ಸಿದ್ದರಾಮಯ್ಯ ಸೌಂಡ್‌ ಮಾಡ್ಕೊಂಡು ಕೊಡ್ತಾರೆ, ಸೌಂಡ್ಲೆಸ್‌ ಆಗಿ ಕಿತ್ಕೋತಾರೆ: ಸಿ.ಟಿ. ರವಿ ಟೀಕೆ

By Sathish Kumar KH  |  First Published Jun 15, 2023, 11:19 PM IST

ರಾಜ್ಯದ ಜನತೆಗೆ ಗ್ಯಾರಂಟಿಯನ್ನು ಜೋರಾಗಿ ಘೋಷಣೆ ಮಾಡುವ ಸಿದ್ದರಾಮಯ್ಯ ಅವರು, ಸದ್ದಿಲ್ಲದೇ ವಿದ್ಯುತ್, ಮದ್ಯ ಮತ್ತಿತರ ವಸ್ತುಗಳ ದರ ಏರಿಕೆಯನ್ನು ಮಾಡುತ್ತಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.15): ಅಕ್ಕಿ ಕೊಡುತ್ತೀವಿ ನಾಳೆಯಿಂದ ನಿಮ್ಮ ಹೆಸರು ಹಾಕಿಕೊಂಡು ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರ ಕಮಿಟ್ಮೆಂಟ್ ಲೇಟರ್ ಕೊಟ್ಟಿಲ್ಲ, ಕೊಟ್ಟಿದ್ದರೇ ಎಲ್ಲಿದೆ ತೋರಿಸಲಿ. ಇನ್ನು ರಾಜ್ಯದ ಜನತೆಗೆ ಗ್ಯಾರಂಟಿಯನ್ನು ಜೋರಾಗಿ ಘೋಷಣೆ ಮಾಡುವ ಸಿದ್ದರಾಮಯ್ಯ ಅವರು, ಸದ್ದಿಲ್ಲದೇ ವಿದ್ಯುತ್, ಮದ್ಯ ಮತ್ತಿತರ ವಸ್ತುಗಳ ದರ ಏರಿಕೆಯನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುಳ್ಳುರಾಮಯ್ಯ ಅಲ್ಲಾ ಅನ್ನೋದಾ ದರೇ, ಕಮಿಟ್ಮೆಂಟ್ ಲೇಟರ್ ತೋರಿಸಲಿ ಎಂದು ಸವಾಲು ಹಾಕಿದ ಅವರು, ಎಫ್ಸಿಐ ನಿಮಗೆ ಅಗತ್ಯವಿ ರುವಷ್ಟು ಅಕ್ಕಿ ಕಳಿಸುತ್ತೇವೆಂದು ಹೇಳಿದ್ದಾರೆಯೇ ಲೇಟರ್ ತೋರಿಸಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ಕೈಯಲ್ಲಿ ಆಗದಿರುವುದಕ್ಕೆ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಇದು ಇಷ್ಟು ಬೇಗ ಶುರುವಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಈಗಲೇ ಆರೋಪ ಮಾಡಲು ಶುರು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಮಳೆ ಪ್ರವಾಹಕ್ಕೆ ಮನೆ ಕಳೆದುಕೊಂಡವರನ್ನು ನಡುನೀರಲ್ಲಿ ಕೈಬಿಟ್ಟ ಸರ್ಕಾರ

ಜುಲೈ 1 ರಿಂದ ಉಚಿತ ಅಕ್ಕಿ ನೀಡುತ್ತೇವೆಂದು ಭಾಷಣದಲ್ಲಿ ಹೇಳಿದ್ದರು. ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವುದನ್ನು ಬಿಟ್ಟು ಬಿಪಿಎಲ್ ಪಡಿತದಾರರ ಖಾತೆಗೆ ಹಣ ಹಾಕಿ ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ. ಹಣ ಕೊಟ್ಟರೇ ಅಕ್ಕಿ ಎಲ್ಲಿ ಬೇಕಾದರೂ ಸಿಗುತ್ತದೆ ಎಂದ ಅವ ರು ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಇಷ್ಟು ಸಣ್ಣ ಐಡಿಯಾ ಹೊಳೆಯು ವುದಿಲ್ಲವೇ ಎಂದರು.ಕೇಂದ್ರ ಸರ್ಕಾರ ಅಕ್ಕಿ ಕೊಟ್ಟರೇ ತಾನೇ ಕೊಟ್ಟೆ ಎನ್ನುವುದು, ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದರೇ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಇದು ಸರಿಯಲ್ಲ ರಾಜ್ಯ ಸರ್ಕಾರ ಪಡಿತರದಾರರ ಖಾತೆಗೆ ಹಣ ಹಾಕಲಿ ಅಕ್ಕಿ ಬೇಕು ಎನ್ನುವವರು ಅಕ್ಕಿಕೊಂಡುಕೊಳ್ಳುತ್ತಾರೆ. ರಾಗಿ ಬೇಕು ಎಂದರೇ ಬೆಳೆ ಕೊಳ್ಳುತ್ತಾರೆ. ಅಗತ್ಯವಿರುವುದನ್ನು ಕೊಂಡುಕೊಳ್ಳುತ್ತಾರೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಗ್ಗಿಸಿದ ಚಿತ್ರದುರ್ಗ ಪೊಲೀಸರು: ಸಿಸಿಟಿವಿ ಪ್ರಯೋಗ ಯಶಸ್ವಿ

ಕೊಟ್ಟಿದ್ದು ಭಾರೀ ಸದ್ದು , ಕಿತ್ತುಕೊಂಡಿದ್ದು ಸೌಂಡ್ಲೆಸ್ :   ರಾಜ್ಯ ಸರ್ಕಾರ ವಿದ್ಯುತ್ ಬಳಕೆ ದರ ಏರಿಕೆ ಮಾಡಿದ್ದು, ಕೆಇಆರ್‌ಸಿ ತೀರ್ಮಾನ ಹಿಂದೆ ಆಗಿತ್ತು ಹೇಳುತ್ತಿದ್ದಾರೆ. ಹಿಂದೆ ಮುಂದೇ ನೋಡದೆ ಅನುಮತಿ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದ ಅವರು, ಕೆಇಆರ್‌ಸಿ ಪ್ರಸ್ತಾವನೆಯನ್ನು ಬಿಜೆಪಿ ಸರ್ಕಾರದ ಮುಂದೇ ಮಂಡಿಸಿತ್ತು. ಆದರೆ ಅನುಮತಿ ನೀಡಿರಲಿಲ್ಲ. ಸರ್ಕಾರ ಸದ್ದಿಲ್ಲದೆ ಮದ್ಯದ ಬೆಲೆ ಏರಿಕೆ ಮಾಡಿದ್ದಾರೆ. ಆಸ್ತಿ ರಿಜಿಸ್ಟರ್, ಬೈಕ್ ದರ ಹೆಚ್ಚಿಗೆ ಮಾಡಲು ಹೊರಟ್ಟಿದ್ದಾರೆಂಬ ಸುದ್ದಿ ಇದ್ದು, ಇದೆಲ್ಲವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ರಾಜ್ಯದ ಜನತೆಗೆ 200 ಯೂನಿಟ್‌ ಉಚಿತ ವಿದ್ಯುತ್‌ ಕೊಡೋದಾಗಿ ದೊಡ್ಡ ಪ್ರಚಾರ ತಗೋತಾರೆ. ಆದರೆ, ಯಾವುದೇ ಸದ್ದಿಲ್ಲದೇ ವಿದ್ಯುತ್‌ ದರವನ್ನು ಏರಿಸಿದ್ದಾರೆ.ಒಂದು ಕಡೆ ಕಿತ್ತುಕೊಂಡು ಮತ್ತೊಂದು ಕಡೆ ಕೊಟ್ಟಂತೆ ಮಾಡುತ್ತಿದ್ದಾರೆ ಎಂದ ಅವರು ಕೊಟ್ಟಿದ್ದು ಬಾರೀ ಸದ್ದು ಮಾಡುತ್ತಿದೆ. ಕಿತ್ತು ಕೊಂಡಿದ್ದು ಗೊತ್ತಾಗದಂತೆ ಸೌಂಡ್ಲೆಸ್ ಎಂದು ವ್ಯಂಗ್ಯವಾಡಿದರು.

click me!