ಕೂಡ್ಲಿಗಿ ಡಿಪೋದಲ್ಲಿ ಡಕೋಟಾ ಬಸ್‌ಗಳದ್ದೇ ದರ್ಬಾರ್‌!

By Kannadaprabha News  |  First Published Oct 23, 2022, 12:58 PM IST

ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಕೂಡ್ಲಿಗಿ ಎಂದರೆ ಅಚ್ಚುಮೆಚ್ಚು, ಅವರು ಪದೇ ಪದೇ ಕೂಡ್ಲಿಗಿಗೆ ಬಂದಾಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇದನ್ನೇ ಹೇಳುತ್ತಾರೆ. ಆದರೆ ಇಲ್ಲಿಯ ಸಾರಿಗೆ ವ್ಯವಸ್ಥೆ ಬಗ್ಗೆ ಅವರು ಗಮನ ಹರಿಸಿಲ್ಲ. ಇಲ್ಲಿಯ ಬಸ್‌ ಡಿಪೋಕ್ಕೆ ಭೇಟಿ ನೀಡಿ ಇಲ್ಲಿಯ ಬಸ್‌ ಹಾಗೂ ಇನ್ನಿತರ ಅವ್ಯವಸ್ಥೆ ಪರಿಶೀಲಿಸಿ ಪರಿಹಾರ ನೀಡಬೇಕೆಂಬುದು ಜನರ ಒತ್ತಾಸೆ.


ಭೀಮಣ್ಣ ಗಜಾಪುರ

 ಕೂಡ್ಲಿಗಿ (ಅ.23): ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಕೂಡ್ಲಿಗಿ ಎಂದರೆ ಅಚ್ಚುಮೆಚ್ಚು, ಅವರು ಪದೇ ಪದೇ ಕೂಡ್ಲಿಗಿಗೆ ಬಂದಾಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇದನ್ನೇ ಹೇಳುತ್ತಾರೆ. ಆದರೆ ಇಲ್ಲಿಯ ಸಾರಿಗೆ ವ್ಯವಸ್ಥೆ ಬಗ್ಗೆ ಅವರು ಗಮನ ಹರಿಸಿಲ್ಲ. ಇಲ್ಲಿಯ ಬಸ್‌ ಡಿಪೋಕ್ಕೆ ಭೇಟಿ ನೀಡಿ ಇಲ್ಲಿಯ ಬಸ್‌ ಹಾಗೂ ಇನ್ನಿತರ ಅವ್ಯವಸ್ಥೆ ಪರಿಶೀಲಿಸಿ ಪರಿಹಾರ ನೀಡಬೇಕೆಂಬುದು ಜನರ ಒತ್ತಾಸೆ.

Tap to resize

Latest Videos

undefined

ಸಮಸ್ಯೆಗಳ ಕೂಪವಾದ ಯರಗುಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್

ಹೌದು. ಇದೊಂದು ಡಕೋಟಾ ಬಸ್‌ಗಳ ಡಿಪೋ! ಈ ಡಿಪೋ ಒಳಗೆ ಕಾಲಿಟ್ಟರೆ ಹೊಸ ಬಸ್ಸುಗಳ ಶಬ್ದ ಕೇಳುವುದು ನಿಮಗೆ ಕನಸಿನ ಮಾತು, ಗುಜರಿಗೆ ಹೋಗುವ ಬಸ್‌ಗಳನ್ನೇ ಸದಾ ರೀಪೇರಿ ಮಾಡುವ ಸದ್ದೇ ಕೇಳುತ್ತದೆ. ಸೋರುವ, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಸ್ಸುಗಳೇ ಕಾಣುತ್ತವೆ. ಕೂಡ್ಲಿಗಿಯಲ್ಲಿ ಡಿಪೋ ಇದ್ದರೂ ಸಹ ಬೆಳಗ್ಗೆ 6 ಗಂಟೆಗೆ ಹಾಗೂ ಸಂಜೆ 6 ಗಂಟೆಯ ನಂತರ ಕೊಟ್ಟೂರಿಗೆ ಹೋಗಲು ಬೇರೆ ಡಿಪೋಗಳ ಬಸ್ಸುಗಳನ್ನೇ ಕಾಯಬೇಕು. ಹಗಲೆಲ್ಲಾ ಖಾಲಿ ತಿರುಗುವ ಬಸ್ಸುಗಳು ಸಂಜೆಯಾಗುತ್ತಿದ್ದಂತೆ ಕಾಣಿಸುವುದಿಲ್ಲ. ಈ ಸಂದರ್ಭದಲ್ಲಿ ಪ್ರಯಾಣಿಕರು ಕೂಡ್ಲಿಗಿ ಡಿಪೋವನ್ನು ಪ್ರತಿನಿತ್ಯ ಶಪಿಸುತ್ತಾರೆ. ಕೂಡ್ಲಿಗಿ ಡಿಪೋಗೆ ಬರುವ ಹೊಸ ಬಸ್ಸುಗಳನ್ನು ಬೇರೆ ಡಿಪೋಗಳಿಗೆ ನೀಡಿ ಅಲ್ಲಿಯ ಹಳೆಯ ಬಸ್ಸುಗಳನ್ನು ಕೂಡ್ಲಿಗಿ ಡಿಪೋಗೆ ಕಳುಹಿಸುತ್ತಾರೆ. ಇದನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿಯೇ 2004 ರಿಂದ ಇಲ್ಲಿಯವರೆಗೂ ನಷ್ಟದಲ್ಲೆ ಕೂಡ್ಲಿಗಿ ಡಿಪೋ ನಲುಗುತ್ತಿದೆ.

ಉತ್ತಮ ಮಾರ್ಗಗಳು ಪಕ್ಕದ ಡಿಪೋಗಳಿಗೆ:

ಕೂಡ್ಲಿಗಿ ಸಾರಿಗೆ ಡಿಪೋಗೆ ಉತ್ತಮ ಆದಾಯ ತಂದು ಕೊಡುವ ಮಾರ್ಗಗಳನ್ನು ರದ್ದು ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿಂದೆ ಇದ್ದ ಹುಬ್ಬಳ್ಳಿ, ಪಣಜಿ, ಮಣಿಪಾಲ, ಧರ್ಮಸ್ಥಳ, ಉಜ್ಜಿನಿ-ಬಳ್ಳಾರಿ, ಮಂತ್ರಾಲಯ, ಸವದತ್ತಿ, ಹಗರಿಬೊಮ್ಮನಹಳ್ಳಿ -ಬೆಂಗಳೂರು, ಕೊಟ್ಟೂರು-ಮತ್ತಿಹಳ್ಳಿ-ದಾವಣಗೆರೆ ಮಾರ್ಗಗಳು ರದ್ದಾಗಿವೆ. ಕೂಡ್ಲಿಗಿ ಡಿಪೋದಲ್ಲಿ 4 ದಶಕಗಳಿಂದ ಇದ್ದ ಮಾರ್ಗಗಳನ್ನು ಈಗ ಪಕ್ಕದ ಹಗರಿಬೊಮ್ಮನಹಳ್ಳಿ ಹಾಗೂ ಹರಪನಹಳ್ಳಿ ಡಿಪೋಗೆ ಹಸ್ತಾಂತರಿಸಲಾಗಿದೆ. ಇಷ್ಟೆಲ್ಲ ಮಾರ್ಗಗಳು ರದ್ದಾದರೂ ಯಾವೊಬ್ಬ ಜನಪ್ರತಿನಿಧಿಗಳು ಸಾರಿಗೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ವಿದ್ಯಾರ್ಥಿಗಳ ಪರದಾಟ:

ಕೂಡ್ಲಿಗಿ ತಾಲೂಕಿನ ಶೇ.60ರಷ್ಟುಹಳ್ಳಿಗಳಿಗೆ ಈಗಲೂ ಸಾರಿಗೆ ಇಲಾಖೆಯ ಬಸ್ಸುಗಳು ಇಲ್ಲ, ವಿದ್ಯಾರ್ಥಿಗಳು ಖಾಸಗಿ ಬಸ್‌, ಟಂಟಂಗಳನ್ನೇ ಆಶ್ರಯಿಸಬೇಕಾಗಿದೆ. ಗುಡೇಕೋಟೆ ಹಾಗೂ ಹೊಸಹಳ್ಳಿ ಹೋಬಳಿಗಳ ಬಹುತೇಕ ಹಳ್ಳಿಗಳಿಗೆ ಕೂಡ್ಲಿಗಿ ಡಿಪೋದಿಂದ ಬಸ್‌ಗಳೇ ಹೋಗುವುದಿಲ್ಲ, ಮೂರ್ನಾಲ್ಕು ಮಾರ್ಗಗಳು ಬಿಟ್ಟರೆ ಮುಗೀತು,ಹೀಗಾಗಿ ವಿದ್ಯಾರ್ಥಿಗಳು ತಮ್ಮ ಹಳ್ಳಿಗಳ ತಲುಪಲು ಇರುವ ಒಂದು ಬಸ್ಸಿಗೆ ಹರಸಾಹಸಪಡಬೇಕು.

ಗಣಿನಾಡಿನಿಂದ ಕೈ ರಣಕಹಳೆ: ಡಿಕೆಶಿ ಮಾಡಿದ ಶಪಥ ಏನು?

ಕೂಡ್ಲಿಗಿ ಸಾರಿಗೆ ಡಿಪೋಗೆ ಹೊಸ ಬಸ್‌ಗಳನ್ನು ತರಿಸುವ ಬಗ್ಗೆ ಯಾವ ಅಧಿಕಾರಿಗಳು ಗಮನಹರಿಸುತ್ತಿಲ್ಲ ಈಗಲಾದರೂ ಹಳೇ ಬಸ್‌ಗಳನ್ನು ತೆಗೆದು ಹತ್ತಾರು ಹೊಸ ಬಸ್‌ಗಳನ್ನು ಮಂಜೂರು ಮಾಡಿಸಿದರೆ ಒಂದಿಷ್ಟುಸುಧಾರಣೆಯೊಂದಿಗೆ ನಷ್ಟದ ಹೊರೆ ತಗ್ಗಬಹುದು.

ಮಂಜುನಾಥ ಕೂಡ್ಲಿಗಿಯ ನಾಗರಿಕ

ಕೂಡ್ಲಿಗಿ ಡಿಪೋದಲ್ಲಿ ಚಾಲಕ ನಿರ್ವಾಹಕರ ಕೊರತೆ ಇದೆ, ಕೋವಿಡ್‌ ನಂತರ ಕೆಲವು ಮಾರ್ಗಗಳು ಬೇರೆ ಡಿಪೋಗಳಿಗೆ ಹೋಗಿವೆ, ಈಗ ಗುತ್ತಿಗೆ ಆಧಾರದ ಮೇಲೆ ಡ್ರೈವರ್‌, ಕಂಡಕ್ಟರ್‌ಗಳನ್ನು ತೆಗೆದುಕೊಳ್ಳಬೇಕೆಂದು ಹಿರಿಯ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ, ಸಿಬ್ಬಂಧಿ ಕೊರತೆ ನೀಗಿದರೆ ಹಳೆ ರೂಟ್‌ಗಳನ್ನು ಪುನಃ ಕೂಡ್ಲಿಗಿ ಡಿಪೋದಿಂದ ಓಡಿಸುತ್ತೇವೆ, 15 ವರ್ಷಗಳವರೆಗೆ ಬಸ್ಸುಗಳ ಫಿಟ್‌ನೆಸ್‌ ಇರುತ್ತದೆ, ಪ್ರತಿವರ್ಷ ಎಫ್‌.ಸಿ.ಮಾಡಿಸುವಾಗ ಫಿಟ್‌ನೆಸ್‌ ನೋಡಿಯೇ ಸಾರಿಗೆ ಇಲಾಖೆ ಅಧಿಕಾರಿಗಳು ಸರ್ಟಿಫಿಕೇಟ್‌ ನೀಡುತ್ತಾರೆ ಅಂತಹ ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತದೆ.

ಮರಿಲಿಂಗಪ್ಪ, ಕೂಡ್ಲಿಗಿ ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್‌
 

click me!