Belagavi: ಹಾಲಿನ ದರ ಹೆಚ್ಚಳ ಬಗ್ಗೆ KMF ಅಧ್ಯಕ್ಷರು ಹೇಳಿದ್ದೇನು?

By Girish Goudar  |  First Published Mar 20, 2022, 11:42 AM IST

*  ಬೇಸಿಗೆ ಕಾಲದಲ್ಲಿ ಹಾಲು ಕಡಿಮೆ ಬರುತ್ತೆ ಹೀಗಾಗಿ ಹೆಚ್ಚಿನ ದರ ಕೊಟ್ಟರೆ ರೈತರಿಗೆ ಅನುಕೂಲ
*  ಇಡೀ ಭಾರತದಲ್ಲೇ ನಾವು ಅತಿ ಕಡಿಮೆ ದರದಲ್ಲಿ ಹಾಲು ಮಾರುತ್ತೇವೆ‌‌
*  ಗ್ರಾಹಕರಿಗೆ ಹೊರೆ ಆಗದ ಹಾಗೆ ಹಾಲಿನ ದರ ಹೆಚ್ಚು ಮಾಡಿದ್ರೆ ರೈತರಿಗೆ ಅನುಕೂಲ 


ಬೆಳಗಾವಿ(ಮಾ.20): ಕೆಎಂಎಫ್(KMF) ನಂದಿನಿ ಹಾಲಿನ(Nandini Milk) ದರ ಹೆಚ್ಚಳಕ್ಕೆ 14 ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಡ ಮಾಡ್ತಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಬೇಕು ಅದನ್ನೇ ರೈತರಿಗೆ ನೀಡ್ತೀವಿ ಅಂತಾ ಹೇಳುತ್ತಿದ್ದಾರೆ. ಅದನ್ನೇ ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿದ್ದೇವೆ. ಸಾಧಕ ಬಾಧಕ ನೋಡಿ ಬಳಿಕ ನಿರ್ಧಾರ ತಗೆದುಕೊಳ್ಳೋಣ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳುತ್ತಿದ್ದಾರೆ‌ ಅಂತ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ(Balachandra Jarkiholi) ತಿಳಿಸಿದ್ದಾರೆ.

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ಹಾಲು ಕಡಿಮೆ ಬರುತ್ತೆ ಹೀಗಾಗಿ ಹೆಚ್ಚಿನ ದರ ಕೊಟ್ಟರೆ ರೈತರಿಗೆ ಅನುಕೂಲ ಆಗುತ್ತೆ. ಬೆಳಗಾವಿಯಲ್ಲಿ(Belagavi) ಆಕಳು ಹಾಲು 23 ರೂಪಾಯಿಯಷ್ಟು ಇತ್ತು 25 ರೂಪಾಯಿ ಮಾಡಿದ್ದೇವೆ‌. ಎಮ್ಮೆ ಹಾಲು 36 ರೂಪಾಯಿ ಇದ್ದದ್ದನ್ನು 38 ರೂಪಾಯಿಗಳಷ್ಟು ಮಾಡಿದ್ದೇವೆ‌‌. ಇಡೀ ಭಾರತದಲ್ಲೇ(India) ನಾವು ಅತಿ ಕಡಿಮೆ ದರದಲ್ಲಿ ಹಾಲು ಮಾರುತ್ತೇವೆ‌‌. ಬೇರೆಡೆ ಹಾಲಿನ ದರ ಹೆಚ್ಚಿದೆ. ಗ್ರಾಹಕರಿಗೆ ಹೊರೆ ಆಗದ ಹಾಗೇ ಹಾಲಿನ ದರ ಹೆಚ್ಚು ಮಾಡಿದ್ರೆ ರೈತರಿಗೆ(Farmera) ಅನುಕೂಲ ಆಗುತ್ತೆ‌. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನೂ ನಿರ್ಧಾರ ತಗೆದುಕೊಳ್ಳುತ್ತಾರೆ ನೋಡಿ ನಾವು ನಿರ್ಣಯ ಕೈಗೊಳ್ಳುತ್ತೇವೆ' ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

Tap to resize

Latest Videos

KMF Price Hike: ಕೊರೋನಾ ನಡುವೆ ಜನರಿಗೆ ಮಿಲ್ಕ್ ಶಾಕ್,  ಲೀಟರ್‌ಗೆ 3 ರೂ.  ಏರಿಕೆ ಫಿಕ್ಸ್?

ಬೆಳಗಾವಿಯಲ್ಲಿ ಅತ್ಯಾಧುನಿಕ NMF ಘಟಕ

ಇನ್ನು ಬೆಳಗಾವಿಯಲ್ಲಿ ನಂದಿನಿ ಮಿಲ್ಕ್ ಪ್ರೊಡಕ್ಟ್ ಘಟಕ ನಿರ್ಮಾಣಕ್ಕೆ ನೂರು ಎಕರೆ ಜಮೀನು ನೋಡುತ್ತಿದ್ದೇವೆ ಅಂತಾ ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ನಂದಿನಿ ಮಿಲ್ಕ್ ಪ್ರೊಡಕ್ಟ್ ಘಟಕ ಸ್ಥಾಪನೆಗೆ ಹೆದ್ದಾರಿ ಸಂಪರ್ಕ, ನೀರಿನ ಅನುಕೂಲ ಇರುವಂತಹ ಜಾಗ ಹುಡುಕುತ್ತಿದ್ದೇವೆ. ಆ ದೃಷ್ಟಿಯಲ್ಲಿ ಎಲ್ಲಾ ಪ್ಲ್ಯಾನ್ ಮಾಡುತ್ತಿದ್ದೇವೆ.‌ ಅದಕ್ಕಾಗಿ ಬೆಳಗಾವಿ ನಗರದ ಸುತ್ತಮುತ್ತ ಜಾಗ ನೋಡುತ್ತಿದ್ದೇವೆ. ಜಾಗ ಸಿಕ್ಕ ಬಳಿಕ 300 ಕೋಟಿ ವೆಚ್ಚದಲ್ಲಿ ನಂದಿನಿ ಹಾಲು‌ ಉತ್ಪನ್ನಗಳ ಘಟಕ‌ ನಿರ್ಮಾಣ ಆಗುತ್ತೆ. ಇದರಿಂದ ಈ ಭಾಗದ ಜನರಿಗೆ ಉದ್ಯೋಗವಕಾಶವೂ ಸಿಗುತ್ತದೆ ಅಂತ ಹೇಳಿದ್ದಾರೆ. 

ಕರ್ನಾಟಕ(Karnataka), ಮಹಾರಾಷ್ಟ್ರ ಗೋವಾದಲ್ಲಿ ಮಾರ್ಕೆಟಿಂಗ್ ಮಾಡಲು ಸಹ ಅನುಕೂಲ ಆಗುತ್ತೆ‌. ಈಗ ಹಾಲು ಹೊರತು ಪಡಿಸಿ ಹಾಲಿನ ಇತರ ಉತ್ಪನ್ನಗಳು ಬೆಂಗಳೂರಲ್ಲಿ ತಯಾರು ಮಾಡಲಾಗುತ್ತಿದೆ‌. ಬೆಂಗಳೂರಿಂದ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಸರಬರಾಜು ಮಾಡಲು ಎರಡು ದಿನಗಳ ಕಾಲ ಸಮಯ ಬೇಕಾಗುತ್ತೆ‌.  ಬೆಳಗಾವಿಯಲ್ಲಿ ಘಟಕ ನಿರ್ಮಾಣ ಆದ್ರೆ ಹಾಲಿನ ಉತ್ಪನ್ನಗಳು ಬೇಗ ತಲುಪುತ್ತೆ.  ಕೆಎಂಎಫ್ ಉತ್ಪನ್ನಗಳಿಗೆ ಡಿಮ್ಯಾಂಡ್ ಜಾಸ್ತಿ ಇದ್ದು ಸಪ್ಲೈ ಮಾಡಲಾಗುತ್ತಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೆಳಗಾವಿಯಲ್ಲಿ ಪ್ಲಾಂಟ್ ಮಾಡುತ್ತೇವೆ. ಇದರಿಂದ ಹಾಲಿನ ಉತ್ಪನ್ನಗಳನ್ನು ಮಾಡಲು ಅನುಕೂಲ ಆಗುತ್ತದೆ‌. ರೈತರು, ಗ್ರಾಹಕರಿಗೆ ಅನುಕೂಲ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. 

Fake Nandini Ghee Racket: ಮೈಸೂರಲ್ಲಿ ತಯಾರು, ಬೆಂಗಳೂರಿನಲ್ಲಿ ಮಾರಾಟ ಜಾಲ ಪತ್ತೆ

ಪವರ್ ಸ್ಟಾರ್ ಅಪ್ಪು ಅನಘ್ರ್ಯ ರತ್ನ: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಕೆಎಂಎಫ್‌ (KMF) ನಂದಿನಿ ರಾಯಭಾರಿಯಾಗಿದ್ದ ನಟ ದಿವಂತ ಪುನೀತ್‌ ರಾಜ್‌ಕುಮಾರ್‌ (Puneet Rajkumar) ಅವರು ಅಗಲಿದ್ದರೂ ಅವರ ನೆನಪು ಜನರ ಹೃದಯದಲ್ಲಿ ಶಾಶ್ವತವಾಗಿರುತ್ತದೆ. ಅವರು ಕರ್ನಾಟಕದ ಅನಘ್ರ್ಯ ರತ್ನ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಕೆಎಂಎಫ್‌ ಪ್ರಧಾನ ಕಚೇರಿಯಲ್ಲಿ ಗುರುವಾರ ದಿ. ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೆಎಂಎಫ್‌ ಬೆಳವಣಿಗೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪಾತ್ರ ಹಿರಿದಾಗಿತ್ತು. 

ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಸ್ವಯಂ ಪ್ರೇರಿತವಾಗಿ ನಮ್ಮ ಸಂಸ್ಥೆಯ ನೌಕರರು ರಕ್ತದಾನ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಎಂಎಫ್‌ ರಾಜ್ಯದ ಎಲ್ಲ ವರ್ಗಗಳ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ರುಚಿ, ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಒದಗಿಸುತ್ತಿದೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿಯೂ ನಮ್ಮ ನಂದಿನಿ ಬ್ರ್ಯಾಂಡ್‌ ಗ್ರಾಹಕರ ಆಯ್ಕೆಯಾಗಿದೆ ಎಂದು ಹೇಳಿದ್ದರು. 
 

click me!