ಕೊರೋನಾ ಸೋಂಕಿತ ಪತ್ರಕರ್ತನಿಗೆ ಸಂದರ್ಶನ: ಕಾಸರಗೋಡು DC ಸೇಫ್‌

By Kannadaprabha News  |  First Published May 1, 2020, 9:08 AM IST

ಕಾಸರಗೋಡು ಜಿಲ್ಲಾ​ಧಿಕಾರಿ ಸಜಿತ್‌ ಬಾಬು ಗಂಟಲು ದ್ರವ ಸ್ಯಾಂಪಲ್‌ ವರದಿ| ಕಾಸರಗೋಡಿನಲ್ಲಿ ಬುಧವಾರ ದೃಶ್ಯಮಾಧ್ಯಮ ವರದಿಗಾರರೊಬ್ಬರಿಗೆ ಕೊರೋನಾ ಪಾಸಿಟಿವ್‌ ಬಂದಿತ್ತು| ವರದಿಗಾರ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಯ ಸಂದರ್ಶನ ನಡೆಸಿದ್ದರು| ಗನ್‌ಮ್ಯಾನ್‌ ಮತ್ತು ಕಾರು ಚಾಲಕನನ್ನು ಕ್ವಾರಂಟೈನ್‌ ಮಾಡಲಾಗಿತ್ತು|


ಮಂಗಳೂರು(ಮೇ.01): ಕೊರೋನಾ ಸೋಂಕಿತ ಪತ್ರಕರ್ತನಿಗೆ ಸಂದರ್ಶನ ನೀಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ಗೊಳಗಾಗಿರುವ ಕಾಸರಗೋಡು ಜಿಲ್ಲಾ​ಧಿಕಾರಿ ಸೇಫ್‌ ಆಗಿದ್ದಾರೆ. ಜಿಲ್ಲಾಧಿಕಾರಿ ಸಜಿತ್‌ ಬಾಬು ಅವರ ಗಂಟಲು ದ್ರವ ಸ್ಯಾಂಪಲ್‌ ವರದಿ ನೆಗೆಟಿವ್‌ ಬಂದಿದೆ. 

ಕಾಸರಗೋಡಿನಲ್ಲಿ ಬುಧವಾರ ದೃಶ್ಯಮಾಧ್ಯಮ ವರದಿಗಾರರೊಬ್ಬರಿಗೆ ಕೊರೋನಾ ಪಾಸಿಟಿವ್‌ ಬಂದಿತ್ತು. ಇದೇ ವರದಿಗಾರ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಯ ಸಂದರ್ಶನ ನಡೆಸಿದ್ದರು. ಅವರ ಗನ್‌ಮ್ಯಾನ್‌ ಮತ್ತು ಕಾರು ಚಾಲಕನನ್ನು ಕ್ವಾರಂಟೈನ್‌ ಮಾಡಲಾಗಿತ್ತು. 

Tap to resize

Latest Videos

ಲಾಕ್‌ಡೌನ್‌ ಎಫೆಕ್ಟ್‌: ಹಣ ಪಾವತಿಸಲು ಅಸಮರ್ಥರಾದ ಕುಟುಂಬಗಳಿಗೆ ಒಂದು ಸಿಲಿಂಡರ್‌ಗೆ ಸಬ್ಸಿಡಿ

ಉಳಿದವರ ಸ್ಯಾಂಪಲ್‌ ವರದಿ ಬಂದಿಲ್ಲ. ಕೊರೋನಾ ಸೋಂಕಿತರ ಸಂಪರ್ಕ ಹಿನ್ನೆಲೆಯಲ್ಲಿ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದಿನ್‌ ಹಾಗೂ ಐಜಿಪಿ ವಿಜಯ್‌ ಸಾಕಾರೆ ಅವರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 

click me!