ಚೆನ್ನಮ್ಮಳ ದಿಟ್ಟತನ ಮಹಿಳೆಯರು ಅಳವಡಿಸಿಕೊಳ್ಳಬೇಕು: ಕೆ.ಶ್ರೀನಿವಾಸ ಗೌಡ

By Ravi Janekal  |  First Published Oct 23, 2022, 2:36 PM IST

ಭಾರತ ದೇಶ ಕಂಡ ಅಪ್ರತಿಮ ಹೋರಾಟಗಾರ್ತಿ ನಾಡಿನ ಕಿತ್ತೂರು ರಾಣಿ ಚೆನ್ನಮ್ಮ ಅವರ ದಿಟ್ಟತನವನ್ನು ಸಮಾಜದ ಎಲ್ಲ ಮಹಿಳೆಯರು ಅಳವಡಿಸಿಕೊಳ್ಳಬೇಕು ಎಂದು ಕೋಲಾರ ವಿಧಾನಸಭಾ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ತಿಳಿಸಿದರು.


ಕೋಲಾರ (ಅ.23) : ಭಾರತ ದೇಶ ಕಂಡ ಅಪ್ರತಿಮ ಹೋರಾಟಗಾರ್ತಿ ನಾಡಿನ ಕಿತ್ತೂರು ರಾಣಿ ಚೆನ್ನಮ್ಮ ಅವರ ದಿಟ್ಟತನವನ್ನು ಸಮಾಜದ ಎಲ್ಲ ಮಹಿಳೆಯರು ಅಳವಡಿಸಿಕೊಳ್ಳಬೇಕು ಎಂದು ಕೋಲಾರ ವಿಧಾನಸಭಾ ಶಾಸಕರಾದ ಕೆ. ಶ್ರೀನಿವಾಸಗೌಡ ಅವರು ತಿಳಿಸಿದರು. 

ಇಂದಿನಿಂದ 3 ದಿನ ಕಿತ್ತೂರು ಉತ್ಸವ: ಸಿಎಂ ಬೊಮ್ಮಾಯಿ ಚಾಲನೆ

Tap to resize

Latest Videos

ಇಂದು ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್  ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಮುಂದಿನ ದಿನಗಳಲ್ಲಿ  ಸಮಾಜದ ಹೆಣ್ಣುಮಕ್ಕಳಿಗೆ  ಅವರ ಜೀವನದ ಆದರ್ಶ ಅಂಶಗಳನ್ನು  ಹಾಗೂ ಅವರ ಸಾಧನೆಗಳನ್ನು ತಿಳಿಸುವ ಮೂಲಕ ಮಹಿಳೆಯರ  ಸಬಲೀಕರಣ ಹೆಚ್ಚಿಸಲಾಗುತ್ತೆ. ಮುಂದಿನ ವರ್ಷ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಹೆಣ್ಣು ಮಕ್ಕಳನ್ನು ಕರೆಸಿ ಚೆನ್ನಮ್ಮ ಜೀವನ ಕುರಿತು ಒಂದು ದೊಡ್ಡ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಅವರು ಮಾತನಾಡಿ ಈ ದಿನ ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸುತ್ತಿದ್ದು ಅವರು ನಾಡಿಗಾಗಿ ಮಾಡಿದ ಹೋರಾಟವು ಚಿರಸ್ಮರಣೀಯ ಎಂದರು. ಕೋಲಾರ ಜಿಲ್ಲೆಯ ಎಲ್ಲಾ ನಾಗರಿಕ  ಬಂಧುಗಳು ಜಾತಿ ಭೇದ ಮರೆತು ಎಲ್ಲರೂ  ಸೇರಿ  ಪರಿಸರಕ್ಕೆ ಹಾನಿಯಾಗದಂತೆ ಪರಿಸರಸ್ನೇಹಿ ದೀಪಾವಳಿಯನ್ನು ಆಚರಿಸಬೇಕು  ಎಂದು ಇದೇ ಸಂದರ್ಭದಲ್ಲಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ನಿನ್ನೆ ರಾತ್ರಿ ಅಕಾಲಿಕ ಮರಣ ಹೊಂದಿದ ಕರ್ನಾಟಕ ವಿಧಾನಸಭೆಯ  ಉಪಸಭಾಪತಿಗಳಾದ ಶ್ರೀ ಆನಂದ್ ಮಾಮನಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಆನಂದ ಮಾಮನಿ ನಿಧನ: ಜನಸಂಕಲ್ಪ ಯಾತ್ರೆ, ಕಿತ್ತೂರು ಉತ್ಸವ ಮುಂದೂಡಿಕೆ

ಕಾರ್ಯಕ್ರಮದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ.ವಿ,  ವಕೀಲರು ಹಾಗೂ ಸಾಹಿತಿ ರವೀಂದ್ರ, ಆರೋಗ್ಯ ಶಿಕ್ಷಣಾಧಿಕಾರಿ  ಪ್ರೇಮ, ಮಹಿಳಾ ಹೋರಾಟಗಾರ್ತಿ ಮಮತಾ ರೆಡ್ಡಿ, ಹಿರಿಯ ಪತ್ರಕರ್ತರಾದ ಬಿ.ಸುರೇಶ್,  ಸಮುದಾಯದ ಮುಖಂಡರು  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!