ಬೆಳಗಾವಿ; ಕೊಯ್ನಾ ಸೇರಿ ಇತರೆ ಡ್ಯಾಂಗಳ ಮೇಲೆ ನಿಗಾ ಇಡಿ, ಅಣ್ಣಾಸಾಹೇಬ ಜೊಲ್ಲೆ

By Kannadaprabha News  |  First Published Jul 16, 2022, 10:41 AM IST

ಪ್ರವಾಹ ಪೀಡಿತ ಗ್ರಾಮಗಳ ವ್ಯಾಪ್ತಿಯಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಿ, ಸರಿಯಾಗಿ ಊಟದ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಸಿಗುವ ಹಾಗೆ ನೋಡಿಕೊಳ್ಳಬೇಕು. 


ಚಿಕ್ಕೋಡಿ(ಜು.16):  ಕೃಷ್ಣಾ ಮತ್ತು ಉಪನದಿಗಳಿಗೆ ಪ್ರವಾಹ ಎದುರಾದರೇ ಜನರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಸಮನ್ವಯತೆಯಿಂದ ಸೂಕ್ತ ಕ್ರಮ ವಹಿಸಬೇಕೆಂದು ಚಿಕ್ಕೋಡಿ ಸಂaಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಶುಕ್ರವಾರ ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ನಡೆದ ಪ್ರವಾಹ ಮುನ್ನೆಚ್ಚರಿಕೆ ಕುರಿತು ನಡೆದ ಉಪವಿಭಾಗಮಟ್ಟದ ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ, ನಿಪ್ಪಾಣಿ ಮತ್ತು ಹುಕ್ಕೇರಿ ತಾಲೂಕಿನ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರವಾಹ ಪೀಡಿತ ಗ್ರಾಮಗಳ ವ್ಯಾಪ್ತಿಯಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಿ, ಸರಿಯಾಗಿ ಊಟದ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಸಿಗುವ ಹಾಗೆ ನೋಡಿಕೊಳ್ಳಬೇಕು. ಪ್ರತಿಯೊಂದು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕೆಂದರು.

ಕೊಯ್ನಾ ಮತ್ತು ಇತರೇ ಜಲಾಶಯ ಮೇಲೆ ನಿಗಾ ಇಡಬೇಕು. ಕಳೆದ ಪ್ರವಾಹದಲ್ಲಿ ಮಾಡಿರುವ ತಪ್ಪುಗಳು ಈಗ ಮತ್ತೆ ಮರುಕಳಿಸಬಾರದು ಎಲ್ಲ ಇಲಾಖೆಗಳು ಜಂಟಿಯಾಗಿ ಕೆಲಸ ಕಾರ್ಯ ನಿರ್ವಹಿಸಬೇಕು. ಒಬ್ಬರ ಮೇಲೆ ಹಾಕಿ ಜಾರಿಕೊಳ್ಳುವ ಮನೋಭಾವ ತೆಗೆದುಹಾಕಬೇಕು. ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹ ಉಂಟಾಗುವ ಮುನಸ್ಸೂಚನೆ ಇಲ್ಲ. ಆದರೂ ಮುಂದಿನ ವಾರದಲ್ಲಿ ಮಳೆಪ್ರಮಾಣ ಹೆಚ್ಚಾದರೇ ನದಿಗಳಿಗೆ ನೀರು ಬರುವ ಸಾಧ್ಯತೆ ಇರುತ್ತದೆ ಎಂದರು.
ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಮಾತನಾಡಿ, ನದಿ ದಡದಲ್ಲಿ ಕೆಲವು ಕಿಡಿಗೇಡಿಗಳು ಸೆಲ್ಪಿ ತೆಗೆದುಕೊಳ್ಳಲು ಹೋಗುತ್ತಿದ್ದಾರೆ. ಅದರ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳು ಕಡ್ಡಾಯವಾಗಿ ಮನೆ ಕಳೆದುಕೊಂಡವರ 1 ನಿಮಿಷದÜ ವಿಡಿಯೋ ಹಾಗೂ ಅವರ ಜಿಪಿಎಸ್‌ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Latest Videos

undefined

ತುಂಗಭದ್ರಾ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ: ಹಂಪಿ ಸ್ಮಾರಕಗಳು ಜಲಾವೃತ

ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಗೋಕಾಕ ಡಿವೈಎಸ್‌ ಪಿ ಮನೋಜಕುಮಾರ ನಾಯಿಕ, ಅಥಣಿ ಡಿವೈಎಸ್‌ ಪಿ ಗಿರೀಶ ಎಸ್‌.ವಿ. ಚಿಕ್ಕೋಡಿ ಡಿವೈಎಸ್‌ ಪಿ ಬಸವರಾಜ ಎಲಿಗಾರ, ತಹಸೀಲ್ದಾರ್‌ ಸಿ.ಎಸ್‌.ಕುಲಕರ್ಣಿ, ಡಾ.ಎಸ್‌.ಎಸ್‌.ಗಡೇದ ಉಪಸ್ಥಿತರಿದ್ದರು.

4191 ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ

2021 ರಲ್ಲಿನ ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡುವಲ್ಲಿ ಕೆಲವು ಅಧಿಕಾರಿಗಳು ತಾರತ್ಯಮ ಮಾಡಿದ್ದರಿಂದ ನೆನಗುದಿಗೆ ಬಿದ್ದ ಎ,ಬಿ ಮತ್ತು ಸಿ ಕೆಟಗೇರಿಯ 4191 ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿದ್ದು ಇನ್ನು ಮುಂದೆ ಅಂತಹ ಘಟನೆ ನಡೆಯಬಾರದು. ಪ್ರವಾಹದಲ್ಲಿ ಮನೆ ಕಳೆದುಕೊಂಡ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪರಿಹಾರ ಹಾಗೂ ಮನೆ ಬೆಳೆ ಪರಿಹಾರ ಕೊಡಬೇಕು.ಪರಿಹಾರ ನೀಡುವಲ್ಲಿ ಪಕ್ಷಭೇದ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರವಾಹ ಪೀಡಿತ ಗ್ರಾಮಗಳಿಗೆ ಪರಿಹಾರ ನೀಡಲು ಸರಕಾರ ಸಾಕಷÜು್ಟಹಣ ಬಿಡುಗಡೆ ಮಾಡಿದೆ. ಪರಿಹಾರದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣದ ಹಕ್ಕು ಪತ್ರ ನೀಡಲಾಗುವದೆಂದು ತಿಳಿಸಿದರು.

ದೂಧಗಂಗಾ, ಕೃಷ್ಣಾನದಿ ನೀರಿನ ಮಟ್ಟಒಂದು ಅಡಿ ಏರಿಕೆ

ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಮಳೆಯ ಪ್ರಮಾಣ ಮತ್ತು ಮಹಾರಾಷ್ಟ್ರ ಪಶ್ಚಿಮಘಟ್ಟಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮುಂದುವೆರದಿದ್ದರಿಂದ ಕೃಷ್ಣಾ, ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನಿರಂತರ ನೀರು ಹರಿದು ಬರುತ್ತಿದ್ದು ಶುಕ್ರವಾರವೂ ಮತ್ತೆ ದೂಧಗಂಗಾ ನದಿ ಮತ್ತು ಕೃಷ್ಣಾ ನದಿ ಒಂದು ಅಡಿಯಷ್ಟುಏರಿಕೆಯಾಗಿದ್ದು, ನದಿಗಳ ನೀರಿನ ಮಟ್ಟನಿರಂತರ ಎರಿಕೆ ಯಾಗುತ್ತಿರುವುದರಿಂದ ನದಿ ತೀರದ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.

ಉತ್ತರ ಕನ್ನಡ: ಕದ್ರಾ ಡ್ಯಾಂ ಪ್ರದೇಶದಲ್ಲಿ ನೆರೆ ಆತಂಕ

ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಶುಕ್ರವಾರ ರಾಜಾಪೂರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 99,417 ಕ್ಯುಸೆಕ್‌ ಮತ್ತು ನೆರೆಯ ಮಹಾರಾಷ್ಟ್ರದ ಸುಳಕುಡ ಮತ್ತು ಚಿಕಲಿ ಬ್ಯಾರೇಜ್‌ದಿಂದ ದೂಧಗಂಗಾ ಮತ್ತು ವೇದಗಂಗಾ ನದಿಗೆ 27,280 ಕ್ಯುಸೆಕ್‌ ಹೀಗೆ ಒಟ್ಟು 1,19,775 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟನಿರಂತರ ಏರಿಕೆಯಿಂದ ನದಿ ತೀರದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ.

ವೇದಗಂಗಾ ನದಿಯ ಭೋಜವಾಡಿ-ಕುನ್ನೂರ, ಜತ್ರಾಟ-ಭಿವಸಿ, ಮಮದಾಪೂರ-ಹುನ್ನರಗಿ, ಕುನ್ನುರ-ಬಾರವಾಡ ಮತ್ತು ಅಕ್ಕೋಳ-ಸಿದ್ನಾಳ ಮತ್ತು ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತ್ತವಾಡ ಬ್ಯಾರೇಜಗಳು ಮತ್ತು ಕೃಷ್ಣಾ ನದಿಯ ಶಿಥಿಲಾವಸ್ಥೆಯಲ್ಲಿದ್ದ ಕಲ್ಲೋಳ-ಯಡೂರ ಬ್ಯಾರೇಜ್‌ಗಳು ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದ್ದು, ದೂಧಗಂಗಾ ನದಿಯ ಸದಲಗಾ-ಬೋರಗಾಂವ ಮತ್ತು ಯಕ್ಸಂಬಾ-ದಾನವಾಡ ಸೇತುವೆಗಳು ಮುಳುಗಡೆಯ ಹಂತ ತಲುಪಿವೆ. 

click me!