Tumakuru: ಮಸೀದಿ ಪಕ್ಕದ ದೇವಿಯ ಆರಾಧನೆಗೆ ಮುಸ್ಲಿಂಮರ ವಿರೋಧ, ಗ್ರಾಮದಲ್ಲೀಗ ಬೂದಿ ಮುಚ್ಚಿದ ಕೆಂಡ!

By Gowthami KFirst Published Jul 5, 2023, 10:51 AM IST
Highlights

ಜಾತ್ರೆ ನಡೆಯುವ ಜಾಗದ ವಿಚಾರವಾಗಿ ಹಿಂದೂ-ಮುಸ್ಲಿಂರ ನಡುವೆ ಜಗಳ. ತುಮಕೂರಿನ ಕೆಸರಮಡುವಲ್ಲಿ ಪೊಲೀಸ್‌ ಬಂದೋಬಸ್ತ್, ಸಭೆ ನಡೆಸಿದ ಅಧಿಕಾರಿಗಳು.

ತುಮಕೂರು (ಜು.5): ತುಮಕೂರಿನ‌ ಕೆಸರುಮಡು ಗ್ರಾಮದಲ್ಲಿ ಜಾತ್ರೆ ನಡೆಯುವ ಜಾಗದ ವಿಚಾರವಾಗಿ ಹಿಂದೂ-ಮುಸ್ಲಿಂರ ನಡುವೆ ಜಗಳ ನಡೆದಿದೆ. ಗ್ರಾಮದ ಮಸೀದಿ ಪಕ್ಕದಲ್ಲಿರುವ ಕರಗಲಮ್ಮ ದೇವಸ್ಥಾನದಲ್ಲಿ ಜಾತ್ರೆ ಮಾಡುವ ಸಂದರ್ಭದಲ್ಲಿ ಮುಸ್ಲಿಂಮರು ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿ ಪೂಜೆ ಸಲ್ಲಿಸದಂತೆ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದಿದ್ದೇವೆ ಎಂದು  ಮುಸ್ಲಿಂ ಮುಖಂಡರ ವಾದ. ಈ ವಿಚಾರವಾಗಿ ಮುಸ್ಲಿಂ ಹಾಗೂ ಹಿಂದೂಗಳ ನಡುವೆ ಗಲಾಟೆ ನಡೆದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. 16 ವರ್ಷದ ಹಿಂದೆ ಕರಗಲಮ್ಮ ಜಾತ್ರೆ ನಡೆದಿದ್ದು, ಇದೀಗ ಮತ್ತೆ ಜಾತ್ರೆ ನಡೆಸುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ.

Chamarajanagar: ಅಪರಿಚಿತ ಶವ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರು

Latest Videos

ಇದೇ ವಿಷಯವಾಗಿ ಉಪವಿಭಾಗಾಧಿಕಾರಿ, ತಹಸೀಲ್ದಾರ್‌, ಪೊಲೀಸ್‌ ಉಪವಿಭಾಗಾಧಿಕಾರಿಗಳು ಸಭೆ ನಡೆಸಿ ಎರಡೂ ಕೋಮಿನ ಮುಖ್ಯಸ್ಥರಿಗೆ ಕೋಮುಗಳ ನಡುವೆ ವೈಷಮ್ಯ ಬೇಡ. ನ್ಯಾಯಾಲಯದ ಆದೇಶದ ಮೇರೆಗೆ ಪೂಜೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶ ಧಿಕ್ಕರಿಸದಂತೆ ಮತ್ತು ಸ್ಥಳದಲ್ಲಿ ಯಾವುದೇ ಘರ್ಷಣೆಗೆ ಅವಕಾಶ ಕೊಡದಂತೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ತಹಸೀಲ್ದಾರ್‌ ಕಚೇರಿಯಲ್ಲಿ ಸಭೆ ನಡೆಸಿ, ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ. ಕಾನೂನು ಉಲ್ಲಂಘನೆಗೆ ಅವಕಾಶ ಕೊಡದಂತೆ ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಚಿಕ್ಕಮಗಳೂರು: ದೇವಸ್ಥಾನದ ಜಾಗ ಎಂದು ಮನೆ ಕೆಡವಲು ಮುಂದಾದ ಗ್ರಾಮಸ್ಥರು

ಇನ್ನು ಕೆಸರುಮಡು ಗ್ರಾಮದ ಕರಗಲಮ್ಮ ದೇವಿಯ ಪೂಜೆ ವಿಚಾರವಾಗಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಕಾರ್ಯಕರ್ತರು ಮತ್ತು ಗ್ರಾಮದ ನಾಗರಿಕರು ಪೂಜೆಗೆ ಅವಕಾಶ ಕೊಡಲೇಬೇಕು ಎಂದು ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ತಹಸೀಲ್ದಾರ್‌, ಪೊಲೀಸ್‌ ಹಾಗೂ ಹಿರಿಯ ಅಧಿಕಾರಿಗಳು ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ತಹಸೀಲ್ದಾರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಹಸೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಗಳು, ಪೊಲೀಸ್‌ ಉಪ ವಿಭಾಗಾಧಿಕಾರಿಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್‌, ಹೆಬ್ಬಾಕ ರುದ್ರೇಶ್‌, ಕಾರ್ಯಕರ್ತರು, ಗ್ರಾಮದ ಮುಖಂಡರು ಹಾಗೂ ಹಿರಿಯರು ಉಪಸ್ಥಿತರಿದ್ದರು.

click me!