ಆಗುಂಬೆ ಘಾಟ್‌ನಲ್ಲಿ ಅಪಘಾತ ತಗ್ಗಿಸಲು ರಿಫ್ಲೆಕ್ಟರ್ ಅಳವಡಿಕೆ: ಪೊಲೀಸರಿಂದ ಹೊಸ ತಂತ್ರ

By Sathish Kumar KH  |  First Published Jun 23, 2023, 6:57 PM IST

ಉಡುಪಿ ಜಿಲ್ಲೆಯ ಹೆಬ್ರಿ- ಆಗುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಪೊಲೀಸರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸುಧಾರಣಾ ತಂತ್ರಗಳನ್ನು ರೂಪಿಸಿದ್ದಾರೆ.


ಉಡುಪಿ (ಜೂ.23): ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಘಾಟಿ ಹಾಗೂ ಇತರ ಪ್ರದೇಶದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆದ ಅಫಘಾತಗಳಿಂದ ಜೀವಹಾನಿಯಾಗಿದ್ದು, ಈ ನಿಟ್ಟಿನಲ್ಲಿ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಯಾವ ರೀತಿಯಲ್ಲಿ ಜಾಗೃತಿ ಮೂಡಿಸಲು ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ ಐ, ಆರ್ ಟಿ ಒ ಹಾಗೂ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಈ ಕುರಿತು ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ ಐ, ಆರ್ ಟಿ ಒ ಹಾಗೂ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ರಸ್ತೆಯಲ್ಲಿ ಹೆಚ್ಚಿನ ರಿಫ್ಲೆಕ್ಟರ್ ಅಳವಡಿಕೆ, ರಸ್ತೆ ತಿರುವುಗಳಲ್ಲಿ ಎಚ್ಚರಿಕೆ ಫಲಕ, ಕ್ಯಾಟ್ ಐಯ್ ಅಳವಡಿಕೆ. ತಿರುವುಗಳಲ್ಲಿ ಭಾಗಿರುವ ಮರದ ಕೊಂಬೆಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಲಹೆ ಪಡೆಯಲಾಯಿತು. ಈಗಾಗಲೇ ಪೊಲೀಸ್ ಇಲಾಖೆಯಿಂದ ಅಫಘಾತ ವಲಯ ಎಚ್ಚರಿಕೆ ಸೈನ್ ಬೋರ್ಡ್ ಗಳನ್ನು ಹಾಕಲಾಗಿದ್ದು, ಇನ್ನೂ ಹೆಚ್ಚು ಸೈನ್ ಬೋರ್ಡ್ ಗಳನ್ನು ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಕಿರಿದಾದ ರಸ್ತೆ ಇರುವಲ್ಲಿ, ತಿರುವು ರಸ್ತೆ, ಅಫಘಾತ ವಲಯ ಸೈನ್ ಬೋರ್ಡ್ ಗಳನ್ನು ಕೂಡ ಹಾಕಲು ನಿರ್ಧಾರ ಕೈಗೊಳ್ಳಾಗಿದೆ.

Latest Videos

undefined

ಮಲ್ಪೆ ಕಡಲ ತೀರದ ಗಂಗೆ ಕೂದಲಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು!

ವಾಹನಗಳ ವೇಗ ತಗ್ಗಿಸಲು ರಿಬ್ಲಿಂಗ್‌ ಅಳವಡಿಕೆ:  ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡಿರುತ್ತಾರೆ. ಅಲ್ಲದೆ ವಾಹನಗಳ ವೇಗವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ತಿರುವುಗಳಲ್ಲಿ ಹೆಚ್ಚು ಕಡೆ ರಿಬ್ಲಿಂಗ್ಸ್ ಗಳನ್ನು ಹಾಕುವುದು. ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಮತ್ತು ಭಾನುವಾರ ಸೋಮೇಶ್ವರ ಪೇಟೆ ಮತ್ತು ಘಾಟಿ ಆರಂಭವಾಗುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. 

ಸಾರ್ವಜನಿಕರ ಸಹಕಾರದಿಂದ ಬ್ಯಾನರ್‌ ಅಳವಡಿಕೆ:  ಹೆಬ್ರಿ-ಆಗುಂಬೆ ರಾಷ್ಟ್ರೀಯ ಹೆದ್ದಾರಿಯ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಅಲ್ಲಲ್ಲಿ ಸಾರ್ವಜನಿಕರ ಸಹಕಾರದಿಂದ ಅಪಘಾತದ ಎಚ್ಚರಿಕೆ ಬ್ಯಾನರ್ ಗಳನ್ನು ವಹಿಸುವಂತೆ ಕ್ರಮ ಕೈ ಗೊಳ್ಳಲಾಯಿತು. ಈ ವೇಳೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಸಿಪಿಐ ಟಿಡಿ ನಾಗರಾಜ್, ಹೆಬ್ರಿ ಪಿಎಸ್ಐ ಸುದರ್ಶನ ದೊಡ್ಡಮನಿ, ಆರ್ ಟಿ ಒ ಅಧಿಕಾರಿ ಸಂತೋಷ್ ಶೆಟ್ಟಿ, ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ನವೀನ್ ಮತ್ತು ಶಶಿಧರ್ ಉಪಸ್ಥಿತರಿದ್ದರು.

ಮಲ್ಪೆ ಬೀಚ್‌ನ ಗಂಗೆ ಕೂದಲಿನ ರಹಸ್ಯ ಬಯಲು:  ಉಡುಪಿ (ಜೂ.22): ಉಡುಪಿಯ ಮಲ್ಪೆಯ ಸಮುದ್ರ ತಟದಲ್ಲಿ ಕಳೆದ ಎರಡು ಶಾವಿಗೆ ಮಾದರಿಯ ವಿಚಿತ್ರ ವಸ್ತುಗಳು ಕಂಡುಬಂದಿತ್ತು. ದಶಕಗಳ ಬಳಿಕ ಕಂಡು ಬಂದ ಈ ವಿಚಿತ್ರ ವಿದ್ಯಮಾನದಿಂದ ಸ್ಥಳೀಯರು ಅಚ್ಚರಿಪಟ್ಟಿದ್ದರು. ಈಗ ವಿಜ್ಞಾನಿಗಳು ಸ್ಥಳ ಭೇಟಿ ಮಾಡಿದ್ದು, ಗಂಗೆ ಕೂದಲಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಸದ್ಯ ಇದೇ ವಿಚಾರವಾಗಿ ಸಂಶೋಧನೆ ನಡೆಸಿದ ವಿಜ್ಞಾನಿಗಳು ಇದು ಸಲೋಪೆನ್ಟ್ ಟ್ಯೂಬ್ ವರ್ಮ್ (Cellophane tube worms) ಎಂದು ಪತ್ತೆ ಹಚ್ಚಿದ್ದಾರೆ. 

ಶಾಸಕರಿಗೆ ಶ್ರೀ ರವಿಶಂಕರ ಗುರೂಜಿ, ಹೆಗ್ಗಡೆ ಪಾಠಕ್ಕೆ ಎಸ್‌.ಡಿ.ಪಿ.ಐ. ವಿರೋಧ

ಸಮುದ್ರದಡಿ ವಾಸಿಸುವ ವಿಚಿತ್ರ ಜೀವಿ: ಮಲ್ಪೆ ಕಡಲತಡಿಯಲ್ಲಿ ಈ ವಿಚಿತ್ರ ಜೀವಿ ಪತ್ತೆಯಾದ ಬೆನ್ನಲ್ಲೇ ಮೀನುಗಾರಿಕಾ ಮಹಾವಿದ್ಯಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೀನುಗಾರಿಕಾ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ್ ಮಗದ ಮತ್ತು ತಂಡದವರು ಮಲ್ಪೆಯ ಕಡಲ ತಡಿಯಲ್ಲಿ ಬಿದ್ದಿದ್ದ ಈ ವಿಚಿತ್ರ ವಸ್ತುವನ್ನು ಪರಿಶೀಲನೆ ನಡೆಸಿ ಇದು ಸಲೋಪೆನ್ಟ್ ಟ್ಯೂಬ್ ವರ್ಮ್ ಖಚಿತಪಡಿಸಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಪಣಂಬುರು ಬೀಚಿನಲ್ಲಿ ಈ ಇಂಥದ್ದೇ ಜೀವಿ ಪತ್ತೆಯಾಗಿತ್ತು. 

click me!