ಇತಿಹಾಸದ ಪುಟ ಸೇರಿದ ಕಾರವಾರ ಲಂಡನ್‌ ಬ್ರಿಡ್ಜ್‌: ಇನ್ನು ನೆನಪು ಮಾತ್ರ..!

By Kannadaprabha News  |  First Published Feb 18, 2021, 12:32 PM IST

ಚತುಷ್ಪಥಕ್ಕಾಗಿ ಶತಮಾನಕ್ಕಿಂತ ಹಳೆಯ ಸೇತುವೆ ನೆಲಸಮ| 1900ರಲ್ಲಿ ಬ್ರಿಟಿಷರು ನಿರ್ಮಾಣ ಮಾಡಿದ್ದ ಸೇತುವೆ| ಲಂಡನ್‌ ಬ್ರಿಡ್ಜ್‌ ಎಂದೇ ಪ್ರಸಿದ್ಧಿಯಾಗಿದ್ದ ಸೇತುವೆ| ಗೋವಾ ಭಾಗಕ್ಕೆ ತೆರಳಲು ಸೇತುವೆ ನಿರ್ಮಿಸಿಕೊಂಡಿದ್ದ ಬ್ರಿಟಿಷರು| 


ಕಾರವಾರ(ಫೆ.18): ಇಲ್ಲಿನ ಲಂಡನ್‌ ಬ್ರಿಡ್ಜ್‌ ಇತಿಹಾಸದ ಪುಟ ಸೇರುತ್ತಿದೆ. ಚತುಷ್ಪಥಕ್ಕಾಗಿ ಶತಮಾನಕ್ಕಿಂತ ಹಳೆಯದಾದ ಈ ಸೇತುವೆಯನ್ನು ಕೆಡವಲಾಗುತ್ತಿದೆ.

Latest Videos

undefined

ಇಂಧನ ಬೆಲೆ ಏರಿಕೆ ಬಿಸಿ: ಬಂದರಿನಲ್ಲೇ ಲಂಗರು ಹಾಕಿದ ಬೋಟ್‌ಗಳು..!

ಬ್ರಿಟಿಷರು 1900ರಲ್ಲಿ ನಿರ್ಮಾಣ ಮಾಡಿದ್ದು, 120 ವರ್ಷ ಕಳೆದಿದೆ. ಇದುವರೆಗೂ ಈ ಸೇತುವೆ ಗಟ್ಟಿಮುಟ್ಟಾಗಿದೆ. ಈಗಿನ ಜಿಲ್ಲಾಧಿಕಾರಿ ಬಂಗಲೆ, ಸರ್ಕ್ಯೂಟ್‌ ಹೌಸ್‌ ಹಿಂದೆ ಬ್ರಿಟಿಷ್‌ ಅಧಿಕಾರಿಗಳ ನಿವಾಸಗಳಾಗಿದ್ದವು. ತಮ್ಮ ಮನೆಯಿಂದ ನಗರ, ಗೋವಾ ಭಾಗಕ್ಕೆ ತೆರಳಲು ಈ ಸೇತುವೆ ನಿರ್ಮಿಸಿಕೊಂಡಿದ್ದರು.

ಲಂಡನ್‌ನಲ್ಲಿ ಇರುವ ಪ್ರಸಿದ್ಧ ಲಂಡನ್‌ ಬಿಡ್ಜ್‌ ಮಾದರಿಯಲ್ಲಿ ನಗರದ ಲಂಡನ್‌ ಬ್ರಿಡ್ಜ್‌ನ ಕಂಬ, ಕೆಲವು ವಸ್ತು ಅದರ ಹೋಲಿಕೆ ಇರುವುದರಿಂದ ಲಂಡನ್‌ ಬ್ರಿಡ್ಜ್‌ ಎಂದೇ ಕರೆಯಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ರಾಷ್ಟ್ರೀಯ ಹೆದ್ದಾರಿ ಎಂದಾದ ಬಳಿಕವೂ ಈ ಸೇತುವೆ ಬಳಕೆಯಲ್ಲಿತ್ತು. ಈ ಸೇತುವೆ ಇತಿಹಾಸದ ಪುಟ ಸೇರಲಿದ್ದು, ಇನ್ನು ನೆನಪು ಮಾತ್ರ.
 

click me!