ಮೀನುಗಾರರಿಗೆ ಬಂಪರ್: ಸೀಮೆ ಎಣ್ಣೆ ವಿತರಣೆಯಲ್ಲಿ ಹೆಚ್ಚಳ.?

By Kannadaprabha News  |  First Published Mar 1, 2020, 9:34 AM IST

ಕರಾವಳಿಯಲ್ಲಿ ಪ್ರಸ್ತುತ ನಾಡದೋಣಿ ಮೀನುಗಾರರಿಗೆ 210- 230 ಲೀಟರ್‌ ತೆರಿಗೆ ರಹಿತ ಸೀಮೆಎಣ್ಣೆ ಒದಗಿಸಲಾಗುತ್ತಿದೆ. ಅದನ್ನು 400 ಲೀ.ಗೆ ಹೆಚ್ಚಿಸಲು ಮೀನುಗಾರರು ಬೇಡಿಕೆ ಇಟ್ಟಿದ್ದು, ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ, ಮೀನುಗಾರರ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.


ಉಡುಪಿ(ಮಾ.01): ಕರಾವಳಿಯಲ್ಲಿ ಪ್ರಸ್ತುತ ನಾಡದೋಣಿ ಮೀನುಗಾರರಿಗೆ 210- 230 ಲೀಟರ್‌ ತೆರಿಗೆ ರಹಿತ ಸೀಮೆಎಣ್ಣೆ ಒದಗಿಸಲಾಗುತ್ತಿದೆ. ಅದನ್ನು 400 ಲೀ.ಗೆ ಹೆಚ್ಚಿಸಲು ಮೀನುಗಾರರು ಬೇಡಿಕೆ ಇಟ್ಟಿದ್ದು, ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ, ಮೀನುಗಾರರ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವ ಕೆ. ಗೋಪಾಲಯ್ಯ ಹೇಳಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ್ದಾರೆ. ಜಿಲ್ಲೆಯಲ್ಲಿ 28333 ಅಂತ್ಯೋದಯ, 161609 ಆದ್ಯತಾ ಪಡಿತರ ಚೀಟಿಗಳು, 100236 ಆದ್ಯತೇತರ ಪಡಿತರ ಚೀಟಿಗಳಿದ್ದು, ಒಟ್ಟು 290178 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. 190686 ಪಡಿತರ ಚೀಟಿಗಳನ್ನು ಆಧಾರ್‌ ಕಾರ್ಡ್‌ಗೆ ಜೋಡಣೆ ಮಾಡಲಾಗಿದ್ದು, ಶೇ.100 ಪ್ರಗತಿ ಸಾಧಿಸಲಾಗಿದೆ. 798735 ಕುಟುಂಬಗಳ ಸದಸ್ಯರಿಗೆ ಬಯೋಮೆಟ್ರಿಕ್‌ ಮೂಲಕ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರ ನೀಡಿದರು.

Tap to resize

Latest Videos

undefined

ಅಜ್ಜ, ಅಜ್ಜಿ ಎದುರೇ ಮಗು ಕಚ್ಚಿಕೊಂಡು ಹೋಗಿ ಕೊಂದ ಚಿರತೆ! ನಾಲ್ಕನೇ ಬಲಿ

ಪ್ರತಿ ತಿಂಗಳೂ ಜಿಲ್ಲೆಯಲ್ಲಿ 5492.910 ಮೆಟ್ರಿಕ್‌ ಟನ್‌ ಅಕ್ಕಿ ಹಂಚಿಕೆಯಾಗುತ್ತಿದ್ದು, ಎನ್‌ಎಫ್‌ಎಸ್‌ಎ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 20 ಕಲ್ಯಾಣ ಸಂಸ್ಥೆಗಳಲ್ಲಿರುವ 36000 ಫಲಾನುಭವಿಗಳಿಗೆ ಪ್ರತಿ ತಿಂಗಳೂ 10 ಕೆ.ಜಿ ಅಕ್ಕಿ ಮತ್ತು 5 ಕೆ.ಜಿ ಗೋದಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಂಜುನಾಥ್‌ ಸಭೆಗೆ ತಿಳಿಸಿದರು.

ರಾಜ್ಯದ ಹಲವೆಡೆ ಸುರಿದ ಮಳೆ : ಮೋಡ ಕವಿದ ವಾತಾವರಣ

ಉಡುಪಿಯಲ್ಲಿ 25 ಆಹಾರ ನಿರೀಕ್ಷಕರ ಹುದ್ದೆ ಮಂಜೂರಾಗಿದ್ದು, 7 ಹುದ್ದೆ ಭರ್ತಿ ಮಾಡಲಾಗಿದ್ದು, 18 ಖಾಲಿ ಇದೆ. 6 ಜನ ಆಹಾರ ಶಿರಸ್ತೇದಾರರನ್ನು ಕಂದಾಯ ಇಲಾಖೆಯ ವತಿಯಿಂದ ನೇಮಿಸಲಾಗಿದೆ. ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿರುವ ತೂಕ/ ಮಾಪನ ಸಾಧನಗಳು ಹಾಗೂ ಆಟೋರಿಕ್ಷಾ ಮೀಟರ್‌ಗಳನ್ನು ತಪಾಸಣೆ ನಡೆಸಿ ಉಲ್ಲಂಘನೆ ನಡೆಸಿದ್ದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಗದೀಶ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಾಪನ ಶಾಸ್ತ್ರ ಇಲಾಖಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

 

ಪೆಟ್ರೋಲ್‌- ಡೀಸೆಲ್‌ ಕಲಬೆರೆಕೆ ತಡೆಯಲು ಕಿಟ್‌

ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ಗಳಿಗೆ ಕಲಬೆರಕೆ ಮಾಡುವ ವ್ಯವಸ್ಥಿತ ಜಾಲ ಸಕ್ರಿಯವಾಗಿದ್ದು, ಜಿಲ್ಲೆಯಲ್ಲಿ ಇಂತಹ ಘಟನೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದಾಗ, ಪ್ರತಿಕ್ರಿಯಿಸಿದ ಅಧಿಕಾರಿಗಳು ಕಲಬೆರಕೆ ತಪಾಸಣೆ ನಡೆಸಲು ಪ್ರತ್ಯೇಕ ಲ್ಯಾಬ್‌ ಮತ್ತು ಕಿಟ್‌ನ ಅಗತ್ಯವನ್ನು ಸಚಿವರಿಗೆ ಮನಗಾಣಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇಲಾಖೆಗೆ ಅಗತ್ಯವಿರುವ ಲ್ಯಾಬ್‌ ಮತ್ತು ಕಿಟ್‌ ಒದಗಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.

click me!