ಹಾವೇರಿ: ಕೊಬ್ಬರಿ ಹೋರಿ ಇನ್ನಿಲ್ಲ, ಕಂಬನಿ ಮಿಡಿದ ಅಭಿಮಾನಿಗಳು

By Girish Goudar  |  First Published Dec 3, 2022, 2:27 PM IST

ಅನಾರೋಗ್ಯದ ಸಮಸ್ಯೆಯಿಂದ ಹೋರಿ ಅಸುನೀಗಿದೆ. ಹೋರಿ ಸಾವನ್ನಪ್ಪಿದ ಸುದ್ದಿ ಕೇಳಿ ಕಣ್ಣಿರು ಹಾಕಿದ ಸಾವಿರಾರು ಅಭಿಮಾನಿಗಳು  


ಹಾವೇರಿ(ಡಿ.03):  ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಕೊಬ್ಬರಿ ಹೋರಿ(ಚಾಮುಂಡಿ) ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ ಇಂದು(ಶನಿವಾರ) ನಡೆದಿದೆ. ಅನಾರೋಗ್ಯದ ಸಮಸ್ಯೆಯಿಂದ ಹೋರಿ ಅಸುನೀಗಿದೆ. ಹೋರಿ ಸಾವನ್ನಪ್ಪಿದ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳ ಕಣ್ಣಿರು ಹಾಕಿದ್ದಾರೆ. 

ಅಖಾಡದಲ್ಲಿ ಚಾಮುಂಡಿಯದ್ದು ಬೇರೆಯೇ ಹವಾ ಇತ್ತು. ಹೀಗಾಗಿ ಚಾಮುಂಡಿ(ಹೋರಿ)ಸಾವಿರಾರು ಅಭಿಮಾನಿಗಳನ್ನ ಸಂಪಾದಿಸಿತ್ತು. ಜಿಲ್ಲೆಯಲ್ಲದೆ ಹೊರ ರಾಜ್ಯದ ಅಖಾಡದಲ್ಲೂ ಕೂಡ ಮನೆ ಮಾತಾಗಿತ್ತು. 

Tap to resize

Latest Videos

undefined

ಹೋರಿ ಬೆದರಿಸುವ ಸ್ಪರ್ಧೆ ಮೂವರು ಸಾವು; ನಿಷೇಧವಿದ್ದರೂ ನಡೆಯುತ್ತಿದೆ ಹೋರಿ ಹಬ್ಬ!

ಕಳೆದ ಐದು ವರ್ಷಗಳಲ್ಲಿ ಹೋರಿ ಹಬ್ಬದಲ್ಲಿ ಚಾಮುಂಡಿ ನೂರಾರು ಬಹುಮಾನ ಪಡೆದಿತ್ತು. ಆದರೆ, ಇಂದು ಹೋರಿ ಸಾವನ್ನಪ್ಪಿದ್ದರಿಂದ ಮಾಸುರು ಮತ್ತು ಜಿಲ್ಲೆಯಲ್ಲಿನ ಸಾವಿರಾರು ಅಭಿಮಾನಿಗಳ ಕಂಬನಿ ಮಿಡಿದಿದ್ದಾರೆ. ಚಾಮುಂಡಿಯನ್ನ ನೋಡಲು ಅಭಿಮಾನಿಗಳು ದಂಡೇ ಹರಿದು ಬರುತ್ತಿದೆ. ಹೋರಿ ನೆನೆದು ಅಭಿಮಾನಿಗಳು ಗೋಳಾಡುತ್ತಿದ್ದಾರೆ. 
 

click me!