ಅತಿ ಶೀಘ್ರವಾಗಿ ಶೋಭಾ ಹಿಂದಿಕ್ಕಿದ ಲಕ್ಷ್ಮಿ..ನಂಬರ್ 1 ಪಟ್ಟ ಏರಿದ ಹೆಬ್ಬಾಳ್ಕರ್!

Published : Mar 08, 2020, 12:55 PM ISTUpdated : Mar 08, 2020, 01:03 PM IST
ಅತಿ ಶೀಘ್ರವಾಗಿ ಶೋಭಾ ಹಿಂದಿಕ್ಕಿದ ಲಕ್ಷ್ಮಿ..ನಂಬರ್ 1 ಪಟ್ಟ ಏರಿದ  ಹೆಬ್ಬಾಳ್ಕರ್!

ಸಾರಾಂಶ

ಶೋಭಾ ಕರಂದ್ಲಾಜೆಯನ್ನು ಹಿಂದಿಕ್ಕಿದ ಲಕ್ಷ್ಮಿ ಹೆಬಾಳ್ಕರ್/ ಸೋಶಿಯಲ್ ಮೀಡಿಯಾದಲ್ಲಿ ಹೆಬ್ಬಾಳ್ಕರ್ ಹವಾ/ ಮಹಿಳಾ ರಾಜಕಾರಣಿಗಳ ಪೈಕಿ ಮುಂಚೂಣಿ/ ಅಲ್ಪಾವಧಿಯಲ್ಲೇ ಅತಿ ಹೆಚ್ಚು ಫಾಲೋವರ್ಸ್ ಪಡೆದ ಬೆಳಗಾವಿ ಗ್ರಾಮಾಂತರ ಶಾಸಕಿ

ಬೆಳಗಾವಿ(ಮಾ. 08)  ಸಾಮಾಜಿಕ ಜಾಲತಾಣಗಳಲ್ಲಿ ಅಗ್ರ ಸ್ಥಾನದಲ್ಲಿರುವ ಫೇಸ್‌ಬುಕ್‌ನಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ, ಕರ್ನಾಟಕ ಮಹಿಳಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್‌ ಉನ್ನತ ಸ್ಥಾನಕ್ಕೇರಿದ್ದಾರೆ. ಕರ್ನಾಟಕದ ಮಹಿಳಾ ರಾಜಕಾರಣಿಗಳ ಸಾಲಿನಲ್ಲಿ ಲಕ್ಷ್ಮಿ ಹೆಬ್ಬಾಳಕರ್‌ ಮೊದಲಿಗರಾಗಿದ್ದಾರೆ.

ಈವರೆಗೆ ಎಲ್ಲರಿಗಿಂತ ಮುಂದಿದ್ದ ಬಿಜೆಪಿ ಸಂಸದೆ, ಮಾಜಿ ಸಚಿವೆ ಶೋಭಾ ಕರಂದ್ಲಾಜೆಯನ್ನೂ ಲಕ್ಷ್ಮಿ ಹೆಬ್ಬಾಳಕರ್‌ ಹಿಂದಿಕ್ಕಿದ್ದಾರೆ. ಕರ್ನಾಟಕದ ನಾಲ್ವರು ಪ್ರಮುಖ ಮಹಿಳಾ ರಾಜಕಾರಣಿಗಳ ಪೈಕಿ ಲಕ್ಷ್ಮಿ ಹೆಬ್ಬಾಳಕರ್‌ ಮುಂದಿದ್ದಾರೆ.

ನನ್ನ ಮಗನಿಗೊಂದು ಕನ್ಯಾ ನೋಡ್ರಪ್ಪ

2017ರ ಏಪ್ರಿಲ್‌ನಲ್ಲಿ ಲಕ್ಷ್ಮಿ ಹೆಬ್ಬಾಳಕರ್‌ ಫೇಸ್‌ಬುಕ್‌ ಪುಟ ಆರಂಭಿಸಲಾಗಿತ್ತು. ಅಲ್ಪಾವಧಿಯಲ್ಲೇ ಅಂದರೆ, 2018ರ ಆಗಸ್ಟ್‌ನಲ್ಲಿ ಅವರಿಗೆ ವಿಐಪಿ ಬ್ಲ್ಯೂ ಬ್ಯಾಡ್ಜ್‌ ನೀಡಲಾಗಿತ್ತು. ಇದೀಗ 2 ಲಕ್ಷ ಫಾಲೋವರ್ಸ್‌ ಹೊಂದುವ ಮೂಲಕ ಲಕ್ಷ್ಮಿ ಹೆಬ್ಬಾಳಕರ್‌ ಸ್ಟಾರ್‌. ಸೂಪರ್‌ ಸ್ಟಾರ್‌ ಪಟ್ಟಕ್ಕೇರಿದ್ದಾರೆ. ಇವರಿಗೆ 2 ಲಕ್ಷ ಫಾಲೋವರ್ಸ್‌ ಆಗಿದ್ದರೆ, ಶೋಭಾ ಕರಂದ್ಲಾಚೆ ಅವರಿಗೆ 1.83 ಲಕ್ಷ, ಸಂಸದೆ, ಸಿನೆಮಾ ನಟಿ ಸುಮಲತಾ ಅಂಬರೀಶ್‌ ಅವರಿಗೆ 1.72 ಲಕ್ಷ ಹಾಗೂ ಕರ್ನಾಟಕದ ಹಾಲಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ 71 ಸಾವಿರ ಫಾಲೋವರ್ಸ್‌ ಇದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್‌ ಸಾಮಾಜಿಕ ಜಾಲತಾಣಗಳನ್ನು ಬಳಸುವುದರಲ್ಲಿ ಸದಾ ಮುಂದಿದ್ದಾರೆ. ವಿವಿಧ ಜಾಲತಾಣಗಳ ಮೂಲಕ ತಮ್ಮ ಕ್ಷೇತ್ರದ ಜನರನ್ನು, ಅಭಿಮಾನಿಗಳನ್ನು ತಲುಪುತ್ತಾರೆ. ಅವರ ಎಲ್ಲ ಸಾಧನೆ, ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣ ಕ್ಷಣಕ್ಕೆ ಅಪ್‌ಲೋಡ್‌ ಮಾಡಲಾಗುತ್ತದೆ. ಫೇಸ್‌ ಬುಕ್‌ ಅಷ್ಟೇ ಅಲ್ಲದೆ, ಟ್ವಿಟರ್‌, ಇನ್‌ಸ್ಟಾಗ್ರಾಂ, ವಾಟ್ಸಪ್‌ಗಳಲ್ಲಿ ಸಹ ಅವರು ನಿರಂತರ ಕ್ರಿಯಾಶೀಲರಾಗಿದ್ದಾರೆ. ಅವರ ಅಭಿಮಾನಿಗಳ ಹೆಸರಿನಲ್ಲಿ ಹಲವಾರು ಫೇಸ್‌ಬುಕ್‌ ಗ್ರೂಪ್‌ಗಳಿವೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!