ಚಿಕ್ಕಮಗಳೂರು: ನೋಡುಗರ ಕಣ್ಮನ ಸೆಳೆದ ಚಿತ್ರಕಲಾ ಸ್ಪರ್ಧೆ..!

By Girish Goudar  |  First Published Nov 17, 2022, 9:28 PM IST

ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ವೈಲ್ಡ್ ಕ್ಯಾಟ್ ಸಿ. ಮತ್ತು ಅರಣ್ಯ ಇಲಾಖೆ ಒಟ್ಟಾಗಿ ಏರ್ಪಡಿಸಿದ್ದ ಚಿತ್ರ ಬರೆಯುವ ಸ್ಪರ್ಧೆ 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.17): ಕುಂಚದಲ್ಲರಳಿದವು ಪ್ರಾಣಿ-ಪಕ್ಷಿಗಳ ಜೊತೆಗೆ ವನಸುಮ ಹಾಗೂ ನಿಸರ್ಗದ ರಮಣೀಯ ಭೂ ವಿನ್ಯಾಸ. ವ್ಯಕ್ತಿಗಳು ರೂಪದರ್ಶಿಗಳಾಗಿ ತಮ್ಮ ಮುಖಗಳನ್ನು ಚಿತ್ರಕಾರರ ಮೂಲಕ ಹಲವು ಪ್ರಾಣಿಗಳ ಮುಖವನ್ನಾಗಿಸಿಕೊಂಡರು. ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ವೈಲ್ಡ್ ಕ್ಯಾಟ್ ಸಿ. ಮತ್ತು ಅರಣ್ಯ ಇಲಾಖೆ ಒಟ್ಟಾಗಿ ಏರ್ಪಡಿಸಿದ್ದ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕದಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಹಾಗೂ ಆಸಕ್ತ ಸಾರ್ವಜನಿಕರು ಭಾಗವಹಿಸಿದ್ದು ವಿವಿಧ ರೀತಿ ನಿಸರ್ಗ ಸನ್ನಿವೇಶಗಳನ್ನು ಚಿತ್ರಿಸಲು ಸೂಚಿಸಲಾಗಿತ್ತು. ಪೂರ್ವ ಪ್ರಾಥಮಿಕ ವಿಭಾಗದ ಚಿಣ್ಣರು ತಮಗೆತೋಚಿದ ಸುಂದರ ಕಾಡು ಹೂವುಗಳ ಮೂಲಕ ಆ ವನಸುಮಗಳ ವೈವಿಧ್ಯಮಯತೆಯನ್ನು ತಮ್ಮ ಕುಂಚದ ಮೂಲಕ ಅರಳಿಸಿ ನೋಡುಗರ ಕಣ್ಣಿಗೆ ಮುದ ನೀಡುವಂತೆ ಮಾಡಿದರು.

Latest Videos

undefined

ವಿಜೇತರು:

ಪೂರ್ವ ಪ್ರಾಥಮಿಕದಲ್ಲಿ ಮಹಮ್ಮದ್ ಝೈದ್, ವಾಸವಿ ವಿದ್ಯಾಲಯ (ಪ್ರಥಮ ಸ್ಥಾನ), ಸಾನ್ವಿ (ಮಾಡೆಲ್ಇಂಗ್ಲೀಷ್ ಸ್ಕೂಲ್) ಎರಡನೇಯ ಸ್ಥಾನ, ಐಝಾ ಫಾತಿಮಾ (ವಾಸವಿ ವಿದ್ಯಾಲಯ) ತೃತೀಯ ಸ್ಥಾನ, ಜೆ.ಭಾವಿಶ್ (ವಾಸವಿ ವಿದ್ಯಾಲಯ) ಡಿ.ಎಸ್.ವೀಕ್ಷಾ (ಸೈಂಟ್ಜೋಸೆಫ್ಸ್) ಇವರಿಗೆ ಸಮಾಧಾನಕರ ಬಹುಮಾನ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕೈನಿಂದ ಅರಳಿದ್ದು ವನ್ಯಪ್ರಾಣಿಗಳು. ಹೆಚ್ಚಿನ ಸ್ಪರ್ಧಿಗಳು ಸಿಂಹ, ಜಿಂಕೆ, ಆನೆಯನ್ನು ಬಣ್ಣದಲ್ಲಿ ಸೃಷ್ಟಿಸಲು ಮುಂದಾದರೆ, ಕೆಲವರು ಆ ಪ್ರಾಣಿಗಳು ಬಾಯಾರಿಕೆ ತೀರಿಸಿಕೊಳ್ಳುವುದನ್ನು ಬರೆದು ಗಮನ ಸೆಳೆದರು. ಸೈಂಟ್ ಮೇರಿಸ್ ಶಾಲೆಯ ಲಿಖಿತ್ ಪ್ರಥಮ ಸ್ಥಾನ ಪಡೆದರೆ, ಪ್ರೈಡ್ಯೂರೋ ಶಾಲೆಯ ಹಾರ್ದಿಕ್ ಪಿ.ಗೌಡ ದ್ವಿತೀಯ ಸ್ಥಾನ ಹಾಗೂ ಸೈಂಟ್ ಮೇರಿಸ್ ಇಂಟರ್ ನ್ಯಾಷನಲ್ ಶಾಲೆಯ ಡಿ.ಎಸ್ ನವ್ಯಶ್ರೀ ತೃತೀಯ ಸ್ಥಾನ ಪಡೆದುಕೊಂಡರು.  ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಚಿತ್ರಿಸಿದ್ದು ಬಣ್ಣ ಬಣ್ಣದ ಪಾತರಗಿತ್ತಿಗಳನ್ನು. ಅದರಲ್ಲಿ ಮೊದಲ ಸ್ಥಾನವನ್ನುದ ಸಮ್ಮಿತ್ ಶಾಲೆಯ ಅಫಾನ್ ಅಹಮ್ಮದ್ ಪಡೆದುಕೊಂಡರೆ, ದ್ವಿತೀಯ ಸ್ಥಾನ ಮಾಡೆಲ್ ಇಂಗ್ಲೀಷ್ ಶಾಲೆಯ ಬಿ.ಬಿ ಆಯೆಷಾ ಪಾಲಾಯಿತು. ತೃತೀಯ ಸ್ಥಾನವನ್ನು ವಾಸವಿ ವಿದ್ಯಾಲಯದ ಶ್ರವಣ್ ಪಡೆದುಕೊಂಡರು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಪಕ್ಷಿಗಳನ್ನು ರಚಿಸಲು ಸೂಚಿಸಿದ್ದು, ಬಾನಾಡಿಗಳ ಬಣ್ಣದ ಲೋಕವನ್ನೇ ಬಿಡಿಸಿ ತೆರೆದಿಟ್ಟರುಮಿಂಚುಳ್ಳಿ ಚಿತ್ರಿಸಿದ ಸೈಂಟ್ ಜೋಸೆಫ್ ಕಾನ್ವೆಂಟ್ನ ಎನ್.ಡಿ ಸಿಂಚನ  ಮತ್ತು ಹೊರ ದೇಶದ ಲೇಡಿ ಅಮ್ಹರ್ಟ್ಸ್ ಪೆಸೆಂಟ್ ಪಕ್ಷಿಯನ್ನು ಅತ್ಯಂತ ಸುಂದರವಾಗಿ ರಚಿಸಿದ ಟಿಎಂಎಸ್ ಶಾಲೆಯ ವಿಭಾ ಪ್ರಭು ಮೊದಲ ಬಹುಮಾನ ಪಡೆದುಕೊಂಡರು. ನಗರದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಶ್ಚಿಮಘಟ್ಟದ ಭೂ ದೃಶ್ಯಾವಳಿಯ ಚಿತ್ರಾವಳಿಯನ್ನು ವನ್ಯಪ್ರಾಣಿಗಳ ಸಹಿತ ಕುಂಚದ ಮೂಲಕ ಹಿಡಿದಿಟ್ಟರು. ಜೂನಿಯರ್ ಕಾಲೇಜಿನ ಗಗನ್ಎಸ್. ಪ್ರಥಮ ಸ್ಥಾನ ಪಡೆದುಕೊಂಡರೆ, ಜೆವಿಎಸ್ ಕಾಲೇಜಿನ ತಸ್ಮಿಯಾ ಬಾನು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

CHIKKAMAGALURU: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ದಾಳಿ

ವೃತ್ತಿಪರ ಕಲಾವಿದರಿಂದ ಉರಗ ಲೋಕದ ಅನಾವರಣ! 

ಸಾರ್ವಜನಿಕರು ಹಾಗೂ ವೃತ್ತಿಪರ ಕಲಾವಿದರಿಗೆ ಉರಗ ಲೋಕವನ್ನು ತೆರೆದಿಡಲು ಸೂಚಿಸಲಾಗಿದ್ದು, ಮೊದಲ ಮೂರು ಸ್ಥಾನಗಳು ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪಾಲಾಯಿತು. ಮೊದಲ ಸ್ಥಾನವನ್ನು ಡಿ.ಜಿ ಯಶ್ವಂತ್ ಪಡೆದುಕೊಂಡರೆ, ದ್ವಿತೀಯ ಸ್ಥಾನ ಟಿ.ಎನ್ ರಾಜೇಶ್ ಹಾಗೂ ತೃತೀಯ ಸ್ಥಾನ ಕೆ.ಎಸ್ ಸಂಜಯ್ ಪಾಲಾಯಿತು. 

ವ್ಯಕ್ತಿಗಳ ಮುಖದ ಮೇಲೆ ರಚಿಸಿದ ಚಿತ್ರ ಸ್ಪರ್ಧೆಯಲ್ಲಿ ಸೈಂಟ್ ಮೇರಿಸ್ ಶಾಲೆಯ ಸುವಿಧ್ ಮತ್ತು ಶ್ರೇಯಾಂಕ್ ತಂಡ ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ಬಹುಮಾನವನ್ನು ಸೈಂಟ್ ಜೋಸೆಫ್ ಕಾನ್ವೆಂಟ್ನ ಸಾನ್ವಿ ಮತ್ತು ಸಫಾಯಿ ರಾಮ್ ತಂಡ ಪಡೆದುಕೊಂಡಿತು. ಎಐಟಿ ಕಾಲೇಜಿನ ಎನ್.ರಕ್ಷಿತಾ ಮತ್ತು ಟಿಶಾ ಜೈನ್ ತಂಡ ಹಾಗೂ ಮೌಂಟೇನ್ ವ್ಯೂ ಶಾಲೆಯ ಕೀರ್ತನಾ ಮತ್ತು ಜುನೈದ್ ತಂಡ ಮೂರನೆ ಬಹುಮಾನ ಗಳಿಸಿತು.ಈ ಎಲ್ಲಾ ಸ್ಪರ್ಧೆಗಳಲ್ಲಿ 221 ಮಂದಿ ಭಾಗವಹಿಸಿದ್ದರು.
 

click me!