ಬ್ರಿಟಿಷ್ ಬಾರ್ಬರ್ ಅಸೋಸಿಯೇಷನ್ ನಡೆಸುವ ವಿಶ್ವ ಚಾಂಪಿಯನ್ ಶಿಪ್‍ಗೆ ಎರಡೆರಡು ಬಾರಿ ಕೊರೊಳೊಡ್ಡಿದ ಸುನಿಲ್
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ನ.17): ಕೊಡಗು ಜಿಲ್ಲೆಯ ಪುಟ್ಟ ಗ್ರಾಮ ಒಂದರಲ್ಲಿ ಹುಟ್ಟಿ ಬೆಳೆದು, ಒಂಭತ್ತನೆ ತರಗತಿಯಷ್ಟೇ ಕಲಿತ ಇವರು ಬ್ರಿಟಿಷ್ ಬಾರ್ಬರ್ ಅಸೋಸಿಯೇಷನ್ ನಡೆಸುವ ವಿಶ್ವ ಚಾಂಪಿಯನ್ ಶಿಪ್‍ಗೆ ಒಂದಲ್ಲಾ ಎರಡೆರಡು ಬಾರಿ ಕೊರೊಳೊಡ್ಡಿದ್ದಾರೆ. ಹೌದು, ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಭಾಸ್ಕರ್ ಮತ್ತು ಲಲಿತಾ ದಂಪತಿಗಳ ಪುತ್ರ ಸುನಿಲ್ ಈ ಸಾಧನೆ ಮಾಡಿದ ಯುವಕನಾಗಿದ್ದಾರೆ. ಮನೆಯಲ್ಲಿ ಆರ್ಥಿಕ ಸಮಸ್ಯೆಯಿಂದ ಮುಂದಿನ ಓದು ಕಲಿಯಲು ಸಾಧ್ಯವಾಗದ ಸುನಿಲ್ ಶಾಲೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೇರ್ ಡ್ರೆಸ್ಸಿಂಗ್ ಕೆಲಸ ಕಲಿಯುವುದಕ್ಕೆ ಶುರು ಮಾಡಿದ್ದರು. ಮೂರು ವರ್ಷಗಳ ಕಾಲ ಸುಂಟಿಕೊಪ್ಪದಲ್ಲಿಯೇ ದೊಡ್ಡಪ್ಪನ ಮಗ ಅನುಪ್ ಹೇರ್ ಕಟಿಂಗ್ ಶಾಪಿನಲ್ಲಿ ಕೆಲಸ ಮಾಡಿದ್ದರು. ಬಳಿಕ ಯಾರೋ ಮಾಡಿದ ಸಹಾಯದಿಂದ ಇದೇ ವೃತ್ತಿಯನ್ನು ಅರಸಿ ದುಬೈಗೆ ಪ್ರಯಾಣ ಬೆಳೆಸಿದ್ದರು.
undefined
ಕಷ್ಟಗಳನ್ನೇ ಉಂಡು ಬೆಳೆದಿದ್ದ ಸುನಿಲ್ ಅವರ ಪಾಲಿಗೆ ನಂತರ ಎಲ್ಲವೂ ಅದೃಷ್ಟದ ಬಾಗಿಲು ತೆರೆದಂತೆ ಆಗಿತ್ತು. ದುಬೈನಲ್ಲಿ ಬಾರ್ಬರ್ ಖಾಸಗಿ ಕಂಪನಿಯಲ್ಲಿಯೇ ಕೆಲಸ ಆರಂಭಿಸಿದ ಅವರು ಮೂರು ವರ್ಷಗಳ ಕಾಲ ತಾವು ಕಲಿತಿದ್ದ ಕ್ಷೌರಿಕ ವಿದ್ಯೆಯಲ್ಲೇ ಸಂಪನ್ನರಾಗುತ್ತಾ ಹೋದರು. ಅದು ಎಷ್ಟರ ಮಟ್ಟಿಗೆ ಅಂದರೆ ಸುನಿಲ್ ಅವರ ಬಳಿ ಹೇರ್ ಸ್ಟೈಲ್ ಮಾಡಿಸಿಕೊಳ್ಳುವುದಕ್ಕೆ ಹಾಲಿವುಡ್, ಬಾಲಿವುಡ್, ಟಾಲಿವುಡ್ ಹೀರೋಗಳು ಬರಲಾರಂಭಿಸಿದ್ದರು.
KODAGU: ಶಾಲೆಗಳ ವಿರುದ್ಧ ಆರ್ ಟಿಓಗೆ ದೂರು ನೀಡಿದ ಚಾಲಕರು ಮತ್ತು ಮಾಲೀಕರ ಸಂಘ
ಅಂತಹವರನ್ನು ನೋಡುವುದಾದರೆ, ಫ್ರಾನ್ಸ್‌ನ ಅಂತಾರಾಷ್ಟ್ರೀಯ ಪುಟ್‍ಬಾಲ್ ಆಟಗಾರ ಮಸದಿಯೋ ಹೈದರ್, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ ಸನ್, ದಕ್ಷಿಣ ಭಾರತದ ಹೆಸಾರಂತ ನಟರಾದ ಮಾಧವನ್, ರಾಮಚರಣ್ ಸೇರಿದಂತೆ ಪ್ರಮುಖ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಿಟೀಸ್ ಗಳು ಬರಲಾರಂಭಿಸಿದ್ದಾರೆ. ಅವರಿಗೂ ಅವರಿಷ್ಟದ, ಅವರ ಅಂದ, ಚಂದಕ್ಕೊಪ್ಪುವ ಹೇರ್ ಸ್ಟೈಲ್, ಶೇವ್ ಗಳನ್ನು ಮಾಡಿ ಸೈನಿ ಎನಿಸಿಕೊಂಡಿದ್ದಾರೆ.
ಹೀಗೆ ದೊಡ್ಡ ದೊಡ್ಡ ಸೆಲ್ಬ್ರಿಟೀಸ್ ಗಳಿಗೆ ದುಬೈನಲ್ಲಿ ಹೇರ್ ಸ್ಟೈಲ್ ಮಾಡುತಿದ್ದ ಕೊಡಗಿನ ಯುವಕ ಸುನಿಲ್‍ಗೆ ಅಲ್ಲಿಯೂ ದೊಡ್ಡವರ ಸ್ನೇಹ ಸಂಪಾದನೆಯಾಗಿತ್ತು. ಹೀಗಾಗಿ ಸುನಿಲ್ ಬ್ರಿಟಿಷ್ ಬಾರ್ಬರ್ ಅಸೋಷಿಯನ್ ನಡೆಸುವ ವಿಶ್ವ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸುವ ಸದಾವಕಾಶ ಒದಗಿ ಬಂದಿತ್ತು.
ಹೀಗೆ 2016 ಮತ್ತು 2017 ರಲ್ಲಿ ಹೆಸರಾಂತ ಬ್ರಿಟಿಷ್ ಬಾರ್ಬರ್ ಅಸೋಶಿಯೇಷನ್ ನಡೆಸಿದ್ದ ಹೇರ್ ಸ್ಟೈಲ್ ಸ್ಪರ್ಧೆಯಲ್ಲಿ ಸುನಿಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅಷ್ಟೇ ಏಕೆ ನಂತರದ ವರ್ಷಗಳಲ್ಲಿ ಇದೇ ಅಸೋಸಿಯೇಷನ್ ನಡೆಸಿದ ವಿಶ್ವ ಸ್ಪರ್ಧೆಗೆ ತೀರ್ಪುಗಾರರಾಗಿ ಭಾಗವಹಿಸಿದ ಹೆಗ್ಗಳಿಕೆ ಸುನಿಲ್ ಅವರದು.
ಶವಾಗಾರದಲ್ಲೇ ಪಲ್ಲಂಗದಾಟ: ಪೋಸ್ಟ್‌ಮಾರ್ಟಮ್ ಮಾಡೋ ಜಾಗದಲ್ಲಿ ಇದೆಂತಾ ಕರ್ಮ
ಸುನಿಲ್ ಅವರ ಪರಿಶ್ರಮ ಮತ್ತು ಈ ಸಾಧನೆಯನ್ನು ಕಂಡ ಅವರ ಮನೆಯವರು ಅವರ ಜೊತೆಗೂಡಿ ಆಡಿ ಬೆಳೆದ ಸ್ನೇಹಿತರು ಇನ್ನಿಲ್ಲದ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅವರ ಪ್ರತಿಭೆಗೆ ತಕ್ಕಂತೆ ಪ್ರತಿಫಲ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹುಟ್ಟು ಬಡತನದಲ್ಲೇ ಬೆಳೆದ ಸುನಿಲ್ ತಾವು ಮಾಡಿದ ಪರಿಶ್ರಮದ ಪರಿಣಾಮ ಇಂದು ವಿಶ್ವ ಮಟ್ಟದಲ್ಲಿ ಗುರುತ್ತಿಸಿಕೊಳ್ಳುವ ಹೇರ್ ಡ್ರೆಸರ್ ಆಗುವುದರ ಜೊತೆಗೆ ದುಬೈನಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಸ್ವಂತ ಅಂಗಡಿ ತೆರೆದು ನಾಲ್ಕೈದು ಜನರಿಗೆ ಕೆಲಸ ಕೊಡುವ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಅಭಿನಂದನಾರ್ಹ.