‘ಪೊಲೀಸರಿಗೂ 15 ದಿನ ಸಾಂದರ್ಭಿಕ ರಜೆ ನೀಡಿ’

By Kannadaprabha NewsFirst Published Dec 4, 2019, 7:55 AM IST
Highlights

ಪೊಲೀಸರಿಗೂ 15 ದಿನಗಳ ಸಾಂದರ್ಭಿಕ ರಜೆ ನೀಡಬೇಕು ಎಂದು ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. 

ಬೆಂಗಳೂರು [ಡಿ.04]:  ರಾಜ್ಯ ಸರ್ಕಾರ ಇತ್ತೀಚೆಗೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿಗಳಿಗೆ 15 ದಿನಗಳ ಸಾಂದರ್ಭಿಕ ರಜೆ ಹಾಗೂ ಎರಡು ದಿನಗಳ ಪರಿಮಿತ ರಜೆ ಸೌಲಭ್ಯವನ್ನು ಈ ಹಿಂದಿನಂತೆ ಮುಂದುವರೆಸಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಸಿಬ್ಬಂದಿಗೂ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ರಾಜ್ಯ ಸರ್ಕಾರ ಆಡಳಿತಾತ್ಮಕ ದೃಷ್ಟಿಯಿಂದ ಸರ್ಕಾರಿ ನೌಕರರಿಗೆ ಎರಡು ಮತ್ತು ನಾಲ್ಕನೆಯ ಶನಿವಾರ ಸಾರ್ವತ್ರಿಕ ರಜೆ ಎಂದು ಘೋಷಿಸಿ, ಇದಕ್ಕೆ ಪರ್ಯಾಯವಾಗಿ 15 ದಿನಗಳ ಸಾಂದರ್ಭಿಕ ರಜೆಯನ್ನು 10 ದಿನಗಳಿಗೆ ಸೀಮಿತಗೊಳಿಸಿ ಆದೇಶಿಸಿತ್ತು. ಆದರೆ ನಾಲ್ಕನೆಯ ಶನಿವಾರದಂದು ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇತ್ತೀಚೆಗೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಈ ಹಿಂದೆ ಇದ್ದಂತೆ 15 ದಿನಗಳ ಸಾಂದರ್ಭಿಕ ರಜೆ ಹಾಗೂ ಎರಡು ದಿನಗಳ ಪರಿಮಿತ ರಜೆ ಸೌಲಭ್ಯವನ್ನು ಮುಂದುವರೆಸಿ ಆದೇಶಿಸಿದೆ.

ಮದ್ವೆ ನಾಟಕವಾಡಿ ಕೊಲೆ ಆರೋಪಿ ಬಂಧಿಸಿದ ಮಹಿಳಾ SI!..

ಪೊಲೀಸ್‌ ಇಲಾಖೆ ಸಿಬ್ಬಂದಿಯೂ ಸಹ ನಾಲ್ಕನೆಯ ಶನಿವಾರ ಕರ್ತವ್ಯ ನಿರ್ವಹಿಸುವುದರಿಂದ ಅವರಿಗೂ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿಗೆ ನೀಡಿದ ರೀತಿಯಲ್ಲಿ ರಜೆ ಸೌಲಭ್ಯ ನೀಡುವಂತೆ ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

click me!