ಜೀಪ್‌ನ ಡೋರ್‌ನಲ್ಲಿ ಯುವಕನ ಕಾಲು ಜಜ್ಜಿದ PSI..!

Suvarna News   | Asianet News
Published : Mar 08, 2020, 12:53 PM ISTUpdated : Mar 08, 2020, 01:11 PM IST
ಜೀಪ್‌ನ ಡೋರ್‌ನಲ್ಲಿ ಯುವಕನ ಕಾಲು ಜಜ್ಜಿದ PSI..!

ಸಾರಾಂಶ

ವ್ಯಕ್ತಿಯೊಬ್ಬನನ್ನು ಬಂಧಿಸುವುದಕ್ಕೂ ಅದಕ್ಕೆ ಆದ ರೀತಿಗಳಿರುತ್ತವೆ. ಯುವಕನೊಬ್ಬನನ್ನು ದರ್ಪದಿಂದ ತಳ್ಳಿ, ಎಳೆದಾಡಿ ಜೀಪಿಗೆ ತುಂಬಿದ ಪಿಎಎಸ್‌ಐ ವಿಡಿಯೋ ಇದೀಗ ವೈರಲ್ ಆಗಿದೆ. ಡೋರ್‌ನಿಂದ ಯುವಕನ ಕಾಲಿಗೆ ಜಜ್ಜಿದ್ದು, ಈ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಮಂಡ್ಯ(ಮಾ.08): ವ್ಯಕ್ತಿಯೊಬ್ಬನನ್ನು ಬಂಧಿಸುವುದಕ್ಕೂ ಅದಕ್ಕೆ ಆದ ರೀತಿಗಳಿರುತ್ತವೆ. ಯುವಕನೊಬ್ಬನನ್ನು ದರ್ಪದಿಂದ ತಳ್ಳಿ, ಎಳೆದಾಡಿ ಜೀಪಿಗೆ ತುಂಬಿದ ಪಿಎಎಸ್‌ಐ ವಿಡಿಯೋ ಇದೀಗ ವೈರಲ್ ಆಗಿದೆ. ಡೋರ್‌ನಿಂದ ಯುವಕನ ಕಾಲಿಗೆ ಜಜ್ಜಿದ್ದು, ಈ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"

ಯುವಕನ ಮೇಲೆ ಅಮಾನವೀಯ ವರ್ತನೆ ತೋರಿದ ಪಿಎಸ್‌ಐ ಬಗ್ಗೆ ಜನ ಕಿಡಿಕಾರಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ಪೊಲೀಸ್ ಠಾಣೆ ಪಿಎಸ್‌ಐ ದುರ್ವವರ್ತನೆ ತೋರಿಸಿದ್ದು ಯುವಕನನ್ನು ದನದ ರೀತಿ ಜೀಪಿಗೆ ತುಂಬಲಾಗಿದೆ.

ವರದಕ್ಷಿಣೆ ಕಿರುಕುಳ: ಗಂಡನ ಮನೆಯ ಕಾಟ ತಾಳದೆ ಗರ್ಭಿಣಿ ಗೃಹಿಣಿ ಆತ್ಮಹತ್ಯೆ

ಮದ್ದೂರು ತಾಲೂಕಿನ ಕೊಪ್ಪದಲ್ಲಿ ಘಟನೆ ನಡೆದಿದ್ದು, ಪಿಎಸ್‌ಐ ಯುವಕನಿಗೆ ಜೀಪಿನಲ್ಲಿ ಹೊಡೆದಿದ್ದಾರೆ. ಜೀಪಿನ ಡೋರ್‌ನಲ್ಲಿ ಯುವಕನ ಕಾಲು ಜಜ್ಜಿದ ಪಿಎಸ್‌ಐ ಅವಾಚ್ಯ ಶಬ್ದದಿಂದ ಯುವಕನನ್ನು ನಿಂದಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಬೈಕ್ ತಪಾಸಣೆ ವೇಳೆ ಯುವಕ ಪ್ರಶ್ನೆ ಮಾಡಿದ್ದಕ್ಕೆ ಗರಂ ಆದ ಪಿಎಸ್‌ಐ ಅಮಾನವೀಯ ರೀತಿಯಲ್ಲಿ ವರ್ತಿಸಿದ್ದು, ಜನ ಖಂಡಿಸಿದ್ದಾರೆ. ಪಿಎಸ್‌ಐ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!