ಕುಕ್ಕೆ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಸಂಕಲ್ಪ ಮಾಡಿ ರಾಜ್ಯಪಾಲ ಗೆಹ್ಲೋಟ್

By Suvarna News  |  First Published Jun 30, 2022, 6:01 PM IST

ಕರ್ನಾಟಕದ ಸುಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ  ರಾಜ್ಯಪಾಲ ತಾವರ್ ಚಾಂದ್ ಗೆಹ್ಲೋಟ ಅವರು ಸರ್ಪ ಸಂಸ್ಕಾರ ಸಂಕಲ್ಪ ಮಾಡಿದ್ದಾರೆ.  ಪತ್ನಿ ಅನಿತಾ ಗೆಹ್ಲೋಟ್ ಜೊತೆ ಆಗಮಿಸಿ ಸರ್ಪ ಸಂಸ್ಕಾರ ಕ್ರಿಯೆ ನಡೆಸಿದ್ದಾರೆ,


ಕಡಬ (ಜೂನ್ 30): ಕರ್ನಾಟಕದ ಸುಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ  ರಾಜ್ಯಪಾಲ ತಾವರ್ ಚಾಂದ್ ಗೆಹ್ಲೋಟ ಅವರು ಸರ್ಪ ಸಂಸ್ಕಾರ ಸಂಕಲ್ಪ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಕ್ಷೇತ್ರ  ನಾಗ ದೋಷಕ್ಕೆ ಜ್ಯೋತಿಷಿ ಪರಿಹಾರ ಕೇಂದ್ರ ಎನಿಸಿದ್ದು, ಪತ್ನಿ ಅನಿತಾ ಗೆಹ್ಲೋಟ್ ಜೊತೆ ಆಗಮಿಸಿ ಸರ್ಪ ಸಂಸ್ಕಾರ ಕ್ರಿಯೆ ನಡೆಸಿದ್ದಾರೆ,

ಸರ್ಪ ಸಂಸ್ಕಾರ ನಡೆಸುವವರು ದೇವಸ್ಥಾನ ಪ್ರವೇಶಿಸುವಂತಿಲ್ಲ. ಹೀಗಾಗಿ ದೇವಸ್ಥಾನದ ಹೊರಗಿನಿಂದಲೇ ಕೈ ಮುಗಿದು ಯಾಗ ಶಾಲೆಯಲ್ಲಿ ಸಂಕಲ್ಪ ನೆರವೇರಿಸಿದ್ದಾರೆ. ಶುಕ್ರವಾರ ಮುಂಜಾನೆ ಸರ್ಪ ಸಂಸ್ಕಾರದ ಪೂರ್ಣ ವಿಧಿವಿದಾನದಲ್ಲಿ ಭಾಗಿಯಾಗಲಿದ್ದಾರೆ. 

Tap to resize

Latest Videos

ರಾಜ್ಯಪಾಲರ ಭೇಟಿಯ ಉದ್ದೇಶ ಗೌಪ್ಯವಾಗಿ ಇಡಲಾಗಿತ್ತು.  ದೇವರ ದರ್ಶನಕ್ಕೆ ಆಗಮಿಸಿ ಸರ್ಕಾರದ ಫಲಾನುಭವಿಗಳ ಜೊತೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ರಾ ಬಿಜೆಪಿ ಹಿರಿಯ ನಾಯಕ? ಕುತೂಹಲದ ಹೇಳಿಕೆ

ಶೇಷ ಪರ್ವತದ ರಕ್ಷೆಯಲ್ಲಿ ನಿಂತ ಸುಬ್ರಹ್ಮಣ್ಯ ದೇವಾಲಯದ ವಿಶೇಷಗಳಿವು: ನಾಗ ದೋಷ, ಸರ್ಪಹತ್ಯೆ, ಸಂಸ್ಕಾರ, ಮಗುವಾಗಲು ಸಮಸ್ಯೆ, ಮದುವೆಯಾಗಲು ಸಮಸ್ಯೆ- ಹೀಗೇ ಬಹುತೇಕ ಸಮಸ್ಯೆಗಳಿಗೆ ಜ್ಯೋತಿಷಿಗಳು ಸಲಹೆ ಮಾಡೋದು ಸುಬ್ರಹ್ಮಣ್ಯ(Subrahmanya)ಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕೆಂದು. ಕರ್ನಾಟಕ(Karnataka)ದ ಪ್ರಮುಖ ದೇವಾಲಯಗಳಲ್ಲೊಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ಕೆಲ ಆಸಕ್ತಿಕರ ಮಾಹಿತಿಗಳನ್ನಿಲ್ಲಿ ಕೊಡಲಾಗಿದೆ. 

ನಾಗದೋಷ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಮುಖ್ಯವಾಗಿ ಹೆಸರಾಗಿರುವುದೆ ನಾಗ ದೋಷ ಸಂಬಂಧಿ ಪೂಜೆಗಳಿಗಾಗಿ. ಅದರಲ್ಲೂ ಆಶ್ಲೇಷ ಬಲಿ ಹಾಗೂ ಸರ್ಪ ಸಂಸ್ಕಾರ ಇಲ್ಲಿ ನಡೆಸಿದಾಗ ಮಾತ್ರ ನಿಜವಾದ ಫಲ ಸಿಗುವುದು ಎಂಬ ನಂಬಿಕೆ ಇದೆ. ಒಳ್ಳೆಯ ಹಾವನ್ನು ಸಾಯಿಸಿದರೆ, ಅಥವಾ ಅದು ಸತ್ತು ಬಿದ್ದಿದ್ದನ್ನು ನೋಡಿದರೆ ಅದಕ್ಕೆ ಸಂಪೂರ್ಣ ಸಂಸ್ಕಾರ ಕ್ರಿಯೆ ಮಾಡಲೇಬೇಕು. ಇಲ್ಲದಿದ್ದಲ್ಲಿ ಸರ್ಪಹತ್ಯೆ ದೋಷ ಉಂಟಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಸರ್ಪ ಸಂಸ್ಕಾರ ನಡೆಸಲಾಗುತ್ತದೆ. 

ಪುರಾಣ
ಸುಮಾರು 5000 ವರ್ಷಗಳ ಹಿಂದೆ ಸುಬ್ರಹ್ಮಣ್ಯ ದೇವಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಪುರಾಣದ ಕತೆಯಂತೆ, ಪವಿತ್ರವಾದ ಸರ್ಪವೆನಿಸಿರುವ ವಾಸುಕಿ ಹಾಗೂ ಇತರೆ ಹಾವುಗಳಿಗೆ ಗರುಡನು ಬೆದರಿಕೆ ಹಾಕಲು ಸುಬ್ರಹ್ಮಣ್ಯನು ಇಲ್ಲಿ ಸುರಕ್ಷಿತ ಸ್ಥಳ ನೀಡಿ ಕಾಪಾಡಿದನಂತೆ. ಸುಬ್ರಹ್ಮಣ್ಯನೆಂದರೆ ಕಾರ್ತಿಕೇಯನೇ ಆಗಿದ್ದಾನೆ. 

Karnataka Coastal Districts Rain; ಮಹಾಮಳೆಗೆ ಬೆಚ್ಚಿಬಿದ್ದ ಕರಾವಳಿ, ರೈಲು ಸಂಚಾರ ಬಂದ್!

ಕುಮಾರ ಪರ್ವತ (Kumara Parvatha)
ಕರ್ನಾಟಕದ ಅತಿ ಕಷ್ಟದ ಚಾರಣ ಎಂಬ ಹಿರಿಮೆಗೆ ಪಾತ್ರವಾಗಿರುವ, ಚಾರಣಿಗರ ಕನಸಿನ ಸ್ಥಳವಾಗಿರುವ ಕುಮಾರ ಪರ್ವತವು ದೇವಾಲಯದ ಹಿನ್ನೆಲೆಯಲ್ಲಿ ನಿಂತಿದೆ. ಈ ಶೇಷ ಪರ್ವತ ಹಾಗೂ ದೇವಾಲಯವನ್ನು ಒಟ್ಟಾಗಿ ನೋಡಿದಾಗ, ಸರ್ಪವು ಸುಬ್ರಹ್ಮಣ್ಯ ದೇವಾಲಯಕ್ಕೆ ಕಾವಲಾಗಿ ನಿಂತಂತೆ ಭಾಸವಾಗುತ್ತದೆ. ಈ ಬೆಟ್ಟವು ಆರು ತಲೆಗಳ ಹಾವಿನ ಹಾಗೆ ಕಾಣುವುದರಿಂದ ಇದಕ್ಕೆ ಶೇಷ ಪರ್ವತವೆಂಬ ಹೆಸರಿದೆ. 

ಕುಕ್ಕೆ(Kukke)
ದಕ್ಷಿಣ ಕನ್ನಡದ  ಕಡಬ ತಾಲೂಕಿನಲ್ಲಿ ಹಸಿರಾದ ಕಾಡು ಹಾಗೂ ಪರ್ವತಗಳ ನಡುವೆ ಸುಬ್ರಹ್ಮಣ್ಯವಿದೆ. ಒಂದು ಕಾಲದಲ್ಲ ಶ್ರೀ ಕ್ಷೇತ್ರಕ್ಕೆ ಕುಕ್ಕೆ ಎಂಬ ಹೆಸರಿತ್ತು. ಹಾಗಾಗಿ, ಇಂದಿಗೂ ಕುಕ್ಕೆ ಸುಬ್ರಹ್ಮಣ್ಯ ಎಂಬ ಎರಡೂ ಹೆಸರನ್ನು ಬಳಸಿ ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಆದಿ ಶಂಕರಾಚಾರ್ಯರು ಉಳಿದಿದ್ದರು ಎಂಬ ಪ್ರತೀತಿ ಇದೆ. 

ಧಾರಾ ನದಿ (Dhara river)
ಸುಬ್ರಹ್ಮಣ್ಯ ಕ್ಷೇತ್ರವು ಧಾರಾ ನದಿಯ ಪುಣ್ಯ ತಟದಲ್ಲಿದೆ. ಧಾರಾ ನದಿಯ ಮೂಲವು ಕುಮಾರ ಪರ್ವತವಾಗಿದೆ. ಹಾಗಾಗಿ, ಇದಕ್ಕೆ ಕುಮಾರ ಧಾರಾ ಎಂದೂ ಕರೆಯಲಾಗುತ್ತದೆ. 
 
ಗರುಡಗಂಬ (Garuda Pillar)
ದೇವಾಲಯಕ್ಕೆ ಪ್ರವೇಶಿಸುತ್ತಿದ್ದಂತೆ, ಗರ್ಭಗುಡಿ ಹಾಗೂ ಮುಖ್ಯದ್ವಾರದ ನಡುವೆ ಬೆಳ್ಳಿಯ ಗರುಡಗಂಬವನ್ನು ಕಾಣಬಹುದು. ಗರ್ಭಗುಡಿಯೊಳಗಿರುವ ವಾಸುಕಿಯ ಉಸಿರಾಟದಿಂದ ಹೊಮ್ಮುವ ವಿಷಗಾಳಿಯಿಂದ ಭಕ್ತರನ್ನು ರಕ್ಷಿಸುವ ಸಲುವಾಗಿ ಈ ಗರುಡಗಂಬ ನಿಲ್ಲಿಸಲಾಗಿದೆ.

ಮೃತ್ತಿಕೆ
ಇಲ್ಲಿನ ಮುಖ್ಯ ಗರ್ಭಗುಡಿ(sanctum)ಯನ್ನು ಕೇರಳ(Kerala) ಮಾದರಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಪ್ರಸಾದದ ಒಂದು ವಿಶೇಷವೆಂದರೆ ಹುತ್ತದ ಮಣ್ಣಾದ ಮೃತ್ತಿಕೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಪ್ರತಿ ದಿನ ಬರುವ ಎಲ್ಲ ಭಕ್ತರಿಗೂ ಪ್ರಸಾದ ಭೋಜನವಿರುತ್ತದೆ. 

click me!