ವೈರಲ್ ವಿಡಿಯೋ ಬಾಲಕನಿಂದ ಕೊಡಗಿಗೆ ಜಾಕ್'ಪಾಟ್

Published : Jul 19, 2018, 11:38 PM IST
ವೈರಲ್ ವಿಡಿಯೋ ಬಾಲಕನಿಂದ ಕೊಡಗಿಗೆ ಜಾಕ್'ಪಾಟ್

ಸಾರಾಂಶ

ಕೊಡಗಿನ ಸಮಸ್ಯೆಯ ಬಗ್ಗೆ ವಿಡಿಯೋ ಮಾಡಿ ಸಿಎಂಗೆ ಕ್ಲಾಸ್ ತೆಗೆದುಕೊಂಡಿದ್ದ ಬಾಲಕ ಅಬ್ದುಲ್ ಪತ್ತಾಹ್ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಹಂತದಲ್ಲಿ 100 ಕೋಟಿ ರೂ. ಅನುದಾನ ನೀಡುವ ಭರವಸೆ

ಮಡಿಕೇರಿ[ಜು.19]: ಕೊಡಗಿನ ಸಮಸ್ಯೆಯ ಬಗ್ಗೆ ವಿಡಿಯೋ ಮಾಡಿ ಸಿಎಂಗೆ ಕ್ಲಾಸ್ ತೆಗೆದುಕೊಂಡಿದ್ದ ಬಾಲಕ ಅಬ್ದುಲ್ ಪತ್ತಾಹ್ ಮನೆಗೆ  ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿದರು.

ಬಾಲಕನ ಮಾತುಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು,ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಹಂತದಲ್ಲಿ  100 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. 

ಬಾಲಕನ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಇನ್ನೂ ಮಳೆ ಹಾನಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ವಿದ್ಯುತ್ ಸಂಪರ್ಕ ವ್ಯವಸ್ಥೆ ಕುರಿತು ಹೆಚ್ಚುವರಿ ಸಿಬ್ಬಂದಿ ನೇಮಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ತ್ವರಿತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

"

"

PREV
click me!

Recommended Stories

Kodagu: ಕೊಡಗಿನ ಕಾಡು ಕಾಯಲು 'ಅಗ್ನಿ' ರಣತಂತ್ರ: ಬೆಂಕಿ ರೇಖೆ ನಿರ್ಮಾಣ ಕಾರ್ಯ ಬಿರುಸು
ಅಶೋಕ್, ವಿಜಯೇಂದ್ರ ಸೇರಿ ಈಗಿನ ರಾಜ್ಯ ಬಿಜೆಪಿ ನಾಯಕರಿಗೆ ಮೆಚುರಿಟಿ ಇಲ್ಲ- ಸಚಿವ ಬೋಸರಾಜು ಕಿಡಿ