ವಿಷಾಹಾರ ಸೇವಸಿ 16ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ; ಘಟನೆ ನಡೆದ್ರೂ ಸ್ಥಳಕ್ಕೆ ಬಾರದ ಹಾಸ್ಟೆಲ್ ವಾರ್ಡನ್!

Published : Dec 11, 2023, 07:40 AM IST
ವಿಷಾಹಾರ ಸೇವಸಿ 16ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ; ಘಟನೆ ನಡೆದ್ರೂ ಸ್ಥಳಕ್ಕೆ ಬಾರದ ಹಾಸ್ಟೆಲ್ ವಾರ್ಡನ್!

ಸಾರಾಂಶ

ಹಾಸ್ಟೆಲ್‌ನಲ್ಲಿ ಉಪಾಹಾರ ಸೇವಿಸಿ 16ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸಮಾಜ ಕಲ್ಯಾಣ ಹಾಸ್ಟೆಲ್ ನಲ್ಲಿ ನಡೆದಿದೆ. ಮಾನ್ವಿ ಪಟ್ಟಣದ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿನಿಯರು. 

ರಾಯಚೂರು (ಡಿ.11): ಹಾಸ್ಟೆಲ್‌ನಲ್ಲಿ ಉಪಾಹಾರ ಸೇವಿಸಿ 16ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸಮಾಜ ಕಲ್ಯಾಣ ಹಾಸ್ಟೆಲ್ ನಲ್ಲಿ ನಡೆದಿದೆ.

ಮಾನ್ವಿ ಪಟ್ಟಣದ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿನಿಯರು. ಹಾಸ್ಟೆಲ್‌ನಲ್ಲಿ ಪಲಾವ್ ತಿಂದಿರುವ ವಿದ್ಯಾರ್ಥಿನಿಯರು ಬಳಿಕ ತೀವ್ರ ಹೊಟ್ಟೆ ನೋವು, ಭೇದಿಯಾಗಿ ನರಳಾಡಿರುವ ಬಾಲಕಿಯರು. ವಿದ್ಯಾರ್ಥಿನಿಯ‌‌ರ ನರಳಾಟ ಕಂಡು ಅಡುಗೆಯವರು ತಾಲೂಕಿನ ಆಸ್ಪತ್ರೆಗೆ ಸೇರಿಸಿದ್ದಾರೆ.

ಚಿಕ್ಕೋಡಿ: ಮದುವೆ ಮನೆಯಲ್ಲಿ ವಿಷಾಹಾರ ಸೇವಿಸಿ 100 ಜನ ಅಸ್ವಸ್ಥ

ಮಕ್ಕಳು ಅಸ್ವಸ್ಥಗೊಂಡ್ರೂ ಹಾಸ್ಟೆಲ್‌ಗೆ ಬಾರದ ವಾರ್ಡನ್!

ವಿಷಪೂರಿತ ಆಹಾರ ಸೇವಿಸಿ ಮಕ್ಕಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರೂ ಹಾಸ್ಟೆಲ್ ಬಾರದ ವಾರ್ಡನ್ ಪಾರ್ವತಿ. ವಾರ್ಡನ್ ಬೇಜವಾಬ್ದಾರಿ, ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರು. ತೀವ್ರ ಅಸ್ವಸ್ಥಗೊಂಡ ಓರ್ವ ವಿದ್ಯಾರ್ಥಿನಿ ರಾಯಚೂರು ಜಿಲ್ಲಾಸ್ಪತ್ರೆ ರಿಮ್ಸ್ ಗೆ ದಾಖಲಿಸಲಾಗಿದೆ.

PREV
Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!