ಕರ್ನಾಟಕ ಸರ್ಕಾರಕ್ಕೆ ವಾಸ್ತು ದೋಷ

By Web DeskFirst Published Aug 14, 2018, 10:35 AM IST
Highlights

ರಾಜ್ಯ ಸರ್ಕಾರ ವಾಸ್ತು ಪ್ರಕಾರವಾಗಿ ನಡೆಯುತ್ತಿದ್ದರೂ ಕೂಡ ಇದೊಂದು ವಾಸ್ತುಪರ ವಾಸ್ತುದೋಷವಿರೋ ಸರ್ಕಾರವಾಗಿದೆ ಎಂದು ಬಿಜೆಪಿ ಮುಖಂಡ ಆರ್‌.ಅಶೋಕ್ ವ್ಯಂಗ್ಯವಾಡಿದ್ದಾರೆ.

ಮಡಿಕೇರಿ: ರಾಜ್ಯ ಸರ್ಕಾರ ವಾಸ್ತು ಪ್ರಕಾರವಾಗಿ ನಡೆಯುತ್ತಿದ್ದು, ಇದೊಂದು ವಾಸ್ತುಪರ ವಾಸ್ತುದೋಷವಿರೋ ಸರ್ಕಾರವಾಗಿದೆ ಎಂದು ವ್ಯಂಗ್ಯವಾಡಿರುವ ಬಿಜೆಪಿ ಮುಖಂಡ ಆರ್‌.ಅಶೋಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಚಿವ ಎಚ್‌.ಡಿ.ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸೋಮವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸಭಾ ಅಧಿವೇಶನಕ್ಕೆ ವಾಸ್ತು ನೋಡಿ ದಿನ ನಿಗದಿಪಡಿಸಲಾಗುತ್ತಿದ್ದು, ರಾಹುಕಾಲದಲ್ಲಿ ಯಾವುದೇ ಮಸೂದೆಗಳು ಮಂಡನೆಯಾಗುವುದಿಲ್ಲ. 

ಸೂಪರ್‌ ಸಿಎಂ ಎಂದೇ ಗುರುತಿಸಿಕೊಂಡಿರುವ ಸಚಿವ ಎಚ್‌.ಡಿ.ರೇವಣ್ಣ ನಿಂಬೆಹಣ್ಣು ಇಟ್ಟುಕೊಂಡೇ ವಿಧಾನಸಭೆ ಪ್ರವೇಶಿಸುತ್ತಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಾಸ್ತು ದೋಷದಿಂದಾಗಿ ಸರ್ಕಾರಿ ನಿವಾಸಕ್ಕೆ ಎಂಟ್ರಿಯೇ ಕೊಟ್ಟಿಲ್ಲ. ಒಟ್ಟಿನಲ್ಲಿ ಇದೊಂದು ವಾಸ್ತುಪ್ರಕಾರ ಸರ್ಕಾರವಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವೆಂದು ಆರೋಪಿಸಿದರು

click me!