ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಮಂತ್ರಿಗಿರಿ ಕೇಳುವುದರಲ್ಲಿ ತಪ್ಪೇನಿದೆ: ಬಿಜೆಪಿ ಶಾಸಕ

By Suvarna News  |  First Published May 30, 2020, 2:40 PM IST

ಉಮೇಶ್ ಕತ್ತಿ ಜೊತೆ ಭೋಜನಕ್ಕೆ ಹೋಗಿಲ್ಲ ಶಾಸಕ ಪರಣ್ಣ ಮುನವಳ್ಳಿ| ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರು  ನಮ್ಮ ನಾಯಕರು ಅವರ ಸಲಹೆ ಸೂಚನೆ ಪಡೆಯುತ್ತೇನೆ| ಪಕ್ಷದಲ್ಲಿ ಸಣ್ಣಪುಟ್ಟ ತಪ್ಪುಗಳು ಇರುತ್ತವೆ, ಅದನ್ನ ವರಿಷ್ಠರು ಸರಿಪಡಿಸುತ್ತಾರೆ|


ಗಂಗಾವತಿ(ಮೇ.29): ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ಹಿರಿಯ ಶಾಸಕರಾಗಿದ್ದು ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇದರಲ್ಲಿ ಸಚಿವ ಸ್ಥಾನ ಕೇಳುವದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

undefined

ಕರ್ನಾಟಕ ಬಿಜೆಪಿ ಬಂಡಾಯದ ಹಿಂದಿದೆ ಮತ್ತೊಂದು ರಾಜಕಾರಣ..!

ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರು  ನಮ್ಮ ನಾಯಕರು ಅವರ ಸಲಹೆ ಸೂಚನೆ ಪಡೆಯುತ್ತೇನೆ. ಹಿರಿಯ ಶಾಸಕ ಉಮೇಶ್ ಕತ್ತಿ ಅವರು ಕರೆದ ಭೋಜನಕ್ಕೆ ತಾವು ಹೋಗಿಲ್ಲ. ಪಕ್ಷದಲ್ಲಿ ಸಣ್ಣಪುಟ್ಟ ತಪ್ಪುಗಳು ಇರುತ್ತವೆ. ಅದನ್ನ ವರಿಷ್ಠರು ಸರಿಪಡಿಸುತ್ತಾರೆ. ಮುಖ್ಯಮಂತ್ರಿಗಳು ಅಭಿವೃದ್ಧಿ ಮತ್ತು ಕೊರೋನಾ ನಿಯಂತ್ರಿಸುವದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. 
 

click me!