ಜೆಡಿಎಸ್ ಬೆಂಬಲದೊಂದಿಗೆ ಒಟ್ಟು 12 ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರ| ಕ್ಷೇತ್ರದಲ್ಲಿ ಬಿಜೆಪಿಗೆ 25ಕ್ಕೂ ಹೆಚ್ಚು ಪಂಚಾಯಿತಿ ಗೆಲ್ಲುವುದಾಗಿ ಭವಿಷ್ಯ ನುಡಿದಿದ್ದ ಶಾಸಕ ದಿನಕರ ಶೆಟ್ಟಿ| ಹಿಂದೆ ನಾನು ಶಾಸಕಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೆನಪಿಟ್ಟು ಕಾಂಗ್ರೆಸ್‌ಗೆ ಬೆಂಬಲ: ಶಾರದಾ ಶೆಟ್ಟಿ|
ಕುಮಟಾ(ಫೆ.18): ಗ್ರಾಮ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ ದಿನಕರ ಶೆಟ್ಟಿ ಕಂಡ ಹಗಲುಗನಸು ನುಚ್ಚು ನೂರಾಗಿದೆ. ಜೆಡಿಎಸ್ ಬೆಂಬಲದೊಂದಿಗೆ ಒಟ್ಟು 12 ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಹೇಳಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು. ಶಾಸಕರು ಕ್ಷೇತ್ರದಲ್ಲಿ ಬಿಜೆಪಿಗೆ 25ಕ್ಕೂ ಹೆಚ್ಚು ಪಂಚಾಯಿತಿ ಗೆಲ್ಲುವುದಾಗಿ ಭವಿಷ್ಯ ನುಡಿದಿದ್ದರು. ಕಳೆದ ಬಾರಿ ತಾಲೂಕಿನಲ್ಲಿ ಒಟ್ಟು 14 ಪಂಚಾಯಿತಿಗಳಲ್ಲಿ ನಮ್ಮದೇ ಆಡಳಿತವಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿರುವುದು ಹಿನ್ನಡೆಗೆ ಕಾರಣವಾಗಿದ್ದರೂ ಸ್ಥಳೀಯವಾಗಿ ಜೆಡಿಎಸ್ ಜೊತೆ ಮೈತ್ರಿ ಸಾಧಿಸಿ ಒಟ್ಟು 22 ಪಂಚಾಯಿತಿಗಳಲ್ಲಿ 12 ಪಂಚಾಯಿತಿಗಳನ್ನು ನಮ್ಮ ಬಗಲಿಗೆ ಹಾಕಿಕೊಂಡಿದ್ದೇವೆ. ಹಿಂದೆ ನಾನು ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೆನಪಿಟ್ಟು ಕಾಂಗ್ರೆಸ್‌ಗೆ ಬೆಂಬಲಿಸಿದ್ದಾರೆ. ಹೆಗಡೆ ಜಿಪಂ ಕ್ಷೇತ್ರ ಸಂಪೂರ್ಣವಾಗಿ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಇತರ ತಾಲೂಕುಗಳಿಗೆ ಹೋಲಿಸಿದರೆ ನಮ್ಮ ಕೇತ್ರದಲ್ಲಿ ಹಾಲಿ ಶಾಸಕರು ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಲ್ಲ. ಹೊಸ ಯೋಜನೆಗಳನ್ನು ತಂದೇ ಇಲ್ಲ. ಒಳಚರಂಡಿ ಯೋಜನೆಯನ್ನು ಪೂರ್ಣಗೊಳಿಸದೇ ಬದಿಗಿರಿಸಿದ್ದಾರೆ ಎಂದು ಆರೋಪಿಸಿದರು. ಪಕ್ಷಭೇದ ಬಿಟ್ಟು ನಡೆಸುವ ಅಭಿವೃದ್ಧಿ ಕಾರ್ಯದಲ್ಲಿ ಕಾಂಗ್ರೆಸ್ ಕೂಡಾ ಸದಾ ಕೈ ಜೋಡಿಸುತ್ತದೆ ಎಂದರು.
undefined
ಇಂಧನ ಬೆಲೆ ಏರಿಕೆ ಬಿಸಿ: ಬಂದರಿನಲ್ಲೇ ಲಂಗರು ಹಾಕಿದ ಬೋಟ್‌ಗಳು..!
ಮಾಜಿ ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ನಾಯಕ, ಜಿಪಂ ಸದಸ್ಯ ರತ್ನಾಕರ ನಾಯ್ಕ, ಬ್ಲಾಕ್ ಅಧ್ಯಕ್ಷ ವಿ.ಎಲ್. ನಾಯ್ಕ ಮಾತನಾಡಿದರು. ಈ ವೇಳೆ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಅಭಿನಂದಿಸಲಾಯಿತು. ರವಿಕುಮಾರ ಶೆಟ್ಟಿ, ನಾಗೇಶ ನಾಯ್ಕ, ಸುರೇಖಾ ವಾರೇಕರ, ಮುಜಫರ್, ಮೈಕಲ್, ಫ್ರಾನ್ಸಿಸ್, ರೇವತಿ ನಾಯ್ಕ, ಯಶೋದಾ ಶೆಟ್ಟಿ, ಸಚಿನ್ ನಾಯ್ಕ, ಮಂಜುನಾಥ ಗೌಡ ಇನ್ನಿತರರು ಇದ್ದರು.