ದೇಶದ ಅಭಿವೃದ್ಧಿ ಆಧಾರದಲ್ಲಿ ಒಬ್ಬ ವ್ಯಕ್ತಿಯ ನಾಯಕತ್ವ ಅಳೆಯಬೇಕು/ ಭಾವಾನಾತ್ಮಕ ವಿಚಾರಗಳನ್ನ ಇಟ್ಟುಕೊಂಡು ನಾಯಕತ್ವ ಮಾಡೋದಲ್ಲ/ ದೇಶ ಆರ್ಥಿಕವಾಗಿ ದಿವಾಳಿಯಾಗ್ತಿದೆ/ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮೇಲೆ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು(ಮೇ) ದೇಶದ ಜಿಡಿಪಿ ಬಹಳ ಕುಸಿದಿದೆ. ಬಾಂಗ್ಲಾದೇಶ, ನೇಪಾಳಕ್ಕಿಂತ ಕಡಿಮೆ ಆರ್ಥಿಕ ಬೆಳವಣಿಗೆ ಇದೆ.. ಇದು ನಮಗೆ ನಾಚಿಗೆ ತರುವ ಸಂಗತಿ. .ಕೃಷಿ ಕ್ಷೇತ್ರದಲ್ಲಿ ಆಗಿರುವ ನಷ್ಟ, ಬಡತನ ನಿರ್ಮೂಲನೆ ಬಗ್ಗೆ ಪತ್ರದಲ್ಲಿ ಮೋದಿ ಅವರು ಹೇಳಿಲ್ಲ. ಕೈಗಾರಿಕೆಯಲ್ಲಿ ಬಂಡವಾಳ ಬಂದಿದೆ..? ಎಷ್ಟು ಉದ್ಯೋಗ ಸೃಷ್ಟಿ ಮಾಡಲಾಗಿದೆ ಅಂತ ಹೇಳಲಿಲ್ಲ ಈ ಬಗ್ಗೆ ಬಹಿರಂಗವಾಗಿ ಮಾಹಿತಿ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.
ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಎಪಿಎಂಸಿ ಕಾಯಿದೆಯನ್ನು ಯಾಕೆ ಬದಲಾವಣೆ ಮಾಡಲಾಗಿದೆ? ದೊಡ್ಡ ಉದ್ಯಮಿಗಳ ಪರವಾಗಿ ಕಾಯ್ದೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ದೇಶದ ಅಭಿವೃದ್ಧಿ ಆಧಾರದಲ್ಲಿ ಒಬ್ಬ ವ್ಯಕ್ತಿಯ ನಾಯಕತ್ವ ಅಳೆಯಬೇಕು ಭಾವಾನಾತ್ಮಕ ವಿಚಾರಗಳನ್ನ ಇಟ್ಟುಕೊಂಡು ನಾಯಕತ್ವ ಮಾಡೋದಲ್ಲ. ದೇಶ ಆರ್ಥಿಕವಾಗಿ ದಿವಾಳಿಯಾಗ್ತಿದೆ. ಯುವಕರು ಭವಿಷ್ಯ ರೂಪಿಸಿಕೊಳ್ಳಲು ಆಗದೆ ಬೀದಿಪಾಲಾಗ್ತಿದಾರೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿ; ಬಹುಪರಾಕ್ ಎಂದ ಜೆಡಿಎಸ್ ನಾಯಕ
ಕಾರ್ಮಿಕ ಕಾಯ್ದೆ ಬದಲಾವಣೆ ಮಾಡಿರುವುದು ಅಕ್ಷಮ್ಯ ಅಪರಾಧ. ಮೇ ಡೇ ಯಾಕೆ ಮಾಡ್ತಾರೆ ಗೊತ್ತಾ? ಕೆಲಸದ ವೇಳೆ 8 ಗಂಟೆ ಮಾಡಲು ಹೋರಾಟ ಮಾಡಿದ್ದಕ್ಕೆ ಮೇ ಡೇ ಮಾಡ್ತಾರೆ. ಹೋರಾಟ ಮಾಡಿದ್ದಕ್ಕೆ 8 ಗಂಟೆ ಆಯ್ತು. ಈಗ ಕೆಲಸದ ಅವಧಿಯನ್ನು ಜಾಸ್ತಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಕಾರ್ಮಿಕ ಕಾಯ್ದೆ ಬದಲಾವಣೆ ಮಾಡಲು ರಾಜ್ಯಗಳ ಮೇಲೆ ಒತ್ತಡ ಹೇರಲಾಗ್ತಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.
ಆತ್ಮನಿರ್ಭರ ಭಾರತ ಯೋಜನೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ ಹಣ ಚಲಾವಣೆಗೆ ಮಾಡಲು ಈ ಯೋಜನೆ ಸಹಾಯಕವಾಗಲ್ಲ. ಬರೀ ಘೋಷಣೆ ಅಷ್ಟೇ ಅದು. ಹಣ ಕಾರ್ಮಿಕರ ಜೇಬಿಗೆ ಬರಬೇಕಲ್ವೇ..? ಹಣ ಬಂದರೆ ಬೇಡಿಕೆ ಸೃಷ್ಟಿ ಆಗೋದಲ್ವೇ..? ಪ್ರಧಾನಿ ಮೋದಿ ಅವರು ಈ ಬಗ್ಗೆ ಯೋಜನೆ ಮಾಡಲೇ ಇಲ್ಲ ಎಂದಿದ್ದಾರೆ.
ರೈಲುಗಳಲ್ಲಿ ಕಾರ್ಮಿಕರು ಸಾಯುತ್ತಿರುವುದಕ್ಕೆ ಯಾರು ಹೊಣೆ? ಕೊರೊನಾ ಪರಿಹಾರಕ್ಕೆ 20 ಲಕ್ಷ ಕೋಟಿ ನೀಡಿದ್ದೇವೆ ಎನ್ನುವುದು ದೊಡ್ಡ ಜೋಕ್. ಕೇಂದ್ರ ಸರ್ಕಾರ ಜಿಡಿಪಿಯ ಶೇ 1 ರಷ್ಟು ಮಾತ್ರ ಪರಿಹಾರ ಘೋಷಣೆ ಮಾಡಿದ್ದಾರೆ. ಇವರು ಜನರ ಅಕೌಂಟ್ ಗಳಿಗೆ ದುಡ್ಡು ಹಾಕುವುದನ್ನು ಬಿಟ್ಟು ಲೆಕ್ಕ ತೋರಿಸಿದರೆ ಆರ್ಥಿಕತೆ ಹೇಗೆ ಅಭಿವೃದ್ಧಿ ಆಗಲು ಸಾಧ್ಯ? ಕೋರನಾ ನಿರೀಕ್ಷಿತ ತಪಾಸಣೆ ಮಾಡದೇ ಕೇಸ್ ಕಡಿಮೆ ಇದೆ ಅಂತ ಬಿರುದು ಪಡೆದುಕೊಳ್ಳುತ್ತಿದ್ದಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ ಎಂದು ದೂರಿದ್ದಾರೆ.
ಜಾಗಟೆ ಬಾರಿಸಿ, ದೀಪ ಹಚ್ಚೋದು ಇವರ ಸಾಧನೆ. ಕೇರಳದಲ್ಲಿ ಫೆಬ್ರವರಿಯಲ್ಲಿ ಕೊರೊನಾ ಬಂದಿತ್ತು. ಮಾರ್ಚ್ ಆರಂಭದಲ್ಲೇ ವಿಮಾನಗಳನ್ನು ರದ್ದು ಮಾಡಬೇಕಿತ್ತು. ಅಮೆರಿಕದ ಅಧ್ಯಕ್ಷ ಟ್ರಂಪ್ ಗೆ ಆಹ್ವಾನ ಕೊಟ್ಟಿದ್ದು ಯಾಕೆ? ತಬ್ಲಿಘಿಗಳಿಗೆ ಅವಕಾಶ ಕೊಟ್ಟಿದ್ದು ಯಾಕೆ? ನಿಮ್ಮ ಇಂಟಲಿಜೆನ್ಸ್ ಎಲ್ಲಿತ್ತು? ನಿಮಗೆ ಗೊತ್ತಿರಲಿಲ್ವಾ..?
ಸಂಕಷ್ಟದ ಸಮಯದಲ್ಲಿ ರಾಜಕೀಯ ಮಾಡಲು ನಾಚಿಕೆ ಆಗಲ್ವಾ.? ತಬ್ಲಿಘಿಗಳಿಂದಲೇ ಕೊರೊನಾ ಬಂದಿದೆ ಅಂತ ಅಪಪ್ರಚಾರ ಮಾಡಿದ್ದೀರಿ, ಇಂಗ್ಲೆಂಡ್, ಸ್ಪೇನ್, ಇಟಲಿ, ಅಮೇರಿಕಾದಲ್ಲಿ ಯಾವ ತಬ್ಲಿಘಿಗಳು ಇದ್ದರು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.