ಕೋಲಾರ: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಕೆಜಿಎಫ್ ಶಾಸಕಿ ರೂಪಕಲಾ

By Girish Goudar  |  First Published Oct 17, 2024, 4:50 PM IST

ರಾಮಾಯಣದಲ್ಲಿ ಸೀತೆ ಮಾತೆ ಮತ್ತು ಮಹಾಭಾರತದಲ್ಲಿ ದ್ರೌಪದಿಗೆ‌ ಅಪಮಾನವಾಗುತ್ತೆ. ಇವೆಲ್ಲವನ್ನು ಇಬ್ಬರಿಬ್ಬರು‌‌ ಸಹಿಸಿಕೊಳ್ಳುತ್ತಾರೆ. ಇಂದಿಗೂ ಸಹ ಮಹಿಳೆ ಚರಿತ್ರೆವಧ್ಯೆ ನಡೆಯುತ್ತಲೆ ಇದೆ ಎಂದು ತಿಳಿಸಿದ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್‌


ಕೋಲಾರ(ಅ.17): ಇಂದು(ಗುರುವಾರ) ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್‌ ಅವರು ಕಣ್ಣೀರಿಟ್ಟಿದ್ದಾರೆ. ಹೌದು, ವಾಲ್ಮೀಕಿ ರಾಮಾಯಣ ಮತ್ತು ಮಹಾಭಾರತವನ್ನು ನೆನೆದು ಶಾಸಕಿ ರೂಪಕಲಾ ಶಶಿಧರ್‌ ಅವರು ಭಾವುಕ‌ ಮಾತುಗಳನ್ನಾಡಿದ್ದಾರೆ.

ಇಂದು ಕೋಲಾರ ಜಿಲ್ಲೆಯ ಕೆಜಿಎಫ್ ನಗರಸಭೆ ಸಭಾಂಗಣದಲ್ಲಿ ಕೆಜಿಎಫ್ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕಿ ರೂಪಕಲಾ ಶಶಿಧರ್‌ ಅವರು, ರಾಮಾಯಣದಲ್ಲಿ ಸೀತೆ ಮಾತೆ ಮತ್ತು ಮಹಾಭಾರತದಲ್ಲಿ ದ್ರೌಪದಿಗೆ‌ ಅಪಮಾನವಾಗುತ್ತೆ. ಇವೆಲ್ಲವನ್ನು ಇಬ್ಬರಿಬ್ಬರು‌‌ ಸಹಿಸಿಕೊಳ್ಳುತ್ತಾರೆ. ಇಂದಿಗೂ ಸಹ ಮಹಿಳೆ ಚರಿತ್ರೆವಧ್ಯೆ ನಡೆಯುತ್ತಲೆ ಇದೆ ಎಂದು ತಿಳಿಸಿದ್ದಾರೆ. 

Tap to resize

Latest Videos

ತಾಯಿ ವಯಸ್ಸಿನ ಮಹಿಳೆ ಕೊಂದು ಶವದೊಂದಿಗೆ ಸಂಭೋಗ: ರಾಕ್ಷಸನಿಗೆ ತಕ್ಕ ಶಿಕ್ಷೆ ಆಗಲಿ ಎಂದ ಜನ!

ಸಮಾಜದಲ್ಲಿ ಮಹಿಳೆಯ ಚರಿತ್ರೆವಧ್ಯೆಯದಾಗ ಆ ಮಹಿಳೆ ಅನುಭವಿಸುವ ನೋವು ಅಷ್ಟಿಷ್ಟಲ್ಲ. ಆ ನೋವು ಹಣ್ಣಿಗೆ ಮಾತ್ರ ಗೊತ್ತಾಗುತ್ತೆ. ಮಹಿಳೆಯ ಅಸಹಾಯಕತೆ ಮತ್ತು ಚರಿತ್ರೆಯನ್ನು ಮಾತನಾಡುತ್ತಾ ಇಂದಿಗೂ ಜನ ಖುಷಿಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆ ಹೆಣ್ಣಿಗೆ ತಂದೆ ಮಾತ್ರ ಬೆಂಬಲವಾಗಿ ನಿಂತಿರುತ್ತಾರೆ ಎಂದು ಭಾವುಕವಾಗಿ ರೂಪಕಲಾ ಶಶಿಧರ್‌ ಮಾತನಾಡಿದ್ದಾರೆ. 

click me!