ಸರಳ ವಿವಾಹ ಸಮಾಜಕ್ಕೆ ಮಾದರಿ: ಟಿ.ಲಕ್ಷ್ಮೀನರಸಯ್ಯ

By Kannadaprabha News  |  First Published Dec 11, 2023, 9:59 AM IST

ಸರಳ ಮದುವೆ ಸಹಬಾಳ್ವೆ ಸುಖ ಸಂಸಾರಕ್ಕೆ ಸೂತ್ರವಾಗಿದ್ದು, ಪೋಷಕರು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹ ಮಾಡಲು ಪೋತ್ಸಾಹ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಲಕ್ಷೀನರಸಯ್ಯ ಕರೆ ನೀಡಿದರು.


 ಮಧುಗಿರಿ :  ಸರಳ ಮದುವೆ ಸಹಬಾಳ್ವೆ ಸುಖ ಸಂಸಾರಕ್ಕೆ ಸೂತ್ರವಾಗಿದ್ದು, ಪೋಷಕರು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳ ವಿವಾಹ ಮಾಡಲು ಪೋತ್ಸಾಹ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಲಕ್ಷೀನರಸಯ್ಯ ಕರೆ ನೀಡಿದರು.

ಮಧುಗಿರಿಯ ಕನ್ನಡ ಭವನದಲ್ಲಿ ಸದಾಶಿವನಗರ , ಸುವರ್ಣಮುಖಿ ವಿದ್ಯಾ ಸಂಸ್ಥೆ ಹಾಗೂ ಲಾಲಿತ್ಯ ಸಂಗೀತ ಶಾಲೆ ಮಧುಗಿರಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಛಲವಾದಿ ವಧು -ವರರ ಅನ್ವೇಷಣಾ ಕೇಂದ್ರದ ಸಮಾರಂಭದಲ್ಲಿ ಅಂಬೇಡ್ಕರ್‌ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

Tap to resize

Latest Videos

undefined

ಶಾಸ್ತ್ರ,ಬಿಟ್ಟು ಬಿಡಿ, ಮಂತ್ರ ಮಾಂಗಲ್ಯದ ಮೂಲಕ ಮದುವೆ ಮಾಡಿಕೊಳ್ಳಿ,ದುಂದು ವೆಚ್ಚ ಮಾಡದೇ ಆರ್ಥಿಕವಾಗಿ ಸದೃಡರಾಗಿ ಸರಳ ವಿವಾಹವಾಗಿ ಸಮಾಜದ ಎದುರು ಸಂಸಾರಕ್ಕೆ ಅಡಿಪಾಯ ಹಾಕಿ ಎಂದರು.

ನಿವೃತ್ತ ಎಸ್‌.ಬಿ.ಐ .ಬ್ಯಾಂಕ್‌ ಮ್ಯಾನೇಜರ್‌ ಮಹೇಶ್‌ಚಂದ್ರ ಪ್ಪ್ರಾಸ್ತಾವಿಕ ಭಾಷಣದಲ್ಲಿ ನಾವು ರಾಜ್ಯಾದಾದ್ಯಂತ ವಧ -ವರರ ಅನ್ವೇಷಣಾ ಕೇಂದ್ರಗಳನ್ನು ಮಾಡಿಕೊಂಡು ಬರುತ್ತಿದ್ದು ಉತ್ತಮ ಪ್ರತಿಕ್ರಿಯೇ ದೊರಕಿದೆ ಇದು ಇನ್ನೂ ಹೆಚ್ಚಾಗಬೇಕು. ಸರಳ ವಾಗವುದರಿಂದ ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಹ ಗಂಡುೃಹೆಣ್ಣು ಪರಸ್ಪರ ಮುಖಾಮುಖಿಯಾಗುವುದರಿಂದ ವಿವಾಹ ಸಂಬಂಧಗಳು ಸ್ಥಳದಲ್ಲೇ ನಿರ್ಣಯವಾಗಲಿದೆ ಎಂದರು.

ಸುವರ್ಣಮುಖಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಆರ್‌.ಕೆ.ದೃವಕುಮಾರ್‌, ನೈತಿಕ ತಳಹದಿಯ ಮೇಲೆ ಉತ್ತಮ ಸಮಾಜ ನಿರ್ಮಾಣಕ್ಕೆ ಸರಳ ,ಸುಂದರ ವಿವಾಹಗಳು ನಡೆಯಬೇಕು. ವಧು ವರರನ್ನು ಮುಖಾಮುಖಿ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ಬೆಸ್ಕಾಂ ಅಧಿಕಾರಿ ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರ್‌.ಕೆ.ದೃವಕುಮಾರ್‌,ಹೊಸಕೆರೆ ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜು, ಧನಂಜಯ್‌, ಛಲವಾದಿ ಮಹಾಸಭಾದ ಅಧ್ಯಕ್ಷ ಕೊಡಿಗೇನಹಳ್ಳಿ ವೆಂಕಟೇಶ್‌, ಲಾಲಿತ್ಯ ಸಂಗೀತ ಶಾಲೆ ಲಲಿತಾಂಭ ಲಕ್ಷ್ಮೀನರಸಯ್ಯ , ನರಸಿಂಹಮೂರ್ತಿ, ಅನಿಲ್‌ ಇದ್ದರು.

click me!