ಮೈಸೂರು (ಜು.09): ನಗರದ ಉರಗತಜ್ಞ ಸ್ನೇಕ್ ಶ್ಯಾಮ್ ಅವರ ಪುತ್ರ ಸೂರ್ಯಕೀರ್ತಿ ಇತ್ತೀಚೆಗೆ ಕೊಡಗಿನಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಪ್ರಥಮ ಬಾರಿಗೆ ರಕ್ಷಣೆ ಮಾಡಿದ್ದಾರೆ.
ಕೊಡಗಿನ ಮೂರ್ನಾಡು ಸಮೀಪದ ಬೋಪಯ್ಯ ಎಂಬವರ ನಿವಾಸದಲ್ಲಿ ಟೈರಿನ ಮಧ್ಯಭಾಗದಲ್ಲಿ ಅಡಗಿಕೊಂಡಿದ್ದ ಈ ಕಾಳಿಂಗ ಸರ್ಪವನ್ನು ಸೂರ್ಯ ರಕ್ಷಿಸಿದರು. ನಂತರ ಬಾಗಮಂಡಲದ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಈ ಕಾಳಿಂಗ ಸರ್ಪವನ್ನು ಬಿಡುಗಡೆ ಮಾಡಿದರು.
undefined
12 ಅಡಿ ಕಾಳಿಂಗ ರಕ್ಷಣೆ : 326 ಹಾವುಗಳು ಕಾಡಿಗೆ ...
ಕೊಡಗಿನಲ್ಲಿ ಹಾವುಗಳನ್ನು ಸಂರಕ್ಷಣೆ ಮಾಡುವ ಪ್ರಜ್ವಲ್ ಅವರು ಸೂರ್ಯಕೀರ್ತಿಗೆ ಕರೆ ಮಾಡಿ ಕಾಳಿಂಗ ಸರ್ಪ ಇರುವ ಬಗ್ಗೆ ಮಾಹಿತಿ ನೀಡಿದರು. ನಂತರ ಸೂರ್ಯ ಅಲ್ಲಿಗೆ ತೆರಳಿ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಕಾಳಿಂಗ ಸರ್ಪ ಕಂಡು ಬಂದರೆ ನನಗೆ ತಿಳಿಸುವಂತೆ ಸೂರ್ಯ ಕೀರ್ತಿ ಅವರು ಪ್ರಜ್ವಲ್ ಅವರ ಬಳಿ ಮನವಿ ಮಾಡಿದ್ದರು.
(ಯಾವುದೇ ಹಾವುಗಳು ಕಂಡು ಬಂದಲ್ಲಿ ಹಾಗೂ ಹಾವು ಕಚ್ಚಿದಲ್ಲಿ ಕೂಡಲೇ ಸೂರ್ಯಕೀರ್ತಿ, ಮೊ. 7022042028 ಸಂಪರ್ಕಿಸಿ)