ಅಪಹರಣ ಪ್ರಕರಣ: ಅಪ್ರಾಪ್ತೆ ಪೊಲೀಸ್ ವಶಕ್ಕೆ

By Kannadaprabha News  |  First Published Dec 11, 2023, 10:02 AM IST

ಹನುಮಾಪುರದ ಗುಜರಿ ಫ್ಯಾಕ್ಟರಿಯ ಬಳಿ ಕಲ್ಕತ್ತಾ ಮೂಲದ ಯುವಕ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅಪರಿಸಿದ್ದ ಹಿನ್ನೆಲೆಯಲ್ಲಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿ ಖಚಿತ ಮಾಹಿತಿ ಮೇರೆಗೆ ದೆಹಲಿಯ ಅಲಿಪುರ ಕಾರ್ಖಾನೆಯ ಬಳಿ ಆರೋಪಿಗಳನ್ನು ಬಂಧಿಸಿ, ಅಪ್ರಾಪ್ತೆಯನ್ನು ವಶಕ್ಕೆ ಪಡೆದಿದ್ದಾರೆ.


ಕುಣಿಗಲ್:  ಹನುಮಾಪುರದ ಗುಜರಿ ಫ್ಯಾಕ್ಟರಿಯ ಬಳಿ ಕಲ್ಕತ್ತಾ ಮೂಲದ ಯುವಕ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅಪರಿಸಿದ್ದ ಹಿನ್ನೆಲೆಯಲ್ಲಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿ ಖಚಿತ ಮಾಹಿತಿ ಮೇರೆಗೆ ದೆಹಲಿಯ ಅಲಿಪುರ ಕಾರ್ಖಾನೆಯ ಬಳಿ ಆರೋಪಿಗಳನ್ನು ಬಂಧಿಸಿ, ಅಪ್ರಾಪ್ತೆಯನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಕುಣಿಗಲ್ ಇನ್ಸ್ಪೆಕ್ಟರ್ ಅವರ ಮಾರ್ಗದರ್ಶನದಲ್ಲಿ ಪ್ರಕಾಶ್ ನಟರಾಜ್ ಮತ್ತು ನಂದಿನಿ ಸೇರಿದಂತೆ ಇತರರು ಭಾಗವಹಿಸಿದ್ದರು.

Latest Videos

undefined

ಬೆಂಗಳೂರಲ್ಲೂ ಹೆಚ್ಚು ಅಪಹರಣ

ಬೆಂಗಳೂರು (ಡಿ.5): ದಿನದಿಂದ ದಿನಕ್ಕೆ ಬೆಂಗಳೂರು ಅಪರಾಧಗಳ ತಾಣವಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಎನ್‌ಸಿಆರ್‌ಬಿ ವರದಿ ಬಂದಿದೆ. ಮಕ್ಕಳ ಕಿಡ್ನಾಪಿಂಗ್‌ ಕೇಸ್‌ಗಳಲ್ಲಿ ಬೆಂಗಳೂರು ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ (ಎನ್‌ಸಿಆರ್‌ಬಿ) ವಿಭಾಗ ತನ್ನ ವರದಿಯಲ್ಲಿ ತಿಳಿಸಿದೆ. ಪ್ರತಿ ವರ್ಷ ಎನ್‌ಸಿಆರ್‌ಬಿ ಈ ಕುರಿತಾದ ವಿವರಗಳನ್ನು ನೀಡುತ್ತದೆ. 2022ರಲ್ಲಿ ದೇಶದಲ್ಲಿ ನಡೆದ ಅಪರಾಧಗಳ ಪ್ರಮಾಣದ 546 ಪುಟಗಳ ವರದಿಯನ್ನು ಬಹಿರಂಗಪಡಿಸಿದೆ. ಇದರಲ್ಲಿ ಮಕ್ಕಳ ಕಿಡ್ನಾಪಿಂಗ್‌ ಕೇಸ್‌ನಲ್ಲಿ ಬೆಂಗಳೂರು 922 ಕೇಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿ ನವದೆಹಲಿ 5590 ಕೇಸ್‌ಗಳೊಂದಿಗೆ ಅಗ್ರಸ್ಥಾನದ ಕುಖ್ಯಾತಿ ಪಡೆದುಕೊಂಡಿದ್ದರೆ, 1176 ಕೇಸ್‌ಗಳೊಂದಿಗೆ ಮುಂಬೈ 2ನೇ ಸ್ಥಾನದಲ್ಲಿದೆ. ಬೆಂಗಳುರು 922 ಕೇಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆ ಬಳಿಕ ಪುಣೆ (676) ಹಾಗೂ ಇಂದೋರ್‌ (671) ನಗರಗಳಿವೆ.  ಜೈಪುರ (575), ನಾಗ್ಪುರ (472), ಕೋಲ್ಕತ್ತಾ (396) ಕ್ರಮವಾಗಿ 6, 7 ಹಾಗೂ 8ನೇ ಸ್ಥಾನದಲ್ಲಿದೆ.  ಉಳಿದಂತೆ ದೇಶದ ಇತರ ನಗರಗಳಾದ ಸೂರತ್‌ (279), ಅಹಮದಾಬಾದ್‌ (242), ಕಾನ್ಪುರ (158), ಹೈದರಾಬಾದ್‌ (140) ಹಾಗೂ ಲಖನೌ (101) ನಂತರದ ಸ್ಥಾನದಲ್ಲಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ (NCRB) 2022 ರ ವಾರ್ಷಿಕ ವರದಿಯ ಪ್ರಕಾರ, ಸತತ ಮೂರು ವರ್ಷಗಳ ಕಾಲ, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳು ರಾಜ್ಯಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದೆ. ಇದು ಭಾರತದಲ್ಲಿ ಒಟ್ಟಾರೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶೇಕಡಾ 10.5 ರಷ್ಟು ಏರಿಕೆಯನ್ನು ತೋರಿಸುತ್ತದೆ. 

021ರಲ್ಲಿ ಭಾರತದಲ್ಲಿ ಒಟ್ಟು 29,272 ಕೊಲೆ, ಉತ್ತರ ಪ್ರದೇಶ ನಂ.1

ಮಹಾರಾಷ್ಟ್ರದಲ್ಲಿ, 2022ರಲ್ಲಿ ವರದಿಯಾದ ಭ್ರಷ್ಟಾಚಾರ ಪ್ರಕರಣಗಳ ಸಂಖ್ಯೆ 773. 2021ರಲ್ಲಿ ಈ ಪ್ರಕರಣಗಳ ಸಂಖ್ಯೆ 749 ಇದ್ದರೆ, 2020ರಲ್ಲಿ ಇದರ ಪ್ರಮಾಣ 664 ಆಗಿತ್ತು. ಅದೇ ರಿತಿ ರಾಜಸ್ಥಾನದಲ್ಲಿ 2022ರಲ್ಲಿ 511 ಕೇಸ್‌ಗಳು ದಾಖಲಾಗಿದ್ದರೆ, 2021ರಲ್ಲಿ 501 ಹಾಗೂ 2020ರಲ್ಲಿ 363 ಕೇಸ್‌ಗಳು ದಾಖಲಾಗಿದ್ದವು. ಒಟ್ಟಾರೆಯಾಗಿ, ಕಳೆದ ವರ್ಷ ಭಾರತದಲ್ಲಿ 4,139 ಭ್ರಷ್ಟಾಚಾರ ಪ್ರಕರಣಗಳು ವರದಿಯಾಗಿವೆ. ಮಾಹಿತಿಯ ಪ್ರಕಾರ, ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು (2,883 ಪ್ರಕರಣಗಳು) ಟ್ರ್ಯಾಪ್ ಪ್ರಕರಣಗಳಾಗಿದೆ. ಇದರ ನಂತರ ಕ್ರಿಮಿನಲ್ ದುಷ್ಕೃತ್ಯದ ಪ್ರಕರಣಗಳು (547 ಪ್ರಕರಣಗಳು) ಮತ್ತು ಆದಾಯ ಮೀರಿ ಆಸ್ತಿ ಗಳಿಕೆಯನ್ನು ಒಳಗೊಂಡ ಪ್ರಕರಣಗಳು (372) ನಂತರದ ಸ್ಥಾನದಲ್ಲಿದೆ.

click me!