನೀಡಲಾಗುತ್ತಿದೆ. ಪ್ರವಾಹ, ಭೂಕುಸಿತದಂತಹ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ತಮ್ಮನ್ನು ತಾವು ರಕ್ಷಿಸಿಕೊಂಡು ಜನರನ್ನು ಧೈರ್ಯದಿಂದ ರಕ್ಷಣೆ ಮಾಡುವುದು ಹೇಗೆ ಎನ್ನುವುದು ಕಲಿಸಲಾಗುತ್ತಿದೆ ಎಂದಿದ್ದಾರೆ. ಇನ್ನು ಜಿಲ್ಲಾ ಮೀಸಲು ಪೊಲೀಸ್ ಪಡೆ ಇನ್ಸ್ಪೆಕ್ಟರ್ ಚನ್ನನಾಯಕ್ ಅವರು ಮಾತನಾಡಿ ಈಗಾಗಲೇ ನಾಲ್ಕು ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ. ನಾವು ಮಳೆ ಆರಂಭವಾದಾಗಿನಿಂದ ಮಳೆ ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಬರುವವರೆಗೆ ದಿನದ 24 ಗಂಟೆಯೂ ಜನರ ರಕ್ಷಣೆಗಾಗಿ ಸಿದ್ದರಿರುತ್ತೇವೆ ಎಂದು ಹೇಳಿದ್ದಾರೆ.
ಪೊಲೀಸರ ತರಬೇತಿಗೆ ಕೂರ್ಗ್ ಅಡ್ವೆಂಚರ್ಸ್ನ ಸಿಬ್ಬಂದಿಗಳಾದ ಸಾಯಿ ಗಿರಿ ಬೋಪಣ್ಣ, ಮುತ್ತಣ್ಣ, ಸುಬ್ರಹ್ಮಣಿ, ಜನಾರ್ಧನ, ಮುಜೀಬ್ ಮತ್ತು ಪುನೀತ್ ಸೇರಿದಂತೆ ಆರು ಜನರು ತರಬೇತಿಗೆ ಸಹಾಯ ನೀಡುತ್ತಿದ್ದಾರೆ.