ಕಾಸರಗೋಡಿನಲ್ಲಿ ಕೇರಳ ಕನ್ನಡ ಸಾಹಿತ್ಯ ಸಮ್ಮೇಳನ

By Kannadaprabha NewsFirst Published Jan 30, 2020, 7:57 AM IST
Highlights

ಕಾಸರಗೋಡಿನ ಕರಾವಳಿ ಪ್ರತಿಷ್ಠಾನದ ಆಶ್ರಯದಲ್ಲಿ 7ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ ಮತ್ತು ಕೇರಳ- ಕರ್ನಾಟಕ ಉತ್ಸವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಯಲಿದೆ.

ಮಂಗಳೂರು(ಜ.30): ಕಾಸರಗೋಡಿನ ಕರಾವಳಿ ಪ್ರತಿಷ್ಠಾನದ ಆಶ್ರಯದಲ್ಲಿ 7ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ ಮತ್ತು ಕೇರಳ- ಕರ್ನಾಟಕ ಉತ್ಸವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಯಲಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಮಾತನಾಡಿ, ಗುರುವಾರ ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಕನ್ನಡ ಭುವನೇಶ್ವರಿಯ ಸಾಂಸ್ಕೃತಿಕ ಮೆರವಣಿಗೆ ಕೂಡ್ಲು ರಾಮದಾಸ್‌ ನಗರದ ಗೋಪಾಲಕೃಷ್ಣ ಹೈಸ್ಕೂಲ್‌ ನಿಂದ ಹೊರಡಲಿದೆ. ಮಧೂರು ಗ್ರಾ.ಪಂ. ಅಧ್ಯಕ್ಷೆ ಮಾಲತಿ ಸುರೇಶ್‌ ಕುರ್ಮಾ ಉದ್ಘಾಟಿಸುವರು ಎಂದಿದ್ದಾರೆ.

ನೀರು ಗಂಟಲಲ್ಲಿ ಸಿಲುಕಿ ಕಾರ್ಮಿಕ ಸಾವು..!

ಬೆಳಗ್ಗೆ 9.30ಕ್ಕೆ ಕನ್ನಡ ಭುವನೇಶ್ವರಿ ಮಂಟಪ ಉದ್ಘಾಟನೆ ನಡೆಯಲಿದೆ. ಕಾಸರಗೋಡು ನಗರಸಭೆ ಕೌನ್ಸಿಲರ್‌ ಶಂಕರ್‌ ಕೆ. ಧ್ವಜಾರೋಹಣ ನೆರವೇರಿಸುವರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮೇಳನ ಉದ್ಘಾಟಿಸುವರು. ಪತ್ರಕರ್ತ ಗಣೇಶ್‌ ಕಾಸರಗೋಡು ಸಮ್ಮೇಳನಾಧ್ಯಕ್ಷತೆ ವಹಿಸುವರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸುವರು. ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ದಿಕ್ಸೂಚಿ ಭಾಷಣ ಮಾಡುವರು. ಹಿರಿಯ ನ್ಯಾಯವಾದಿ ಪ್ರಕಾಶ್‌ ಎಸ್‌. ಉಡಿಕೇರಿ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದ್ದಾರೆ.

ಶಾಸಕ ಖಾದರ್‌ಗೆ ಜೀವ ಬೆದರಿಕೆ, ದೂರು ಕೊಡಲ್ಲ ಎಂದ ಕಾಂಗ್ರೆಸ್

ಜ.31ರಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಭಾಗವಹಿಸುವರು. ಕಣ್ಣೂರು ವಿವಿ ಕನ್ನಡ ವಿಭಾಗದ ನಿರ್ದೇಶಕ ಡಾ. ರಾಜೇಶ್‌ ಬೆಜ್ಜಂಗಳ ಸಮಾರೋಪ ಭಾಷಣ ಮಾಡುವರು. ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ಗೋಷ್ಠಿ, ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ವೈವಿಧ್ಯತೆ, ಅಂರ್ತ ರಾಜ್ಯ ಕಾವ್ಯ ಪ್ರಸ್ತಾನ, ಪುಸ್ತಕ ಪ್ರದರ್ಶನ,ಕಲಾ ಪ್ರದರ್ಶನ, ಕೃಷಿ ಪ್ರದರ್ಶನ ನಡೆಯಲಿದೆ ಎಂದಿದ್ದಾರೆ.

click me!