ತುಂಡಾಗಿದ್ದ ಶವಗಳನ್ನು ಹೆಕ್ಕಿ ರಾಶಿ ಮಾಡಿದೆವು: ವಯನಾಡಿನ ಭೀಕರ ದುರಂತದ ಚಿತ್ರಣ ನೀಡಿದ ಕೊಡಗಿನ ತಂಡ..!

By Kannadaprabha News  |  First Published Aug 2, 2024, 11:15 AM IST

ನಮ್ಮ ಬಳಿ ಗೌಸ್‌ಗಳಾಗಲಿ, ಮಾಸ್ಕ್‌ಗಳಾಗಲಿ ಯಾವುದೂ ಇರಲಿಲ್ಲ, ಶವಗಳನ್ನು ಬರಿಗೈನಲ್ಲೇ ತೆಗೆದಿದ್ದೇವೆ. ಅಲ್ಲಿನ ಗ್ರಾಮಸ್ಥರ ಜೊತೆ ಸೇರಿ 18 ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆದಿದ್ದೇವೆ. ಕೆಲ ದೇಹಗಳು ತುಂಡಾದ ಸ್ಥಿತಿಯಲ್ಲಿದ್ದುದನ್ನು ನೋಡಿ ಮನಸ್ಸಿಗೆ ತೀವ್ರ ಸಂಕಟವಾಯಿತು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನೆಲ್ಲ ಅಲ್ಲಿದ್ದ ಮನೆಯೊಂದರಲ್ಲಿ ರಾಶಿ ಮಾಡಿದವು. ಅಲ್ಲಿನ ಸ್ಥಿತಿ ನೋಡಿ ಅಂದು ಊಟ ಕೂಡ ಮಾಡಲಿಲ್ಲ ಎಂದು ಭಾವುಕರಾಗಿ ಹೇಳಿದ ಅಸ್ಕರ್‌ 
 


ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ(ಆ.02):  ಅಲ್ಲಿ ಎಲ್ಲಿ ನೋಡಿದರೂ ಬಂಡೆ ಕಲ್ಲುಗಳ ರಾಶಿಯೇ? ಕಾಣುತ್ತಿತ್ತು. ಘಟನೆ ನಡೆದ ಪ್ರದೇಶದ ತುತ್ತ ತುದಿಗೆ ನಾವು ನಾಲ್ಕು ಮಂದಿ ಸ್ಥಳೀಯರೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿದವು. ಸುಮಾರು 18 ಮೃತದೇಹಗಳನ್ನು ಹೊರ ತೆಗೆದಿದ್ದೆವು. ಕೆಲವೊಂದು ಮೃತದೇಹಗಳು ತುಂಡಾಗಿದ್ದವು. ಅಲ್ಲಿನ ವಾತಾವರಣ ಕಂಡು ಈಗಲೂ ನಮಗೆ ಮೈ ಜುಮ್ ಎನ್ನುತ್ತಿದೆ!

Latest Videos

undefined

ಕೊಡಗು ಜಿಲ್ಲೆಯಿಂದ ವಯನಾಡಿನ ಮುಂಡಕ್ಕೆ ಪ್ರಕೃತಿ ವಿಕೋಪ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಕೊಡಗಿನ ಯುವಕರ ತಂಡ ತಮ್ಮ ಕಣ್ಣಿಗೆ ಕಂಡದ್ದನ್ನು ವಿವರಿಸಿದ್ದು ಹೀಗೆ. 10.30ಗೆ ಅಲ್ಲಿದ್ದೆವು: ಮಂಗಳವಾರ ಬೆಳಗ್ಗೆ ಗಂಟೆಗೆ ಟೀವಿಯಲ್ಲಿ ಸುದ್ದಿ ನೋಡಿದ ಕೂಡಲೇ ಆಂಬ್ಯುಲೆನ್ಸ್ ಜತೆಗೆ ಹೊರಟ ನಾವು 8 ಮಂದಿ 10.30ಕ್ಕೆವಯನಾಡಿನ ಮುಂಡಕೈಗೆ ತಲುಪಿದೆವು. ಬೆಟ್ಟದಲ್ಲಿದ್ದ ಬಂಡೆಕಲ್ಲುಗಳು ಮನೆಗಳನ್ನೆಲ್ಲ ನೆಲಸಮ ಮಾಡಿತ್ತು. 400ಕ್ಕೂ ಹೆಚ್ಚು ಮನೆಗಳಿದ್ದ ಗ್ರಾಮ ಇದೀಗ ಕಸದಿಂದ ತುಂಬಿದ್ದ ಮೈದಾನದಂತಾಗಿತ್ತು. ಊರಿಡೀ ಬಂಡೆಕಲ್ಲುಗಳ ರಾಶಿಯೇ ಇತ್ತು. ಭಾರೀ ಪ್ರಮಾಣದಲ್ಲಿ ನೀರು ಕೂಡ ಹರಿಯುತ್ತಿತ್ತು. ಅಲ್ಲಿನ ಸ್ಥಳೀಯರೊಂದಿಗೆ ಸೇರಿ ಬಂಡೆ ಕಲ್ಲುಗಳ ಮೇಲೆ ಹೆಜ್ಜೆಯಿಟ್ಟು, ಸುಮಾರು 4 ಕಿ.ಮೀ. ಕ್ರಮಿಸಿ ಚೂರಲ್ ಮಲೆ ತಲುಪಿದೆವು ಎಂದು ಕಾರಾ ಚರಣೆಯಲ್ಲಿ ಪಾಲ್ಗೊಂಡಿದ್ದ ಆಸ್ಕರ್ ವಿವರಿಸಿದರು.

ಕೇರಳದ ಭೀಕರ ಭೂಕುಸಿತದ ಉಪಗ್ರಹ ಚಿತ್ರ ಇಸ್ರೋ ಬಿಡುಗಡೆ : ವಯನಾಡ್‌ನಲ್ಲಿ ಕುಸಿದದ್ದು ಬರೊಬ್ಬರಿ 21 ಎಕರೆಯ ದೊಡ್ಡ ಗುಡ್ಡ!

ನಮ್ಮ ಬಳಿ ಗೌಸ್‌ಗಳಾಗಲಿ, ಮಾಸ್ಕ್‌ಗಳಾಗಲಿ ಯಾವುದೂ ಇರಲಿಲ್ಲ, ಶವಗಳನ್ನು ಬರಿಗೈನಲ್ಲೇ ತೆಗೆದಿದ್ದೇವೆ. ಅಲ್ಲಿನ ಗ್ರಾಮಸ್ಥರ ಜೊತೆ ಸೇರಿ 18 ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆದಿದ್ದೇವೆ. ಕೆಲ ದೇಹಗಳು ತುಂಡಾದ ಸ್ಥಿತಿಯಲ್ಲಿದ್ದುದನ್ನು ನೋಡಿ ಮನಸ್ಸಿಗೆ ತೀವ್ರ ಸಂಕಟವಾಯಿತು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನೆಲ್ಲ ಅಲ್ಲಿದ್ದ ಮನೆಯೊಂದರಲ್ಲಿ ರಾಶಿ ಮಾಡಿದವು. ಅಲ್ಲಿನ ಸ್ಥಿತಿ ನೋಡಿ ಅಂದು ಊಟ ಕೂಡ ಮಾಡಲಿಲ್ಲ ಎಂದು ಅಸ್ಕರ್‌ ಭಾವುಕರಾಗಿ ಹೇಳಿದರು.

ಕೊಡಗಿನವರೂ ನಾಪತ್ತೆ: ಕೊಡಗು ಜಿಲ್ಲೆಯ ಸಿದ್ದಾಪುರದಿಂದ ವಯನಾಡುವಿನ ಮುಂಡಕೈಗೆ ವಿವಾಹವಾಗಿ ಹೋಗಿರುವ ದಿವ್ಯಾ ಹಾಗೂ ಅವರ ಪತಿ ಸಿದ್ದರಾಜು, ಮಗ ಯದುಕೃಷ್ಣ ಎಂಬವರು ಕೂಡ ಈ ದುರಂತದಲ್ಲಿ ನಾಪತ್ತೆಯಾಗಿರುವ ಬಗ್ಗೆ ನಮಗೆ ಸ್ಥಳೀಯರಿಂದ ಮಾಹಿತಿ ದೊರೆಯಿತು. ಅಲ್ಲಿ 9 ವರ್ಷದ ಮಗುವೊಂದರ ಮೃತದೇಹ ಪತ್ತೆಯಾ ಗಿದ್ದು, ಆದರೆ ಮಗುವಿನ ಚಹರೆ ಗೋಚರಿಸುತ್ತಿಲ್ಲ. ಸುಮಾರು 6 ಕುಟುಂಬಗಳ ವರೂ ಇದು ನಮ್ಮ ಮಗು ಎಂದು ಹೇಳುತ್ತಿದ್ದರು, ಹೀಗಾಗಿ ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಯಿತು ಎಂದು ಅಲ್ಲಿನ ವಸ್ತುಸ್ಥಿತಿಯನ್ನು ವಿವರಿಸಿದರು.

ಆಸ್ಪತ್ರೆಯಲ್ಲಿ ಮೃತದೇಹಗಳ ರಾಶಿ: ಮುಂಡಕ್ಕನ ಆಸ್ಪತ್ರೆಯಲ್ಲಿ ರಾಶಿ ರಾಶಿ ಮೃತ ದೇಹಗಳನ್ನು ಬಸ್ ಬಾಕ್ಸ್ಗಳಲ್ಲಿ ಹಾಕಿಡಲಾಗಿದೆ. ಸೇನೆ ಸೇರಿ ವಿವಿಧ ರಕ್ಷಣಾ ತಂಡದಿಂದ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ನಾವೀಗ ಅಲ್ಲಿಂದ ಹಿಂತಿರುಗಿದ್ದೇವೆ ಎಂದು ಹೇಳಿದರು. 

click me!