Dharwad-Bengaluru ವಂದೇ ಭಾರತ್ ಟ್ರೈನ್ ಕಲ್ಲು ಹೊಡೆದ ಪ್ರಕರಣ, ಇಬ್ಬರು ಮಕ್ಕಳು ಪೊಲೀಸ್ ವಶಕ್ಕೆ!

By Gowthami K  |  First Published Jul 5, 2023, 3:07 PM IST

ವಂದೇ ಭಾರತ್ ಟ್ರೈನ್ ಗೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಕ್ಕಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ದಾವಣಗೆರೆ (ಜು.5): ವಂದೇ ಭಾರತ್ ಟ್ರೈನ್ ಗೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಕ್ಕಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈಲು ಧಾರವಾಡದಿಂದ ದಾವಣಗೆರೆಗೆ ಬರುತ್ತಿದ್ದಾಗ ಬಾಲಕರು ಕಲ್ಲು ಹೊಡೆದಿದ್ದರು. ಕಲ್ಲಿನ ಹೊಡೆತಕ್ಕೆ ಕಿಟಕಿ ಗಾಜು ಬಿರುಕು ಬಿಟ್ಟಿತ್ತು. 

ಜುಲೈ 1ರಂದು ಬೆಂಗಳೂರಿನಿಂದ ಬೆಳಗ್ಗೆ ಆಗಮಿಸಿದ್ದ ರೈಲು, ಮರಳಿ ಧಾರವಾಡದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಮಧ್ಯಾಹ್ನ 3.30ರ ಸುಮಾರಿಗೆ ದಾವಣಗೆರೆ ಬಳಿ  ಕಲ್ಲೆಸೆದಿದ್ದರು. ಇದರಿಂದ ಸಿ-4 ಕೋಚ್‌ನ ಕಿಟಕಿಗೆ ಕಲ್ಲು ಬಡಿದಿದ್ದು, ಗ್ಲಾಸ್‌ ಬಿರುಕು ಬಿಟ್ಟಿತ್ತು.

Tap to resize

Latest Videos

ವಾಹನ ಸವಾರರಿಗೆ ಮತ್ತೆ ಗುಡ್‌ನ್ಯೂಸ್, ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು ಶೇ.50

ಆರ್ ಪಿ ಎಫ್ ಠಾಣೆ  ಪೊಲೀಸರು 12 ವರ್ಷದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕರು ದಾವಣಗೆರೆಯ ಎಸ್ ಎಸ್ ನಗರ, ಹಾಗು ಭಾಷಾ ನಗರದವರು ಎಂದು ತಿಳಿದುಬಂದಿದೆ. ಇಬ್ಬರನ್ನು ವಶಕ್ಕೆ ಪಡೆದು ಚಿತ್ರದುರ್ಗದ ಬಾಲಮಂದಿರದಲ್ಲಿ  ಆರ್ ಪಿ ಎಫ್ ಪೊಲೀಸರು ಇಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

Transfer Mafia: ಕಾಂಗ್ರೆಸ್ ವಿರುದ್ಧ ಪೆನ್‌ಡೈವ್‌ ದಾಖಲೆ ತೋರಿಸಿದ ಕುಮಾರಸ್ವಾಮಿ!

ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಟ್ರೈನ್ ಅನ್ನು ಜೂನ್ 26 ಕ್ಕೆ ಲೋಕಾರ್ಪಣೆ ಮಾಡಿದ್ದರು. ಅದಾಗಿ ಕೆಲವೇ ದಿನಕ್ಕೆ ಈ ಘಟನೆ ನಡೆದಿತ್ತು. ದಾವಣಗೆರೆ ರೈಲ್ವೆ ಪೊಲೀಸರು ಹಾಗೂ ಆರ್ ಪಿ ಎಫ್ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಾಲಕರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

click me!