ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ವ್ಯಾಪಕ ಮಳೆಯಾಗಿದೆ. ಮಳೆ ಅವಾಂತರಕ್ಕೆ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಉಡುಪಿ (ಜು.5): ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ವ್ಯಾಪಕ ಮಳೆಯಾಗಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇರಲಿದೆ. 24 ಗಂಟೆಗಳ ಅವಧಿಯಲ್ಲಿ ಮಳೆಯ ತೀವ್ರತೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಕಮಲಶಿಲೆ ದೇವಸ್ಥಾನಕ್ಕೆ ಬಂದಿದ್ದ 74 ವರ್ಷ ಪ್ರಾಯದ ಶೇಷಾದ್ರಿ ಐತಾಳ್ ನೀರು ಪಾಲಾಗಿದ್ದರು. ಬಳಿಕ ಸ್ಥಳೀಯ ಈಜು ಪಟು ಮಂಜುನಾಥ್ ನಾಯಕ್ ನೆರವಿನಿಂದ ಶವವನ್ನು ಮೇಲಕ್ಕೆತ್ತಲಾಗಿದೆ. ಕುಂದಾಪುರ ತಾಲೂಕಿನ ತೆಕ್ಕಟ್ಟೆ ಬಳಿ ದಿವಾಕರ ಶೆಟ್ಟಿ ಎಂಬವರು ಮೃತರಾಗಿದ್ದಾರೆ.
ರಾತ್ರಿ ಹೋಟೆಲ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.ಸ್ಕೂಟರ್ ನಲ್ಲಿ ತೆರಳುತ್ತಿದ್ದ ದಿವಾಕರ್ ಮಳೆಯಿಂದಾಗಿ ಆಯತಪ್ಪಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ.ತೆಕ್ಕಟೆಯ ಮಲ್ಯಾಡಿ ಸಮೀಪ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಈ ಸಾವು ಸಂಭವಿಸಿದೆ.ಕಾಲು ನೋವು ಇದ್ದ ಹಿನ್ನೆಲೆಯಲ್ಲಿ ಬೈಕ್ ಜೊತೆಗೆ ಜಾರಿ ಕೆರೆಗೆ ಉರುಳಿ ಬಿದ್ದಿದ್ದಾರೆ.ತಡರಾತ್ರಿ ಘಟನಸ್ಥಳಕ್ಕೆ ಆಗಮಿಸಿದ ಮುಳುಗುತಜ್ಞ ಈಶ್ವರಮಲ್ಪೆ ಕಾರ್ಯಾಚರಣೆ ನಡೆಸಿದ ಬಳಿಕ ಶವ ಮೇಲಕ್ಕೆತ್ತಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
undefined
ಸಚಿವ ಚಲುವರಾಯಸ್ವಾಮಿ ನನ್ನ ಸಾವಿಗೆ ಕಾರಣ, ಡೆತ್‌ನೋಟ್ ಬರೆದಿಟ್ಟು ಬಸ್ ಕಂಡಕ್ಟರ್
ಬ್ರಹ್ಮ ಬೈದರ್ಕಳ ಗರೋಡಿ ಮುಳುಗಡೆ
ನಗರದಲ್ಲಿ ಮಳೆಯ ತೀವ್ರತೆಗೆ ಬನ್ಮಂಜೆ, ಶಿರಿಬೀಡು ಸಮೀಪ ಇರುವ ಮೂಡನಿಡಂಬೂರು ಬ್ರಹ್ಮ ಬೈದರ್ಕಳ ಗರೋಡಿಗೆ ನೀರು ನುಗ್ಗಿದೆ. ಸುತ್ತಮುತ್ತಲಿನ ಪರಿಸರದ ಮನೆಗಳಿಗೂ ನೀರು ನುಗ್ಗಿದೆ. ನಿಟ್ಟೂರು ಸಿರಿಬಿಡು ಸಂಪರ್ಕ ರಸ್ತೆಯಲ್ಲಿ ನೀರು ತುಂಬಿದ ಕಾರಣ ಕೂಲಿಕಾರ್ಮಿಕರು ನಡೆದಾಡಲು ಪರದಾಡುವಂತಾಯ್ತು. ಬನ್ನಂಜೆ ಶನೇಶ್ವರ ದೇವಸ್ಥಾನದ ಸುತ್ತಮುತ್ತಲೂ ನೆರೆ ನೀರಿನ ಮಟ್ಟ ಹೆಚ್ಚಾಗಿದೆ.
ಕೃಷ್ಣಮಠದ ಪಾರ್ಕಿಂಗ್ ಏರಿಯಾ, ಜಲಾವೃತ
ಉಡುಪಿಯ ಶ್ರೀ ಕೃಷ್ಣ ಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ನೀರು ನಿಂತಿದೆ. ವಾಹನ ನಿಲುಗಡೆಗೆ ಅಸಾಧ್ಯವಾಗುವಷ್ಟು ನೀರಿನ ಒಳಹರಿವು ಕಂಡುಬಂದಿದೆ. ಪಕ್ಕದಲ್ಲಿ ಹರಿಯುವ ಇಂದ್ರಾಣಿ ನದಿ ಕಲ್ಸಂಕ ಹಳ್ಳದ ಮೂಲಕ ಸಾಗುವ ಮಾರ್ಗದಲ್ಲಿ ಕೃತಕ ನೆರೆ ಉಂಟಾಗಿದೆ. ಮಠದ ಪೆಟ್ಟು ಪರಿಸರದಲ್ಲೂ ಅನೇಕ ಮನೆಗಳಿಗೆ ನೀರು ನುಗ್ಗಿದೆ.
ಕೊಡಿ ಬೆಂಗ್ರೆ ಕಡಲು ಕೊರೆತ
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಹವಾಮಾನ ಇಲಾಖೆ ಉಡುಪಿ ಜಿಲ್ಲೆಯಾದ್ಯಂತ ಇಂದು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಬಾರಿ ಮಳೆ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿದ್ದು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿದೆ. ಬ್ರಹ್ಮಾವರ ತಾಲೂಕು ಕೋಡಿ ಬೇಂಗ್ರೆ ಲೈಟ್ ಹೌಸ್ ಬಳಿ ಬಾರಿ ಕಡಲ ಕೊರೆತ ಉಂಟಾಗಿದ್ದು, ಸಮುದ್ರದ ಪಕ್ಕದಲ್ಲಿ ಸಂಪರ್ಕಗಾಗಿ ನಿರ್ಮಿಸಲಾಗಿದ್ದ ರಸ್ತೆ ಬಹುತೇಕ ಸಮುದ್ರ ಪಾಲಾಗಿದೆ. ಇನ್ನು ಎರಡು ದಿನಗಳ ಕಾಲ ಮಳೆ ಅಬ್ಬರ ಹೀಗೆ ಮುಂದುವರಿದಲ್ಲಿ ಸಂಪರ್ಕ ರಸ್ತೆ ಜೊತೆಗೆ ಸಮುದ್ರದಲ್ಲಿ ದೋಣಿಗಳ ಮಾರ್ಗಸೂಚಿಗಾಗಿ ತೀರದಲ್ಲಿ ಹಾಕಲಾಗಿರುವ ಕಿರು ಲೈಟ್ ಹೌಸ್ ಕೂಡ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ವಾಹನ ಸವಾರರಿಗೆ ಮತ್ತೆ ಗುಡ್‌ನ್ಯೂಸ್, ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು
ಖಾಸಗಿ ಲೇಔಟ್ ಅಸಮರ್ಪಕ ಕಾಮಗಾರಿಯಿಂದ ಅಡ್ಡಿ
ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆನಗರದಲ್ಲಿ ನಿರ್ಮಾಣವಾದ ಅಸಮರ್ಪಕ ಖಾಸಗಿ ಲೇ ಔಟ್ ನಿಂದ ಸಾಕಷ್ಟು ವರ್ಷಗಳಿಂದ ಇದ್ದ ಅಲ್ಲಿಯ ನಿವಾಸಿಗಳಿಗೆ ಸಮಸ್ಯೆ ಶುರುವಾಗಿದೆ. ಕಳೆದ ಎರಡು ದಿನದಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಸರಗವಾಗಿ ನೀರು ಚರಂಡಿಗೆ ಹರಿಯಲು ಸಾಧ್ಯವಾಗದೆ, ಮನೆಗಳಿಗೆ ಮಳೆ ನೀರಿನ ಜೊತೆ ಕೊಳಚೆ ನೀರು ನುಗ್ಗಿದ ಘಟನೆ ಇಂದು ನಡೆದಿದೆ.
ಮಳೆ ಆರಂಭವಾಗುವ ಮೊದಲಿನಿಂದಲು ಸಂಭಂದಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಗ್ರಾಮ ಪಂಚಾಯತ್ ಸದಸ್ಯರಗಳಿಗೆ ಮನದಟ್ಟು ಮಾಡುತ್ತಿದ್ದರು ಯಾರೂ ಕ್ಯಾರೆ ಅನ್ನುತ್ತಿರಲಿಲ್ಲ. ಅದರೆ ನಿನ್ನೆಯಿಂದ ಸುರಿಯುತ್ತಿರು ಧಾರಕಾರ ಮಳೆಯಿಂದ ಈ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾಗಿ ಮನೆಗಳಿಗೆ ನೀರು ನುಗ್ಗಿದೆ. ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಸ್ಥಳೀಯ ನಿವಾಸಿಗಳು ತರಾಟೆ ತೆಗೆದುಕೊಂಡರು. ಈ ಸಮಯದಲ್ಲಿ ಅಧ್ಯಕ್ಷರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದು ಹೊಯಿ ಕೈ ಯಲ್ಲಿವರೆಗೆ ಬಂದಿದೆ. ಇನ್ನೂ ಈ ಬಗ್ಗೆ ಮಾತನಾಡಿದ ಸ್ಥಳೀಯರು. ಅವೈಜ್ಞಾನಿಕ ಲೇ ಔಟ್ ನಿಂದ ಈ ರೀತಿಯ ಸಮಸ್ಯೆಯಾಗಿದೆ. ಒಳಚರಂಡಿ ಮಾಯವಾಗಿದೆ ಎಂದು ಅರೋಪಿಸಿದರು.