ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶ್ವಾನವೊಂದು ಕೂಡ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟಿದೆ.
ಚಿಕ್ಕಮಗಳೂರು (ನ.17) : ಅಯ್ಯಪ್ಪ ದೇಗುಲವನ್ನು ಭಕ್ತರ ದರ್ಶನಕ್ಕೆ ತೆರೆಯಲಾಗಿದ್ದು ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಈ ವೇಳೆ ಅಯ್ಯಪ್ಪನ ಸನ್ನಿಧಿಗೆ ತೆರಳುತ್ತಾರೆ. ಇಲ್ಲಿ ಶ್ವಾನವೊಂದು ಕೂಡ ಶಬರಿಮಲೆಗೆ ಹೊರಟಿದೆ. ಕಾಲು ನಡಿಗೆಯಲ್ಲಿ ತೆರಳುತ್ತಿರುವ ಅಯ್ಯಪ್ಪ ಭಕ್ತರೊಂದಿಗೆ ನೂರಾರು ಕಿಮೀ ಪಾದಯಾತ್ರೆಯೊಂದಿಗೆ ಶ್ವಾನವೂ ಕೂಡ ಅಯ್ಯಪ್ಪ ದೇಗುಲಕ್ಕೆ ತೆರಳುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ತೋಡಾರು ಗ್ರಾಮದ ಮಾಲಾಧಾರಿಗಳು, ತಿರುಪತಿಯಿಂದ ಆಗಮಿಸಿದ್ದು, ಮಾಲಾಧಾರಿಗಳೊಂದಿಗೆ ಶ್ವಾನವೂ ಕೂಡ ಆಗಮಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಕ್ಟೋಬರ್ 31 ರಂದು ತಿರುಪತಿಯಿಂದ ಪಾದಯಾತ್ರೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಹೊರಟಿದ್ದು, 16 ದಿನ ಕಾಲ ಅಯ್ಯಪ್ಪ ಮಾಲಾಧಾರಿಗಳ ಜೊತೆ ಶ್ವಾನ ಪಾದಯಾತ್ರೆ ಮಾಡಿಕೊಂಡು ಬರುತ್ತಿದೆ. ನೂರಾರು ಕಿಲೋ ಮೀಟರ್ ಸಂಚರಿಸಿದ ಕಾರಣ ಶ್ವಾನದ ಕಾಲಿಗೆ ಎರಡು ಬಾರಿ ಚಿಕಿತ್ಸೆ ನೀಡಲಾಗಿದ್ದು, ಆದರೂ ತನ್ನ ಸಂಚಾರವನ್ನು ನಿಲ್ಲಿಸುತ್ತಿಲ್ಲ.
The lord Ayyappa devotees, undertaking the pilgrimage, say "We didn’t notice the dog at first. But as we continued, it kept showing up behind us every now & then. We offer it the food we prepare for ourselves. We perform pilgrimage every yr but it's a new experience." https://t.co/g2fUbJ2l9p
— ANI (@ANI)
ತಿರುಪತಿಯಿಂದ ಪಾದಯಾತ್ರೆ ಮೂಲಕ ಶಬರಿಮಲೆಗೆ ಹೊರಟ 6 ಮಂದಿ ಮಾಲಾಧಾರಿಗಳೊಂದಿಗೆ ಶ್ವಾನವೂ ಪಾದಯಾತ್ರೆ ಮಾಡುತ್ತಿದೆ.