Kalaburagi rains: ಶವ ಸಂಸ್ಕಾರಕ್ಕೂ ಬಿಡದ ಮಳೆರಾಯ; ಸೇತುವೆ ಮುಳುಗಿ ಸಂಚಾರ ಅಸ್ತವ್ಯಸ್ತ

By Kannadaprabha News  |  First Published Jul 22, 2023, 10:35 AM IST

ಚಿಂಚೋಳಿ ತಾಲೂಕಿನಲ್ಲಿ ಕಳೆದ ನಾಲ್ಕು ಮಳೆರಾಯನ ಆರ್ಭಟಕ್ಕೆ ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಬ್ಯಾರೇಜ್‌ ಸೇತುವೆಗಳು ಜಲಾವೃತವಾಗಿರುವುದರಿಂದ ಅನೇಕ ಗ್ರಾಮಗಳ ಗ್ರಾಮಸ್ಥರು ತೊಂದರೆ ಪಡಬೇಕಾಗಿದೆ.


ಚಿಂಚೋಳಿ (ಜು.22) :  ಚಿಂಚೋಳಿ ತಾಲೂಕಿನಲ್ಲಿ ಕಳೆದ ನಾಲ್ಕು ಮಳೆರಾಯನ ಆರ್ಭಟಕ್ಕೆ ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಬ್ಯಾರೇಜ್‌ ಸೇತುವೆಗಳು ಜಲಾವೃತವಾಗಿರುವುದರಿಂದ ಅನೇಕ ಗ್ರಾಮಗಳ ಗ್ರಾಮಸ್ಥರು ತೊಂದರೆ ಪಡಬೇಕಾಗಿದೆ.

ಶವ ಸಂಸ್ಕಾರಕ್ಕೂ ಮಳೆಯ ಅಡ್ಡಿ ಕಾಡುತ್ತಿದೆ. ಗಾರಂಪಳ್ಳಿ ಗ್ರಾಮದ ವ್ಯಕ್ತಿಯೋರ್ವನು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಅವರ ಮೃತ ದೇಹ ಕಲಬುರಗಿ ಆಸ್ಪತ್ರೆಯಿಂದ ತಂದಾಗ ರಾತ್ರಿ ಸೇತುವೆ ಮೇಲೆ ನೀರು ಪ್ರವಹಿಸಿದ್ದರಿಂದ ಶವ ನದಿ ದಂಡೆಯ ಹತ್ತಿರದಲ್ಲಿ ಇಡಬೇಕಾಯಿತು. ಶವ ಸಂಸ್ಕಾರಕ್ಕೆ ತೊಂದರೆಯಾಯಿತು. ಬೆಳಗಿನ ಜಾವ ಊರಿಗೆ ಶವ ಕೊಂಡೊಯ್ಯಲು ಹರಸಾಹಸ ಪಡಬೇಕಾಯ್ತು. ಜನರೆಲ್ಲರೂ ಸೇರಿ ಶವ ಹೊತ್ತೊಯ್ದರಾದರೂ ನಂತರದ ಸಂಸ್ಕಾರಕ್ಕೂ ಮಳೆ ಅಡ್ಡಿ ಮಾಡಿತ್ತು.

Tap to resize

Latest Videos

undefined

 

ಮಳೆ ಆರ್ಭಟ ಜೋರು: ಬೆಳಗಾವಿಯಲ್ಲಿ 5ಕ್ಕೂ ಹೆಚ್ಚು ಸೇತುವೆಗಳು ಜಲಾವೃತ

5 ಗ್ರಾಮಗಳ ಸೇತುವೆ ಜಲಾವೃತ:

ತಾಲೂಕಿನಲ್ಲಿ ಮಳೆಯ ಅರ್ಭಟಕ್ಕೆ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ನಾಲ್ಕು ಗೇಟುಗಳ ಮೂಲಕ ಎರಡು ಸಾವಿರ ಕ್ಯೂಸೆಕ ನೀರು ಹರಿದು ಬಿಟ್ಟಿರುವುದರಿಂದ ಚಿಮ್ಮನಚೋಡ, ತಾಜಲಾಪುರ, ಗರಗಪಳ್ಳಿ, ಕನಕಪುರ,ಗೌಡನಹಳ್ಳಿ, ಗಾರಂಪಳ್ಳಿ ಸೇತುವೆಗಳು ಕಳೆದ ಮೂರು ದಿನಗಳಿಂದ ಜಲಾವೃತವಾಗಿವೆ. ಇದರಿಂದಾಗಿ ಅರೋಗಿಗಳು ಆಸ್ಪತ್ರೆಗೆ ಹೋಗುವುದಕ್ಕೆ ತೊಂದರೆ ಪಡಬೇಕಾಗಿದೆ.ಚಿಮ್ಮನಚೋಡ ಸೇತುವೆ ಜಲಾವೃತದಿಂದಾಗಿ ಸಲಗರಬಸಂತಪುರ, ಮದರಗಿ,ನಿರ್ಣಾ,ಮುತ್ತಂಗಿ,ಮನ್ನಾಎಕ್ಕೆಳಿಗೆಹೋಗುವ ವಾಹನಗಳು ಚಿಂಚೋಳಿ ರಸ್ತೆ ಮೂಲಕಹೋಗಬೇಕಾಯಿತು.

ಗರಗಪಳ್ಳಿ ಸೇತುವೆ ಮುಳುಗಿದ ಪ್ರಯುಕ್ತ ಕುಂಚಾವರಂ ಸುಲೇಪೇಟ ಮಾರ್ಗರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ತಾಜಲಾಪುರ ಗ್ರಾಮದ ಮತ್ತಗಾರಂಪಳ್ಳಿ ಗ್ರಾಮದ ಸೇತುವೆ ಮಳೆ ನೀರಿನಿಂದ ಮುಳುಗಿ ಹೋಗಿದ್ದರಿಂದ ಜನರು ಊರೊಳಗೆ ಹೋಗಲು ರಸ್ತೆ ಇಲ್ಲದಿರುವ ಕಾರಣ ತುಮಕುಂಟಾ ರಸ್ತೆ ಮೂಲಕ ಗ್ರಾಮಕ್ಕೆಬರಬೇಕಾಗಿದೆ ಎಂದು ಸತೀಶರೆಡ್ಡಿ ತಾಜಲಾಪುರ ಮತ್ತು ಹಣಮಂತ ಬೋವಿ ತಿಳಿಸಿದ್ದಾರೆ. ಕುಂಚಾವರಂ ಗಡಿಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಿಂದಾಗಿ ಎತ್ತಪೋತ ಜಲಧಾರೆ ಮೈದುಂಬಿಹರಿಯುತ್ತಿದೆ.

ಖಾನಾಪುರದಲ್ಲಿ ವರುಣನ ಅಬ್ಬರ: ತುಂಬಿ ಹರಿಯುತ್ತಿರುವ ಮಲಪ್ರಭೆ

click me!