ಕೊರೋನಾ ಕಾಟ: ಪರೀಕ್ಷೆ ಬರೆಯಲೇಬೇಕು, ಕಾನೂನು ವಿವಿ ಕುಲಪತಿ

Suvarna News   | Asianet News
Published : Aug 22, 2020, 03:59 PM ISTUpdated : Aug 22, 2020, 04:28 PM IST
ಕೊರೋನಾ ಕಾಟ: ಪರೀಕ್ಷೆ ಬರೆಯಲೇಬೇಕು, ಕಾನೂನು ವಿವಿ ಕುಲಪತಿ

ಸಾರಾಂಶ

ವಿದ್ಯಾರ್ಥಿಗಳು ಹೇಳಿದ ಹಾಗೆ ಮಾಡಲಿಕ್ಕೆ ಆಗುವುದಿಲ್ಲ| ಬಾರ್ ಕೌನ್ಸಿಲ್ ನಿಯಮವನ್ನ ಪಾಲಿಸದಿದ್ದರೆ, ನಮ್ಮ ವಿದ್ಯಾರ್ಥಿಗಳನ್ನ ವಕೀಲ ಪರಿಷತ್‌ನಲ್ಲಿ ನೋಂದಣಿಗೆ ಬಿಡಲ್ಲ| ವಕೀಲರಾಗಿ ರಿಜಿಸ್ಟರ್‌ನಲ್ಲಿ ದಾಖಲು ಆಗಬೇಕೆಂದರೆ ಪರಿಕ್ಷೆಯನ್ನ ಬರೆಯಲೆಬೇಕು:ಕುಲಪತಿ ಈಶ್ವರ ಭಟ್| 

ಧಾರವಾಡ(ಆ.22): ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಎಲ್ಲ ಸೆಮಿಸ್ಟರ್ ಪರೀಕ್ಷೆ ಬರೆಯುವುದು ಖಡ್ಡಾಯವಾಗಿದೆ ಎಂದು ಕಾನೂನು ವಿವಿ ಕುಲಪತಿ ಈಶ್ವರ ಭಟ್ ಹೇಳಿದ್ದಾರೆ. 

"

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸರಕಾರ ಮಾಡಿರುವ ಆದೇಶದಂತೆ ನಾವು ಪರೀಕ್ಷೆಗಳನ್ನ ನಡೆಸಲೇಬೇಕು. ಮಾರ್ಚ್‌ 15 ರವರಗೆ ರೆಗ್ಯೂಲರ್‌ ತರಗತಿಗಳು ನಡೆದಿದ್ದವು.  ಕೊರೋನಾ ಹಿನ್ನಲೆಯಲ್ಲಿ ಆನ್‌ಲೈನ್ ಕ್ಲಾಸಸ್ ನಡೆಸಿದ್ದೇವೆ. ಪರಿಕ್ಷೆಯನ್ನ ನಡೆಸಬೇಕು ಎಂದು ಬಾರ್ ಕೌನ್ಸಿಲ್‌ನಿಂದ ಆದೇಶ ಬಂದಿದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ. 

ಹುಬ್ಬಳ್ಳಿ: ಅಪಘಾತದ ಸಾಕ್ಷ್ಯ, KSRTC ಬಸ್‌ಗಳ ಮುಂಭಾಗದಲ್ಲಿ ಕ್ಯಾಮೆರಾ..!

ಲಾ ಡಿಪಾರ್ಟ್ಮೆಮೆಂಟ್ ಮತ್ತು ಬಾರ್ ಕೌನ್ಸಿಲ್‌ನ ಪ್ರಕಾರ ನಾವು ನಡೆದುಕೊಳ್ಳಬೇಕಾಗುತ್ತದೆ. ಕಾನೂನು ವಿಶ್ವಿದ್ಯಾಲಯದಡಿ 106 ಲಾ ಕಾಲೇಜುಗಳಿವೆ, ಒಟ್ಟು ರಾಜ್ಯದಲ್ಲಿ 25,000 ಸಾವಿರ ವಿದ್ಯಾರ್ಥಿಗಳು ಇದಾರೆ. ಬಾರ್ ಕೌನ್ಸಿಲ್‌ನವರು ಸೆಪ್ಟಂಬರ್‌ 30 ರೊಳಗೆ ಫೈನಲ್ ಇಯರ್‌ ಪರೀಕ್ಷೆ ಮುಗಿಸಬೇಕು ಎಂದು ಆದೇಶವನ್ನ ನೀಡಿದ್ದಾರೆ. ಇನ್ನು ಇಂಟರ್ ಮಿಡಿಯೇಟ್ ಪರೀಕ್ಷೆ ಹೊಸ ಅಕ್ಯಾಡೆಮಿ ಇಯರ್ ಆರಂಭವಾದ ಬಳಿಕ ಮಾಡಿ ಅಂತ ಹೇಳಿದೆ. ಎಲ್ಲ ಲಾ ಕಾಲೇಜು ಪ್ರಾಂಶುಪಾಲರು ಹಾಗೂ ಪೋಷಕರ ಜೊತೆ ಚರ್ಚೆ ನಡೆಸಿ ಅಭಿಪ್ರಾಯ ಕೇಳಿದ್ದೇವೆ. ಶೇ 98 ರಷ್ಟು ಆನ್‌ಲೈನ್ ಪರೀಕ್ಷೆ ಬೇಡ, ಆಫ್‌ಲೈನ್ ಪರೀಕ್ಷೆ ನಡೆಸಿ ಎಂದು ಅಭಿಪ್ರಾಯ ಬಂದಿವೆ. ಹೀಗಾಗಿ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂಟರ್ ಮಿಡಿಯೇಟ್ ಸೆಮಿಸ್ಟರ್ ಪರೀಕ್ಷೆಗಳನ್ನ ಅಕ್ಟೋಬರ್‌ನಲ್ಲಿ ಇಟ್ಟುಕ್ಕೊಂಡಿದ್ದೇವೆ. ಸೆ 1 ರಿಂದ ಹೊಸ ಅಕ್ಯಾಡಮಿ ಇಯರ್ ಸ್ಟಾರ್ಟ್‌ ಆಗುತ್ತೆ, ಅ. 5 ರಿಂದ ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳು ಹೇಳಿದ ಹಾಗೆ ಮಾಡಲಿಕ್ಕೆ ಆಗುವುದಿಲ್ಲ, ಹಾಗೆ ಮಾಡಿದ್ದೇ ಆದರೆ ಬಾರ್ ಕೌನ್ಸಿಲ್ ನಿಯಮಗಳನ್ನ ಮುರಿದಂತೆ ಆಗುತ್ತದೆ. ನಾವೂ ಬಾರ್ ಕೌನ್ಸಿಲ್ ನಿಯಮವನ್ನ ಪಾಲಿಸದಿದ್ದರೆ, ನಮ್ಮ ವಿದ್ಯಾರ್ಥಿಗಳನ್ನ ವಕೀಲ ಪರಿಷತ್‌ನಲ್ಲಿ ನೋಂದಣಿಗೆ ಬಿಡಲ್ಲ. ಅವರು ವಕೀಲರಾಗಿ ರಿಜಿಸ್ಟರ್‌ನಲ್ಲಿ ದಾಖಲು ಆಗಬೇಕೆಂದರೆ ಪರಿಕ್ಷೆಯನ್ನ ಬರೆಯಲೆಬೇಕು ಎಂದು ಕಾನೂನು ವಿಶ್ವವಿದ್ಯಾಲಯ ಕುಲಪತಿ ಈಶ್ವರ ಭಟ್ ಹೇಳಿದ್ದಾರೆ.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!