Vijayapura; ದುಬೈನಲ್ಲಿ ಕೆಲಸ ಮಾಡಬೇಕು ಅನ್ನೋರು ಎಚ್ಚರ...ಎಚ್ಚರ..!

By Suvarna News  |  First Published Jun 30, 2022, 5:46 PM IST
  •  ಎಜೆಂಟರನ್ನ ನಂಬಿ ದುಬೈಗೆ ಕೆಲಸಕ್ಕೆ ತೆರಳುವವರು ಹುಷಾರ್..!‌
  •  "ದುಬೈ ಜಾಬ್ ಹೆಸ್ರಲ್ಲಿ ಮೋಸದ ಜಾಲ"..!
  •  ದುಬೈಗೆ ಕೆಲಸಕ್ಕೆ ಹೋದ್ರೆ ಲೈಪ್‌ ಸೆಟ್ಲ್‌ ಅನ್ನೋರು ಈ ಸ್ಟೋರಿ ಓದಿ..!

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜೂನ್‌ 30) : ದುಬೈ ಸೇರಿದಂತೆ ಅರಬ್‌ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಕೈತುಂಬಾ ಗಳಿಕೆ ಮಾಡಬೇಕು ಅನ್ನೋರು ಈ ಸ್ಟೋರಿಯನ್ನ ಓದಲೇ ಬೇಕು. ದುಬೈನಲ್ಲಿ ಕೆಲಸ ಸಿಕ್ಕರೇ ಲೈಪ್‌ ಸೆಟ್ಲ್‌ ಅಂದುಕೊಂಡವರು ಎಚ್ಚರಿಕೆಯಿಂದ ಈ ಇದನ್ನ ಓದಿ.  ದುಬೈನಲ್ಲಿ ಕೆಲಸ ಅಂತಾ ಎಜೆಂಟ್‌ ಒಬ್ಬನನ್ನ ನಂಬಿಕೊಂಡು ಹೋದ ವಿಜಯಪುರದ ಇಬ್ಬರು ಯುವಕರು ವಿದೇಶದಲ್ಲಿ ಅಕ್ಷರಶಃ ಪರದಾಟ ನಡೆಸಿದ್ದಾರೆ. ಅಲ್ಲದೆ ಲಕ್ಷಾಂತರ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

Tap to resize

Latest Videos

ದುಬೈ ಜಾಬ್ ಹೆಸ್ರಲ್ಲಿ ಮೋಸದ ಜಾಲ!
ಯಾರಿಗೆ ಆದ್ರು ಕೈ ತುಂಬ ಸಂಬಳ ಬರುವ ಕಡೆ ಕೆಲಸ ಮಾಡಬೇಕು. ಅದ್ರಲ್ಲು ದುಬೈ ನಂದ ಅರಬ್‌ ರಾಷ್ಟ್ರಗಳಲ್ಲಿ ಕೆಲಸ ಮಾಡಿದ್ರೆ ಕೈ ತುಂಬ ಹಣ ಸಿಗುತ್ತೆ ಅಂತಾ ಬಹಳ ಜನರು ಹೋಗೋದುಂಟು. ಆದ್ರೀಗ ಕೆಲ ಖದೀಮರು ದುಬೈ ಕೆಲಸದ ಹೆಸ್ರಲ್ಲಿ ಮೋಸದ ಜಾಲವನ್ನ ಹೆಣೆದಿದ್ದಾರೆ. ಈ ಟ್ರ್ಯಾಪ್‌ ನಲ್ಲಿ ಸಿಕ್ಕಿ ಹಾಕಿಕೊಳ್ಳೊ ಯುವಕರು ಹಣ ಕಳೆದುಕೊಂಡು, ಕೆಲಸವು ಇಲ್ಲದೆ ಮನೆಗೆ ವಾಪಾಸ್‌ ಆಗ್ತಿದ್ದಾರೆ.

ಲೋನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವರೇ ಎಚ್ಚರ, ಯಾಮಾರಿದ್ರೆ ನಿಮ್ಮ ಜೀವಕ್ಕೆ ಆಪತ್ತು!

ದುಬೈನಲ್ಲಿ ಕೆಲಸಕ್ಕೆ ಹೋದವರು ಪರದಾಟ!
ವಿದೇಶಗಳಲ್ಲಿ ಕೆಲಸ ಮಾಡಿದ್ರೆ ಲೈ ಸೆಟ್ಲ್‌ ಅನ್ನೋ ಭಾವನೆ ಬಹುತೇಕರಲ್ಲಿದೆ. ಹೀಗಾಗಿಯೇ ಬಹಳ ಜನ ದುಬೈ, ಕುವೈತ್‌, ಕತಾರ್‌ ಸೇರಿದಂತೆ ಅರಬ್‌ ರಾಷ್ಟ್ರಗಳಿಗೆ ಕೆಲಸಕ್ಕೆ ತೆರಳುತ್ತಾರೆ. ಅಲ್ಲಿ ಕೆಲಸಕ್ಕಾಗಿ ಹೋಗಲು ತಯಾರಾಗಿರೋರನ್ನ ಬಿಡೋದಕ್ಕಾಗಿಯೇ ಕೆಲ ಎಜೆಂಟರುಗಳಿದ್ದಾರೆ. ಆದ್ರೆ ಇದೆ ಎಜಂಟರನ್ನ ನಂಬಿಕೊಂಡು ದುಬೈಗೆ ಹೋದ ವಿಜಯಪುರ ನಗರದ ಯುವಕರಿಬ್ಬರು ಪರದಾಡಿದ್ದಾರೆ. ಕೈಲಿರೋ ಹಣವನ್ನ ಕಳೆದುಕೊಂಡು ದುಬೈನಲ್ಲಿ ಸಂಕಷ್ಟ ಅನುಭವಿಸಿ, ಈಗ ಭಾರತಕ್ಕೆ ವಾಪಾಸ್‌ ಆಗಿದ್ದಾರೆ. ನಗರದ ನಿವಾಸಿಗಳಾದ ರಮೇಶ ರಾಠೋಡ್‌, ಸಾಗರ ರಾಠೋಡ್‌ ದುಬೈ ಕೆಲಸಕ್ಕೆ ಹೋಗಲು ಎಜೆಂಟನನ್ನ ಭೇಟಿ ಮಾಡಿದ್ದಾರೆ. ವಿಜಯಪುರ ನಗರದವನೇ ಆದ ಮುಕ್ತಾಂ ಮುಜಾವರ್‌ ತಾನು ಎಜೆಂಟ್‌ ನೆಂದು ಪರಿಚಯಿಸಿಕೊಂಡು ಒಂದು ವರೆ ಲಕ್ಷ ಪಡೆದುಕೊಂಡಿದ್ದಾನೆ. ಬಳಿಕ ಪಾಸ್ ಪೋರ್ಟ್‌ ನೀಡಿ ದುಬೈನ ಶಾರ್ಜಾಗೆ ಕಳುಹಿಸಿದ್ದಾನೆ.

ಟೂರಿಸ್ಟ್‌ ಪಾಸ್‌ ಪೋರ್ಟ್‌ ನೀಡಿದ ಖದೀಮ ಎಜೆಂಟ್!
ರಮೇಶ್‌ ಹಾಗೂ ಸಾಗರ್‌ ರಾಠೋಡ್‌ ನಿಂದ ಲಕ್ಷ-ಲಕ್ಷ ಹಣ ಪಡೆದ ಎಜೆಂಟ್ ಮುಕ್ತಾಂ ಮುಜಾವರ್‌ ಟೂರಿಸ್ಟ್‌ ಪಾಸ್‌ ಪೋರ್ಟ್‌ ನೀಡಿ ಯಾಮಾರಿಸಿದ್ದಾನೆ. ಇದನ್ನ ತಿಳಿಯದೆ ದುಬೈನ ಶಾರ್ಜಾಗೆ ತೆರಳಿದ ರಮೇಶ್‌ ಹಾಗೂ ಸಾಗರ್‌ ಅಲ್ಲಿ ಇದು ಟೂರಿಸ್ಟ್‌ ಪಾಸ್‌ ಪೋರ್ಟ್‌, ಇದನ್ನ ಇಟ್ಕೊಂಡು ಕೆಲಸ ಮಾಡೋಕೆ ಆಗೋಲ್ಲ ಅಂತಾ ಗೊತ್ತಾಗಿದೆ. ಇದರಿಂದ ಕಂಗೆಟ್ಟ ಇಬ್ಬರು ಅಲ್ಲಿ ಇರಲು ಆಗದೇ, ಬರಲು ಆಗದೆ ಪರದಾಡಿದ್ದಾರೆ.

ತುಮಕೂರಿನಲ್ಲಿ ತಲೆಎತ್ತಿದೆ ನಕಲಿ ಚೈನ್ ಲಿಂಕ್ ಕಂಪನಿ, ಉದ್ಯೋಗದ ಹುಡುಕಾಟದಲ್ಲಿರುವವರೇ ಟಾರ್ಗೆಟ್‌!

15 ದಿನಗಳ ಕಾಲ ಶಾರ್ಜಾನಲ್ಲಿ ಪರದಾಟ!
ದುಬೈನಲ್ಲಿ ಎಜೆಂಟ್‌ ಮೋಸ ಮಾಡಿದ ವಿಷಯ ಗೊತ್ತಾದ ಮೇಲೆ ರಮೇಶ ಹಾಗೂ ಸಾಗರ್‌ ಎಜೆಂಟ್‌ ಮುಕ್ತಾಂ ಮುಜಾವರ್‌ ನನ್ನ ಸಂಪರ್ಕಿಸೋದಕ್ಕೆ ಪ್ರಯತ್ನಿಸಿದ್ದಾರೆ. ಸತತ 15 ದಿನಗಳ ಕಾಲ ಮುಕ್ತಾಂನನ್ನ ಸಂಪರ್ಕಿಸಲು ಯತ್ನಿಸಿ ವಿಫಲರಾಗಿದ್ದಾರೆ. ಬಳಿಕ ಅಲ್ಲಿಂದ ಯಾರದ್ದೋ ಸಹಾಯದೊಂದಿಗೆ ಭಾರತಕ್ಕೆ ವಾಪಾಸ್‌ ಆಗಿದ್ದಾರೆ.

ಆಸ್ಪತ್ರೆ ಡ್ಯೂಟಿ ಅಂತಾ ಹೇಳಿ ಯಾಮಾರಿಸಿದ ಎಜೆಂಟ್!
ಶಾರ್ಜಾನಲ್ಲಿ ಆಸ್ಪತ್ರೆಯಲ್ಲಿ ಡ್ಯೂಟಿ ಇರುತ್ತೆ ತಿಂಗಳಿಂದ ಲಕ್ಷದ ವರೆಗು ಸಂಬಳ ಸಿಗುತ್ತೆ ಅಂತಾ ಎಜೆಂಟ್‌ ಮುಕ್ತಾಂ ಯಾಮಾರಿಸಿದ್ದ. ಅಲ್ಲಿ ಕೆಲಸಕ್ಕೆ ಹಚ್ಚಬೇಕಾದ್ರೆ ನನಗೆ ಇಂತಿಷ್ಟು ಹಣ ಬೇಕು ಅಂತಾನು ಲಕ್ಷಕ್ಕು ಅಧಿಕ ಹಣವನ್ನ ವಸೂಲಿ ಬೇರೆ ಮಾಡಿದ್ದನಂತೆ. ಅಲ್ಲಿ ಕೆಲಸ ಮಾಡಲು ಹೋಗುವವರಿಗೆ ನೀಡಬೇಕಿದ್ದ ಪಾಸ್‌ಪೋರ್ಟ್‌ ಬದಲಿಗೆ ಟೂರಿಸ್ಟ್‌ ಪಾಸ್‌ ಪೋರ್ಟ್‌ ನೀಡಿದ ಯಾಮಾರಿಸಿದ್ದಾನೆ. ಕೆಲಸಕ್ಕೆಂದು ಹೋದ ಇಬ್ಬರು ಯುವಕರು ಅಲ್ಲಿನ ಕಂಪನಿಯನ್ನ ಸಂಪರ್ಕಿಸಿದಾಗ ಈ ವಿಚಾರ ಬಯಲಾಗಿದೆ..

ವಿಜಯಪುರದಲ್ಲಿ ದೂರು ನೀಡಿದ ಯುವಕರು!
ದುಬೈ ನಲ್ಲಿ 15 ದಿನ ಪರದಾಡಿದ ಸಾಗರ್‌ ಹಾಗೂ ರಮೇಶ ವಿಜಯಪುರಕ್ಕೆ ವಾಪಾಸ್‌ ಆಗಿದ್ದಾರೆ. ಅತ್ತ ಕೆಲಸವು ಇಲ್ಲ, ಕೊಟ್ಟ ಹಣವು ಹೋಯ್ತು ಅಂತಾ ಕಂಗಾಲಾಗಿದ್ದಾರೆ. ತಮಗೆ ಶಾರ್ಜಾ ಆಸ್ಪತ್ರೆಯಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ನಂಬಿಸಿ ಹಣ ಪಡೆದು ಮೋಸ ಮಾಡಿದ ಮುಕ್ತಾಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಈಗ ಇಬ್ಬರು ಯುವಕರು ಆಗ್ರಹಿಸುತ್ತಿದ್ದಾರೆ.

ಎಜೆಂಟರನ್ನ ನಂಬಿ ಮೋಸ ಹೋಗಬೇಡಿ!
ಇನ್ನು ವಿಜಯಪುರದಲ್ಲಿ ಅಲ್ಲಲ್ಲಿ ದುಬೈನಲ್ಲಿ ಕೆಲಸ ಕೊಡಿಸುತ್ತೇವೆ ಎನ್ನುವ ಎಜೆಂಟ ಗ್ಯಾಂಗ್‌ ಗಳು ಕೆಲಸ ಮಾಡ್ತಿವೆ. ದುಬೈ ಕೆಲಸದ ನೆಪದಲ್ಲಿ ಮೋಸ ಮಾಡ್ತಿವೆ. ಹೀಗಾಗಿ ಯಾರೆ ವಿದೇಶಗಳಲ್ಲಿ ಕೆಲಸ ಮಾಡಬೇಕು ಅನ್ನೋರು ಅಧಿಕೃತ ಕಂಪನಿಗಳಿಂದ, ಅಧಿಕೃತ ವ್ಯಕ್ತಿಗಳಿಂದಲೇ ಸಂಪರ್ಕ ಸಾಧಿಸಿ ಕೆಲಸ ಪಡೆದುಕೊಳ್ಳಬೇಕು ಅಂತಾ ವಿಜಯಪುರ ಎಸ್ಪಿ ಹೆಚ್‌ ಡಿ ಆನಂದಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಮೋಸ ಮಾಡಿದ ಮುಕ್ತಾ ಮುಜಾವರ್‌ ಗಾಗಿ ಹುಡುಕಾಟ ನಡೆಸುತ್ತಿರೋದಾಗಿ ಹೇಳಿದ್ದಾರೆ.

click me!