ಶುಕ್ರವಾರದಿಂದ (ಮೇ 1) ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ಮೊದಲ ಬಾರಿಗೆ ಒಂದು ಸಾವಿರ ರು., ಎರಡನೇ ಬಾರಿಗೆ ಎರಡು ಸಾವಿರ ದಂಡ ವಿಧಿಸುವ ಸಂಬಂಧ ಬಿಬಿಎಂಪಿ ಗುರುವಾರ ಆದೇಶಿಸಿದೆ.
ಬೆಂಗಳೂರು(ಮೇ.01): ರಾಜಧಾನಿಯಲ್ಲಿ ಕೊರೋನಾ ಸೋಂಕು ಹರಡದಂತೆ ಬಿಬಿಎಂಪಿ ಇನ್ನಷ್ಟುಕಠಿಣ ಕ್ರಮಕೈಗೊಂಡಿದ್ದು, ಶುಕ್ರವಾರದಿಂದ (ಮೇ 1) ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ಮೊದಲ ಬಾರಿಗೆ ಒಂದು ಸಾವಿರ ರು., ಎರಡನೇ ಬಾರಿಗೆ ಎರಡು ಸಾವಿರ ದಂಡ ವಿಧಿಸುವ ಸಂಬಂಧ ಬಿಬಿಎಂಪಿ ಗುರುವಾರ ಆದೇಶಿಸಿದೆ.
undefined
ಕೊರೋಕು ನಿಯಂತ್ರಣ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವುದಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇ 1 ರಿಂದ ಜಾರಿಗೊಳಿಸಲಾಗುತ್ತಿದೆ.
ಜಪ್ತಿಯಾದ ವಾಹನಗಳು ಇಂದಿನಿಂದ ವಾಪಸ್! ಯಾವ ವಾಹನಕ್ಕೆಷ್ಟು ದಂಡ..?
ಮಾಸ್ಕ್ ಧರಿಸದೇ ಸಾರ್ವಜನಿಕ ಪ್ರದೇಶಗಳಿಗೆ ಬಂದರೆ ಮೊದಲ ಬಾರಿಯ ತಪ್ಪಿಗೆ 1 ಸಾವಿರ ರು, ಎರಡು ಮತ್ತು ಅದಕ್ಕಿಂತ ಹೆಚ್ಚಿನ ಬಾರಿ ತಪ್ಪಿಗೆ ತಲಾ 2 ಸಾವಿರ ರು ದಂಡ ವಿಧಿಸಲಾಗುವುದು.
ದೇಶದಲ್ಲಿ 11 ದಿನಕ್ಕೆ ಕೊರೋನಾ ಡಬಲ್..!
ದಂಡ ವಿಧಿಸುವ ಅಧಿಕಾರ ಬಿಬಿಎಂಪಿ ಆಯುಕ್ತರು, ವಿಶೇಷ ಆಯುಕ್ತರು, ಆರೋಗ್ಯಾಧಿಕಾರಿಗಳು ಮತ್ತು ಮಾರ್ಷಲ್‌ಗಳಿಗೆ ಮಾತ್ರ ಇದ್ದು, ಜಂಟಿ ಆಯುಕ್ತರು ಸೇರಿದಂತೆ ಇತರೆ ಅಧಿಕಾರಿ ಸಿಬ್ಬಂದಿಗಳಿಗೂ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.