ಜ್ಯೋತಿಷಿಗಳ ಮಾತಿನಂತೆ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಕೆಸಿಎನ್‌

By Kannadaprabha News  |  First Published Nov 19, 2019, 12:04 PM IST

ಜ್ಯೋತಿಷಿಗಳ ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸುವಂತೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಸೂಚಿಸಿದ್ದರಿಂದ ಸೋಮವಾರ ಗೌಡರ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಪ್ರಸಂಗ ಜರುಗಿತು. ಕೆಆರ್‌ಪೇಟೆ ಮುಖ್ಯರಸ್ತೆಯಿಂದ ಕಾರಿಳಿದು ಓಡಿ ಬಂದ ನಾರಾಯಣಗೌಡರಿಗೆ ಸಮೀಪವಾಗಿ ಜೆಡಿಎಸ್‌ ಕಾರ್ಯಕರ್ತರು ಭಾವುಟ ಬೀಸಿ, ಜೆಡಿಎಸ್‌ ಪರ ಘೋಷಣೆ ಕೂಗಿ ಮುಜುಗರ ಉಂಟು ಮಾಡಿದ್ದಾರೆ.


ಮಂಡ್ಯ(ನ.19): ಜ್ಯೋತಿಷಿಗಳ ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸುವಂತೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಸೂಚಿಸಿದ್ದರಿಂದ ಸೋಮವಾರ ಗೌಡರ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಪ್ರಸಂಗ ಜರುಗಿತು.

ಕೆಆರ್‌ಪೇಟೆ ಮುಖ್ಯರಸ್ತೆಯಿಂದ ಕಾರಿಳಿದು ಓಡಿ ಬಂದ ನಾರಾಯಣಗೌಡರಿಗೆ ಸಮೀಪವಾಗಿ ಜೆಡಿಎಸ್‌ ಕಾರ್ಯಕರ್ತರು ಭಾವುಟ ಬೀಸಿ, ಜೆಡಿಎಸ್‌ ಪರ ಘೋಷಣೆ ಕೂಗಿ ಮುಜುಗರ ಉಂಟು ಮಾಡಿದ್ದಾರೆ.

Latest Videos

undefined

ನಾರಾಯಣಗೌಡರತ್ತ ಚಪ್ಪಲಿ ತೂರಿದ ಜೆಡಿಎಸ್‌ ಕಾರ‍್ಯಕರ್ತರು

ನಾರಾಯಣಗೌಡರು ನಾಮಪತ್ರ ಸಲ್ಲಿಸುವುದಕ್ಕೆ ಹೋಗುವುದನ್ನು ತಡೆಯಲು ಮುಂದಾದ ಜೆಡಿಎಸ್‌ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದರು. ನಂತರ ನಾರಾಯಣಗೌಡರನ್ನು ತಾಲೂಕು ಕಚೇರಿಗೆ ಸ್ವತಃ ಎಸ್‌ಪಿ ಪರಶುರಾಮ… ತಮ್ಮ ಭದ್ರತೆಯಲ್ಲಿ ಕರೆದುಕೊಂಡು ಹೋದರು.

ಕಾಟಾಚಾರಕ್ಕೆ ಕಾರು ತಪಾಸಣೆ

ಸಿಎಂ ಪುತ್ರ ಪ್ರಯಾಣಿಸುತ್ತಿದ್ದ ಕಾರನ್ನು ಕಾಟಾಚಾರಕ್ಕೆ ಪರಿಶೀಲನೆ ಮಾಡಿದ ಪೊಲೀಸರ ನಡೆಯ ಬಗ್ಗೆ ಸಾಕಷ್ಟುಅನುಮಾನಗಳು ಹುಟ್ಟಿಕೊಂಡಿವೆ. ಕೆ.ಆರ್‌.ಪೇಟೆ ಶ್ರವಣಬೆಳಗೊಳ ರಸ್ತೆಯಲ್ಲಿರುವ ಮಾರೇನಹಳ್ಳಿ ಚೆಕ್‌ ಪೋಸ್ಟ್‌ ಬಳಿ ಬೆಳಗ್ಗೆ 9. 30ರ ಸುಮಾರಿಗೆ ಕೆ.ಆರ್‌.ಪೇಟೆಗೆ ಆಗಮಿಸುತ್ತಿದ್ದ ಸಿ.ಎಂ.ಪುತ್ರ ವಿಜಯೇಂದ್ರ ನಾಲ್ಕು ವಾಹನಗಳಲ್ಲಿ ತಮ್ಮ ಬೆಂಬಲಿಗರ ಜೊತೆ ಬಂದರು.

ನಾರಾಯಣಗೌಡರತ್ತ ಚಪ್ಪಲಿ ತೂರಿದ ಜೆಡಿಎಸ್‌ ಕಾರ‍್ಯಕರ್ತರು

ಕೆಆರ್‌ ಪೇಟೆ ಚುನಾವಣೆ ಉಸ್ತುವಾರಿ ತಂಡದಲ್ಲಿ ವಿಜಯೇಂದ್ರ ಸಹ ಒಬ್ಬರು. ವಿಜಯೇಂದ್ರ ಪ್ರಯಾಣಿಸುತ್ತಿದ್ದ ಕಾರು ಸೇರಿದಂತೆ ನಾಲ್ಕು ಕಾರುಗಳನ್ನು ಪೊಲೀಸರು ಸರಿಯಾಗಿ ತಪಾಸಣೆ ಮಾಡಲಿಲ್ಲ. ಕಾರಿನಲ್ಲಿ ನಾಲ್ಕು ಸೂಟ್‌ ಕೇಸ್‌ ರೀತಿಯ ಬ್ಯಾಗ್‌ಗಳಿದ್ದರೂ ಸಿಬ್ಬಂದಿ ಅದನ್ನು ತೆಗೆಸಿ ನೋಡಲಿಲ್ಲ. ಕಾರುಗಳನ್ನು ನಿಲ್ಲಿಸಿ ಚೆಕ್‌ ಮಾಡುವ ರೀತಿ ಮಾಡಿ ಬಿಟ್ಟು ವಾಹನ ಕಳಿಸಿದರು ಎಂಬ ಆರೋಪ ಕೇಳಿಬಂದಿದೆ.

ಚೆನ್ನಾಗಿ ಕಾಣ್ತೀಯಾ ಎಂದು ಕಿಸ್ ಕೊಡ್ತಾನೆ ಈ ಪ್ರಿನ್ಸಿಪಲ್, ವಿದ್ಯಾರ್ಥಿನಿಯರ ಕಣ್ಣೀರು

ಸಾರ್ವಜನಿಕರ ವಾಹನಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿ, ಬ್ಯಾಗ್‌ಗಳಿದ್ದರೆ ಅವುಗಳನ್ನೂ ಓಪನ್‌ ಮಾಡಿಸಿ ಪರಿಶೀಲನೆ ನಡೆಸುವ ಪೊಲೀಸರು, ವಿಜಯೇಂದ್ರ ಕಾರನ್ನು ಸಮಗ್ರವಾಗಿ ತಪಾಸಣೆ ಮಾಡಲಿಲ್ಲವೇಕೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಇದಕ್ಕೆ ಪೊಲೀಸರ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರು.

click me!