ಇನ್ನಿಬ್ಬರಲ್ಲಿ ಕೆಎಫ್‌ಡಿ ವೈರಾಣು ಪತ್ತೆ : ಹೆಚ್ಚಿದ ಆತಂಕ

By Kannadaprabha News  |  First Published Jan 12, 2020, 8:58 AM IST

ಮತ್ತೆ ಮಲೆನಾಡಿಗೆ ಮಂಗನ ಕಾಯಿಲೆ ಆತಂಕ ಎದುರಾಗಿದೆ. ಮತ್ತಿಬ್ಬರಲ್ಲಿ ವೈರಾಣು ಪತ್ತೆಯಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಶಿವಮೊಗ್ಗ [ಜ.12]:  ಮಂಗನಕಾಯಿಲೆಯ ಆತಂಕದಲ್ಲಿರುವ ಮಲೆನಾಡಿಗೆ ಮತ್ತೆ ಆತಂಕ ಎದುರಾಗಿದೆ. ಸಾಗರ ತಾಲೂಕಿನ ಇನ್ನು ಇಬ್ಬರಲ್ಲಿ ಕೆಎಫ್‌ಡಿ ವೈರಾಣು ಕಾಣಿಸಿಕೊಂಡಿದ್ದು, ಇದರೊಂದಿಗೆ ಈ ವರ್ಷಾರಂಭದಲ್ಲಿ ಜಿಲ್ಲೆಯಲ್ಲಿ ಒಟ್ಟು ಮೂರು ಮಂದಿಯಲ್ಲಿ ಕೆಎಫ್‌ಡಿ ವೈರಾಣು ಕಾಣಿಸಿಕೊಂಡಂತಾಗಿದೆ.

ಕಳೆದ ವಾರ ಮಂಡಗದ್ದೆಯ ನರಸಿಂಹ ಅವರಿಗೆ ಮಂಗನ ಕಾಯಿಲೆ ಸೋಂಕು ಕಾಣಿಸಿಕೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ಸೇರಿಸಿದ್ದು, ಇದೀಗ ಇವರು ಬಿಡುಗಡೆ ಹೊಂದಿದ್ದಾರೆ. 

Tap to resize

Latest Videos

ಮತ್ತೆ ಕಾಣಿಸಿಕೊಂಡಿದೆ ಮಹಾಮಾರಿ ಮಂಗನ ಕಾಯಿಲೆ : ಎಚ್ಚರ!...

ಭಾನ್ಕುಳಿ ಗ್ರಾಪಂ ವ್ಯಾಪ್ತಿ ಗುಜರವಳ್ಳಿಯ ಭರತ್‌ ಅವರಲ್ಲಿ ಕೆಎಫ್‌ಡಿ ವೈರಾಣು ಕಾಣಿಸಿಕೊಂಡಿದೆ. ಆದರ ಬೆನ್ನಲ್ಲೇ ಕಳೆದ ವರ್ಷ ಮರಣ ಮೃದಂಗ ಭಾರಿಸಿದ್ದ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆಯ ಆತಂಕ ಕಾಣಿಸಿದೆ.

ಸಾಗರ ತಾಲೂಕಿನ ಭಾನ್ಕುಳಿ ಗ್ರಾಪಂ ವ್ಯಾಪ್ತಿಯ ಗುಜರವಳ್ಳಿಯ ಭರತ್‌(18) ಮತ್ತು ಭಾರಂಗಿ ಹೋಬಳಿಯ ಮಾರಲಗೋಡು ಗ್ರಾಮದ ಹೂವಮ್ಮ ಎಂಬುವವರ ರಕ್ತದಲ್ಲಿ ಕೆಎಫ್‌ಡಿ ವೈರಾಣು ಕಾಣಿಸಿಕೊಂಡಿದ್ದು, ಪ್ರಯೋಗ ಶಾಲೆಯಲ್ಲಿ ಇದು ದೃಢ ಪಟ್ಟಿದೆ. ಭರತ್‌ ಅವರನ್ನು ಮಣಿಪಾಲ ಆಸ್ಪತ್ರೆಗೆ ಮತ್ತು ಹೂವಮ್ಮ ಅವರನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಸೇರಿಸಲಾಗಿದೆ.

click me!