Covid Crisis: ಬೆಂಗ್ಳೂರಲ್ಲಿ ಕೊರೋನಾ ಸೋಂಕು ಇಳಿಕೆ..!

By Kannadaprabha News  |  First Published Jan 29, 2022, 5:22 AM IST

*   ಶುಕ್ರವಾರ 15199 ಹೊಸ ಕೇಸ್‌ ಪತ್ತೆ
*   44866 ಸೋಂಕಿತರು ಗುಣಮುಖ
*   ಸಕ್ರಿಯ ಕೇಸ್‌ 1.6 ಲಕ್ಷಕ್ಕೆ ಇಳಿಕೆ
 


ಬೆಂಗಳೂರು(ಜ.29):  ನಗರದಲ್ಲಿ ಕೊರೋನಾ(Coronavirus)  ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತಷ್ಟುಇಳಿಕೆಯಾಗಿದ್ದು, ಶುಕ್ರವಾರ ಹೊಸದಾಗಿ 15,199 ಜನರಲ್ಲಿ ಸೋಂಕು ದೃಢಪಟ್ಟಿದೆ. 8 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ(Death).

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 16.81 ಲಕ್ಷಕ್ಕೆ ಏರಿಕೆಯಾಗಿದೆ. 44,866 ಮಂದಿ ಸೋಂಕಿತರು ಬಿಡುಗಡೆಯಾಗಿದ್ದು, ಇದುವರೆಗೆ 15.04 ಲಕ್ಷ ಜನರು ಗುಣಮುಖರಾಗಿದ್ದಾರೆ. ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗಿದೆ. ನಗರದಲ್ಲಿ(Bengaluru) ಸಕ್ರಿಯ ಪ್ರಕರಣಗಳ ಸಂಖ್ಯೆ 1.6 ಲಕ್ಷಕ್ಕೆ ಇಳಿಕೆಯಾಗಿದೆ. 8 ಮಂದಿ ಸಾವಿನಿಂದ ಸೋಂಕಿಗೆ ಬಲಿಯಾದವರ ಸಂಖ್ಯೆ 16,554ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ(Department of Health) ವರದಿ ತಿಳಿಸಿದೆ.

Tap to resize

Latest Videos

undefined

Covid Testing Guidelines ಕೊರೋನಾ ಪರೀಕ್ಷೆ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ

ಪಾಲಿಕೆ ವ್ಯಾಪ್ತಿಯ ಹತ್ತು ವಾರ್ಡ್‌ಗಳಲ್ಲಿ ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಬೆಳ್ಳಂದೂರು 642, ವರ್ತೂರು 389, ಬೇಗೂರು 335, ಹೊರಮಾವು 322, ದೊಡ್ಡನೆಕ್ಕುಂದಿ 313, ಎಚ್‌ಎಸ್‌ಆರ್‌ ಲೇಔಟ್‌ 303, ನ್ಯೂತಿಪ್ಪಸಂದ್ರ 305, ಹಗದೂರು 304, ಹೂಡಿ 252 ಮತ್ತು ಕಾಡುಗೋಡಿ 224 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

188ಕ್ಕೆ ಇಳಿದ ಕಂಟೈನ್ಮೆಂಟ್‌:

ಬಿಬಿಎಂಪಿಯ(BBMP) ಎಂಟು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆ ಇಳಿಕೆಯಾಗಿದ್ದು, 188 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಪೂರ್ವ 54, ಯಲಹಂಕ 38, ಬೊಮ್ಮನಹಳ್ಳಿ 31, ಮಹದೇವಪುರ 26, ಪಶ್ಚಿಮ 18, ದಕ್ಷಿಣ 12, ರಾಜರಾಜೇಶ್ವರಿ ನಗರ 6, ದಾಸರಹಳ್ಳಿ 3 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಪಾಲಿಕೆ ವರದಿಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ(Karnataka) ನಿನ್ನೆ(ಶುಕ್ರವಾರ) ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, 31,198 ಪಾಸಿಟಿವ್ ಕೇಸ್  ಪತ್ತೆಯಾಗಿವೆ.

ಸಾವಿನ ಸಂಖ್ಯೆ ಏರಿಕೆಯಾಗಿದ್ದು, 50 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 38,804 ಜನ ಸೋಂಕಿತರು ಮೃತಪಟ್ಟಿದ್ರೆ, ಒಟ್ಟು ಸೋಂಕಿತರ ಸಂಖ್ಯೆ 37,23,694 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಶುಕ್ರವಾರ 71,092 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 33,96,093 ಜನ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 20.91 ರಷ್ಟು ಇದೆ. 2,88,767 ಸಕ್ರಿಯ ಪ್ರಕರಣಗಳಿವೆ.

Government Employees ರಾಜ್ಯ ಸರ್ಕಾರಿ ನೌಕರರ ವಾರಕ್ಕೆ 5 ದಿನ ಕೆಲಸ ಆದೇಶ ವಾಪಸ್

ಯಾವ ಜಿಲ್ಲೆಯಲ್ಲಿ ಎಷ್ಟು ಕೊರೋನಾ ಕೇಸ್ ?

ಬಾಗಲಕೋಟೆ 187, ಬಳ್ಳಾರಿ 709, ಬೆಳಗಾವಿ 725, ಬೆಂಗಳೂರು ಗ್ರಾಮಾಂತರ 558, ಬೆಂಗಳೂರು ನಗರ 15,199, ಬೀದರ್ 194, ಚಾಮರಾಜನಗರ 618, ಚಿಕ್ಕಬಳ್ಳಾಪುರ 427, ಚಿಕ್ಕಮಗಳೂರು 283, ಚಿತ್ರದುರ್ಗ 192, ದಕ್ಷಿಣ ಕನ್ನಡ 516, ದಾವಣಗೆರೆ 186, ಧಾರವಾಡ 1,500, ಗದಗ 171, ಹಾಸನ 1,037, ಹಾವೇರಿ 179, ಕಲಬುರಗಿ 406, ಕೊಡಗು 371, ಕೋಲಾರ 452, ಕೊಪ್ಪಳ 227, ಮಂಡ್ಯ 963, ಮೈಸೂರು 1,877, ರಾಯಚೂರು 225, ರಾಮನಗರ 262, ಶಿವಮೊಗ್ಗ 509, ತುಮಕೂರು 1,315, ಉಡುಪಿ 818, ಉತ್ತರ ಕನ್ನಡ 760, ವಿಜಯಪುರ 125, ಯಾದಗಿರಿ- 207.

ಕೊರೋನಾದಿಂದ ಯಾವ ಜಿಲ್ಲೆಯಲ್ಲಿ ಎಷ್ಟು ಸಾವು? 

ಬೆಂಗಳೂರು ನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 8 ಮಂದಿ ಸಾವನ್ನಪ್ಪಿದ್ದಾರೆ. ಹಾಸನ 5, ದಕ್ಷಿಣ ಕನ್ನಡ, ತುಮಕೂರು 4, ಬೆಳಗಾವಿ, ಶಿವಮೊಗ್ಗ 3, ಹಾವೇರಿ, ರಾಮನಗರ 2, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಗದಗ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಬಲಿಯಾಗಿದ್ದಾರೆ.
 

click me!