ಮೃತಪಟ್ಟಿದ್ದಾರೆಂದು ಕೊಪ್ಪಳದ ಕೆ. ಎಸ್. ಆಸ್ಪತ್ರೆ ವೈದ್ಯರು ಘೋಷಿಸಿದ್ದ ಕವಿತಾ ಅಂತ್ಯ ಸಂಸ್ಕಾರದ ಸಂದರ್ಭ ಕಣ್ಬಿಟ್ಟ ನಂತರ ಸಂಬಂಧಿಕರು ಆಸ್ಪತ್ರೆಯಲ್ಲಿ ಗಲಾಟೆ ನಡೆಸಿದ್ದರು. ಇದೀಗ ಕವಿತಾ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.
ಕೊಪ್ಪಳ(ಜು.23): ಮೃತಪಟ್ಟಿದ್ದಾರೆಂದು ಕೊಪ್ಪಳದ ಕೆ. ಎಸ್. ಆಸ್ಪತ್ರೆ ವೈದ್ಯರು ಘೋಷಿಸಿದ್ದ ಕವಿತಾ ಅಂತ್ಯ ಸಂಸ್ಕಾರದ ಸಂದರ್ಭ ಕಣ್ಬಿಟ್ಟಿದ್ದು, ಇದೀಗ ಕವಿತಾ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಕವಿತಾ ಅವರಿಗೆ ಗೋವನಕೊಪ್ಪ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಸಂತಾನಹರಣ ಶಸ್ತ್ರಚಿಕಿತ್ಸೆ ನಂತರ ಅಧಿಕ ರಕ್ತಸ್ರಾವದಿಂದಾಗಿ ಚಿಕಿತ್ಸೆಗಾಗಿ ಕೆ.ಎಸ್.ಆಸ್ಪತ್ರೆಗೆ ಸಾಗಿಸಲು ಶಿಫಾರಸು ಮಾಡಲಾಗಿತ್ತು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಎರಡು ದಿನ ಚಿಕಿತ್ಸೆ ನೀಡಿದ ಬಳಿಕ ಸೋಮವಾರ ರಾತ್ರಿ ಕವಿತಾ ಮೃತಪಟ್ಟಿರುವುದಾಗಿ ಕೆ.ಎಸ್. ಆಸ್ಪತ್ರೆ ಸಿಬ್ಬಂದಿ ಘೋಷಿಸಿದ್ದರು. ಆದರೆ ಅಂತ್ಯ ಸಂಸ್ಕಾರ ಸಂದರ್ಭ ಕವಿತಾ ಕಣ್ಣು ಬಿಟ್ಟಿದ್ದರು. ಇದೀಗ ಮತ್ತೆ ವೈದ್ಯರು ಕವಿತಾ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಮೃತದೇಹ ಎತ್ತಬೇಕೆನ್ನುವಷ್ಟರಲ್ಲಿ ಕಣ್ಬಿಟ್ಟ ಮಹಿಳೆ, ಸಂಬಂಧಿಕರಿಗೆ ಶಾಕ್..!
ಮೃತದೇಹವನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.