ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಗೆ 3ನೇ ಬಾರಿ ಆಯೋಗ ರಚಿಸಿದ ಸರ್ಕಾರ

Published : Jun 23, 2023, 07:41 PM ISTUpdated : Jun 23, 2023, 07:42 PM IST
ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಗೆ 3ನೇ ಬಾರಿ ಆಯೋಗ ರಚಿಸಿದ ಸರ್ಕಾರ

ಸಾರಾಂಶ

ಬಿಬಿಎಂಪಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆಗೆ ಆಯೋಗವನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು (ಜೂ.23): ರಾಜ್ಯದ ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆಯಾದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ ಮರುವಿಂಗಡಣೆಗೆ ರಾಜ್ಯ ಸರ್ಕಾರದಿಂದ ಆಯೋಗವನ್ನು ರಚಿಸಿ ಆದೇಶ ಹೊರಡಿಸಿದೆ. 12 ವಾರಗಳಲ್ಲಿ ವಾರ್ಡ್‌ ಮರುವಿಂಗಡಣಾ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ.

2020ರ ಸೆಪ್ಟಂಬರ್‌ನಲ್ಲಿ ಬಿಬಿಎಂಪಿ ಸದಸ್ಯರ (ಕಾರ್ಪೋರೇಟರ್‌ಗಳ) ಅಧಿಕಾರ ಪೂರ್ಣಗೊಂಡಿದೆ. ಚುನಾವಣೆ ನಡೆಸುವ ದೃಷ್ಟಿಯಿಂದ 198 ವಾರ್ಡ್‌ಗಳಿಗೆ ವಾರ್ಡ್‌ ಪುನರ್‌ವಿಂಗಡಣೆ ಮಾಡಲಾಗುತ್ತು. ನಂತರ, ಆಡಳಿತಾತ್ಮಕ ದೃಷ್ಟಿಕೋನದಿಂದ ಬಿಬಿಎಂಪಿ-2020 ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಈ ವೇಳೆ ಬಿಬಿಎಂಪಿ ವ್ಯಾಪ್ತಿಯನ್ನು 243 ವಾರ್ಡ್‌ಗಳನ್ನಾಗಿ ಮಾಡಿ ರಚನೆ ಮಾಡಲಾಯಿತು. ನಂತರ ಚುನಾವಣೆ ದೃಷ್ಟಿಯಿಂದ ವಾರ್ಡ್‌ಗಳ ಮರುವಿಂಗಡಣೆ ಮಾಡಲಾಯಿತು. ಆದರೆ, ವಾರ್ಡ್‌ ಮರುವಿಂಗಡಣೆ ಸೂಕ್ತವಾಗಿಲ್ಲ ಎಂದು ಮಾಜಿ ಪಾಲಿಕೆ ಸದಸ್ಯರು ಕೋರ್ಟ್‌ ಮೊರೆ ಹೋಗಿದ್ದರು.

ಬಿಬಿಎಂಪಿ ಚುನಾವಣೆ ತಡೆಗೆ ‘ವಿಂಗಡಣೆ’ ನೆಪ: ಬಿಜೆಪಿಯ ತಂತ್ರವೇ ಮತ್ತೆ ಬಳಕೆ

ಕಾಂಗ್ರೆಸ್‌ ಸರ್ಕಾರದಿಂದ ಮತ್ತೊಮ್ಮೆ ಮರುವಿಂಗಡಣೆ:  ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಬಿಎಂಪಿ ಚುನಾವಣೆ ಹಾಗೂ ವಾರ್ಡ್‌ ಮರುವಿಂಗಡಣೆ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್‌ಗೆ ಸರ್ಕಾರವು ತಪ್ಪುಗಳನ್ನು ಸರಿಪಡಿಸಿ 12 ವಾರಗಳಲ್ಲಿ ಹೊಸದಾಗಿ ವಾರ್ಡ್‌ಗಳ ಮರುವಿಂಗಡಣೆ ಮಾಡುವಂತೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಈಗ ಮತ್ತೊಮ್ಮೆ (ಮೂರನೇ ಬಾರಿಗೆ) ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಗೆ ಆಯೋಗವನ್ನು ರಚಿಸಿ ಆದೇಶ ಹೊರಡಿಸಿದೆ. 

ಬಿಬಿಎಂಪಿ ವಾರ್ಡ್​ಗಳ ಪುನರ್​ ವಿಂಗಡನೆಗೆ ಆಯೋಗ ರಚಿಸಿ ಸರ್ಕಾರದ ಆದೇಶ : ಹೈಕೋರ್ಟ್​ ಸೂಚನೆಯಂತೆ ವಾರ್ಡ್​ ಪುನರ್​ ವಿಂಗಡನೆಯ ಹಳೆ ಅಧಿಸೂಚನೆಯನ್ನ ಕೈಬಿಟ್ಟ ರಾಜ್ಯ ಸರ್ಕಾರ, ಹೊಸದಾಗಿ ವಾರ್ಡ್​ಗಳ ಡಿಲಿಮಿಟೇಶನ್​ಗೆ ಆಯೋಗ ರಚಿಸಿ ಆದೇಶ ಹೊರಡಿಸಿದೆ. ಹೈಕೋರ್ಟ್​ ಆದೇಶದಂತೆ 12 ವಾರಗಳಲ್ಲಿ ವಾರ್ಡ್​ಗಳ ಪುನರ್​ ವಿಂಡಗನೆ ಮಾಡಲು ನೂತನ ಆಯೋಗಕ್ಕೆ ಸರ್ಕಾರದ ಸೂಚನೆ ನೀಡಿದೆ. ಸರ್ಕಾರ ರಚಿಸಿದ ಪುನರ್ ಆಯೋಗದಲ್ಲಿ  ಬಿಬಿಎಂಪಿ ಮುಖ್ಯ ಆಯುಕ್ತ ರು ಅಧ್ಯಕ್ಷರಾಗಿದ್ದಾರೆ. ಜೊತೆಗೆ, ಬಿಡಿಎ ಆಯುಕ್ತರು, ಬೆಂಗಳೂರು ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿ ಕಂದಾಯ ವಿಭಾಗದ ಆಯುಕ್ತರನ್ನು ಸದಸ್ಯರನ್ನಾಗಿ ಮಾಡಲಾಗಿದೆ. 

ಬಿಬಿಎಂಪಿ 5 ಹೋಳು ಮಾಡಲು ಸರ್ಕಾರ ಸಿದ್ಧತೆ: ಪಾಲಿಕೆ ಚುನಾವಣೆ ಮುಂದೂಡಿಕೆ?

  • ಡಿಲಿಮಿಟೇಶನ್​ ಆಯೋಗಕ್ಕೆ ಸರ್ಕಾರದಿಂದ ಹಲವು ಷರತ್ತುಗಳು : 
  • - ಹೈಕೋರ್ಟ್​ ಆದೇಶದಂತೆ ನಿಗದಿತ 12 ವಾರಗಳಲ್ಲಿ ವಾರ್ಡ್‌ಗಳ ಪುನರ್​​ ವಿಂಗಡಣೆ ಮಾಡಿ ಸರ್ಕಾರಕ್ಕೆ  ವರದಿ ಸಲ್ಲಿಸಬೇಕು.
  • - ಹೈಕೋರ್ಟ್​ ಆದೇಸದಂತೆ ಆಯೋಗವು ಡಿಲಿಮಿಟೇಶನ್​ ಪ್ರಕ್ರಿಯೆಯನ್ನ ಕಾನೂನಾತ್ಮಕವಾಗಿ, ಮಾರ್ಗಸೂಚಿ ಪ್ರಕಾರ ಕಟ್ಟುನಿಟ್ಟಾಗಿ ಮಾಡಬೇಕು.
  • - ಕ್ಷೇತ್ರ ಅಧ್ಯಯನ, ಸ್ಥಳ ಪರಿಶೀಲನೆ ಹಾಗೂ ಅಗತ್ಯ ಸಮಾಲೋಚನೆಗಳನ್ನ ಸೂಕ್ತವಾಗಿ ನಿರ್ವಹಿಸುವುದು.
  • - ಡಿಲಿಮಿಟೇಶನ್​​ ವೆಚ್ಚ ಹಾಗೂ ಎಲ್ಲಾ ವ್ಯವಸ್ಥೆಯನ್ನು ಬಿಬಿಎಂಪಿ ನಿಧಿಯಿಂದ ಭರಿಸಬೇಕು.

PREV
Read more Articles on
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!