*ಚಿಕ್ಕಕಲ್ಯಾ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ
*ಜಿಟಿಟಿಸಿ - ಬಹಳ ಉಪಯುಕ್ತವಾಗಿರುವ ತಾಂತ್ರಿಕ ಸಂಸ್ಥೆ: ಬೊಮ್ಮಾಯಿ
*ಟಾಟಾ ಮೋಟಾರ್ಸ್ ಸಂಸ್ಥೆಯಲ್ಲಿ ಉದ್ಯೋಗ ಬಗ್ಗೆ ಸಿಎಂ ಮಾತು
ಮಾಗಡಿ(ಜ. 4): ನಿಗದಿತ ಸಮಯದಲ್ಲಿ ಯೋಜನೆಗಳನ್ನು ಮುಗಿಸದಿದ್ದರೆ ಯೋಜನೆಯ ಮೊತ್ತ ಹೆಚ್ಚಾಗುತ್ತದೆ. ಕಾಲಮಿತಿಯೊಳಗೆ ಪೂರ್ಣಗೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳಬೇಕು. ಸಮಯ ಮತ್ತು ಹಣ ಸದುಪಯೋಗ ಪಡಿಸಿಕೊಂಡು ಯೋಜನೆಗಳನ್ನು ಪೂರ್ಣಗೊಳಿಸಿದಾಗ ಜನರಿಗೆ ಮುಟ್ಟಿಸಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basvaraj Bommai) ಹೇಳಿದರು.ತಾಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ ಆಗಿದೆ.
ಯಾರು ಹೆಚ್ಚು ಉದ್ಯೋಗವನ್ನು ಯುವಕರಿಗೆ ಕೊಡುವ ಕೈಗಾರಿಕೆಗಳನ್ನು ಪ್ರಾರಂಭ ಮಾಡುತ್ತಾರೊ ಅಂತಹ ಉದ್ಯಮಿಗಳಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಲಿದೆ. ಇದರಿಂದ ನಮ್ಮ ರಾಜ್ಯದ ಜಿಡಿಪಿಯೂ ಹೆಚ್ಚಾಗುತ್ತದೆ. ಇಂತಹ ಆಶಯಗಳನ್ನು ಇಟ್ಟುಕೊಂಡು ಮುಂದಿನ ಬಜೆಟ್‌ನಲ್ಲಿ ಯೋಜನೆಗೆ ಹಣ ಮೀಸಲಿಡುತ್ತೇವೆ ಎಂದು ತಿಳಿಸಿದರು. ಜಿಟಿಟಿಸಿ - ಬಹಳ ಉಪಯುಕ್ತವಾಗಿರುವ ತಾಂತ್ರಿಕ ಸಂಸ್ಥೆ. ಇಲ್ಲಿ ಪ್ರಮಾಣ ಪತ್ರ ಪಡೆದರೆ ಶೇ 100ರಷ್ಟುಕೆಲಸ ಸಿಗುವುದು ಖಾತ್ರಿ. ಆ ವಿಶ್ವಾಸಾರ್ಹತೆ ಜಿಟಿಟಿಸಿಗೆ ಇದೆ. ತಾವು ಖುದ್ದು ಎಂಜಿನಿಯರಿಂಗ್ ಕಲಿತ ನಂತರ 6 ತಿಂಗಳ ಕಾಲ ಜಿಟಿಟಿಸಿ ನಲ್ಲಿ ತರಬೇತಿ ಪಡೆಡಿದ್ದು ಹಾಗೂ ಟಾಟಾ ಮೋಟಾರ್ಸ್ ಸಂಸ್ಥೆಯಲ್ಲಿ ಉದ್ಯೋಗ ದೊರಕಿದ್ದ ಬಗ್ಗೆ ಬೊಮ್ಮಾಯಿರವರು ಸ್ಮರಿಸಿದರು.
ಇದನ್ನೂ ಓದಿ: DKS vs Ashwath Narayan ತಮ್ಮೆದುರಲ್ಲೇ ನಡೆದ ಅಶ್ವತ್ಥ್ ನಾರಾಯಣ-ಡಿಕೆ ಸುರೇಶ್ ಗಲಾಟೆ ಬಗ್ಗೆ ಸಿಎಂ ಹೇಳಿದ್ದಿಷ್ಟು
ಸರ್ಕಾರ 50 ಕೋಟಿ ರು.ಗಳಿಗಿಂತ ಹೆಚ್ಚು ಅನುದಾನದಲ್ಲಿ ಜಿಟಿಟಿಸಿಗಳನ್ನು ಉನ್ನತೀಕರಿಸುತ್ತಿದೆ. ಹಿಂದುಳಿದ ತಾಲೂಕುಗಳಲ್ಲಿಯೂ ಈ ಸಂಸ್ಥೆಗಳನ್ನು ತೆರೆಯಬೇಕು. ಈ ಭಾಗದ ಮಕ್ಕಳ ಬದುಕಿನಲ್ಲಿಯೂ ಜಿಟಿಟಿಸಿ ಯಶಸ್ಸಿನ ಮೆಟ್ಟಿಲಾಗಲಿ ಎಂದು ಆಶಿಸಿದರು.
ನೀರಾವರಿ ಯೋಜನೆಗಳು:
ಮಂಚನಬೆಲೆಯಿಂದ ಈ ಭಾಗದ 3 ತಾಲೂಕುಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ ಬೇಡಿಕೆ ಇದೆ. ಜಲ… ಜೀವನ್ ಮಿಷನ್ ಯೋಜನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸು. ಪ್ರತಿಯೊಂದು ಗ್ರಾಮದ ಪ್ರತಿಯೊಂದು ಮನೆಗೂ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಸಾಕಾರಗೊಳಿಸಲು ಹಣಕಾಸಿನ ನೆರವನ್ನು ನೀಡಿದ್ದಾರೆ. ಇದು ಮಾಡಲು ಕೇವಲ ಒಬ್ಬ ಮುತ್ಸದ್ದಿಗೆ ಮಾತ್ರ ಸಾಧ್ಯ ಎಂದರು.
ಇದನ್ನೂ ಓದಿ: Coronavirus Update: ಕೊರೋನಾ ಹೆಚ್ಚಳ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ
ಹೇಮಾವತಿ ಜಲಾಶಯದಿಂದ ನೀರಿನ ಹಂಚಿಕೆ, ಟಿಬಿಸಿ ತುಮಕೂರು, ನಾಗಮಂಗಲ ಮತ್ತು ಹಾಸನದ ಬ್ರಾಂಚ್ ಕಾಲುವೆಗಳ ಬಗ್ಗೆ ಮಾಹಿತಿ ಇದ್ದು, ನೀರಿನ ಹಂಚಿಕೆ ಬಗ್ಗೆ ಅಮೂಲಾಗ್ರವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳಾಗಿವೆ. ಇವುಗಳ ಪ್ರಗತಿ ಪರಿಶೀಲನೆ ಮಾಡಿ ಈ ಯೋಜನೆಗಳ ಕಟ್ಟಕಡೆಯ ತಾಲೂಕುಗಳ ಸಮುದಾಯಗಳನ್ನು ಮುಟ್ಟಿಸಲು ಕಾಯಕಲ್ಪವನ್ನು ದೊರಕಿಸಲು ಪ್ರಯತ್ನಿಸುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದರು.ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಡಾ. ಕೆ. ಸುಧಾಕರ್ , ಬೈರತಿ ಬಸವರಾಜ, ಸಂಸದ ಡಿ.ಕೆ.ಸುರೇಶ್ , ಶಾಸಕ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ಅಭಿವೃದ್ಧಿ, ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ
ಇನ್ನು ತಮ್ಮ ಎದುರಲ್ಲೇ ಸಚಿವ ಡಾ, ಸಿಎನ್ ಅಶ್ವತ್ಥ ನಾರಾಯಣ (Dr CN Ashwath Narayan) ಹಾಗೂ ಡಿಕೆ ಸುರೇಶ್(DK Suresh) ನಡುವೆ ಗಲಾಟೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ.ಜಿಲ್ಲೆಯ ಅಭಿವೃದ್ಧಿ, ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ. ಈ ಘಟನೆಗಳು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲ್ಲ. ಚುನಾವಣೆಗೆ 1 ತಿಂಗಳಿರುವಾಗ ರಾಜಕಾರಣ ಮಾಡೋಣ ಎಂದರು.
ರಾಮನಗರ(Ramanagara) ಜಿಲ್ಲೆ ಕರ್ನಾಟಕಕ್ಕೆ ಮಾದರಿಯಾಗುವ ಜಿಲ್ಲೆ. ಅಭಿಮಾನ, ಸಂತಸದಿಂದ ರಾಮನಗರಕ್ಕೆ ಬಂದಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಚುನಾವಣೆಯ 1 ತಿಂಗಳು ಮಾತ್ರ ರಾಜಕಾರಣ ಮಾಡೋಣ. ರಾಮನಗರ ಜಿಲ್ಲೆಗೆ ಬಂದು ಪ್ರಚಾರ ಪಡೆಯುವ ಅಗತ್ಯವಿಲ್ಲ. ರಾಮನಗರ ಜಿಲ್ಲೆಗೆ ಕೊಡುಗೆ ಕೊಡಲು ಇಲ್ಲಿಗೆ ಬಂದಿದ್ದೇನೆ. ಹಲವಾರು ವಿಚಾರಗಳು ನನೆಗುದಿಗೆ ಬಿದ್ದಿರುವುದು ಗೊತ್ತಿದೆ. ಜನರು ರಾಜಕಾರಣ ಮಾಡುವುದನ್ನು ಕಲಿಯಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.